ರೋಟರಿ ಕ್ಲಬ್ ಕಾರ್ಕಳ ಹಾಗೂ ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಇವರ ಸಂಯುಕ್ತ ಆಶ್ರಯದಲ್ಲಿ ಇಂಟರ್ ಡಿಸ್ಟ್ರಿಕ್ಟ್ ಜಾಯಿಂಟ್ ಕ್ಲಬ್ ಮೀಟಿಂಗ್ ಮೂಡುಬಿದಿರೆಯ ಟೆಂಪಲ್ ಟೌನ್ ಆಡಿಟೋರಿಯಂನಲ್ಲಿ ನಡೆಯಿತು.

ಕಾರ್ಕಳ ರೋಟರಿ ಕ್ಲಬ್‌ನ ಅಧ್ಯಕ್ಷರಾದ ರೋ. ಕೆ. ನವೀನ್ ಚಂದ್ರ ಶೆಟ್ಟಿ ಅವರು ಕ್ಲಬ್‌ನ 62 ವರ್ಷಗಳ ಇತಿಹಾಸ, ಸಮಾಜಮುಖಿ ಸೇವಾ ಚಟುವಟಿಕೆಗಳು, ಆರೋಗ್ಯ, ಶಿಕ್ಷಣ ಹಾಗೂ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಕೈಗೊಂಡಿರುವ ವಿವಿಧ ಯೋಜನೆಗಳ ಕುರಿತು ವಿವರಿಸಿದರು.
ಜೋನಲ್ ಲೆಫ್ಟಿನೆಂಟ್ ಜಾನ್ ಆರ್. ಡಿ. ಸಿಲ್ವ ಅವರು ಕಾರ್ಕಳ ಕ್ಲಬ್‌ನ ಸದಸ್ಯರನ್ನು ಪರಿಚಯಿಸಿದರು.
ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಅಧ್ಯಕ್ಷರಾದ ರೋ. ಹರೀಶ್ ಎಮ್ ಕೆ . ಅವರು ತಮ್ಮ ಕ್ಲಬ್‌ನ ಚಟುವಟಿಕೆಗಳು ಮತ್ತು ಸಾಧನೆಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಎರಡೂ ಕ್ಲಬ್‌ಗಳ ವತಿಯಿಂದ ಸೌಹಾರ್ದ ಮತ್ತು ಸ್ನೇಹದ ಸಂಕೇತವಾಗಿ ರೋಟರಿ ಫ್ಲ್ಯಾಗ್ ಎಕ್ಸ್‌ಚೇಂಜ್ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಡಿಸ್ಟ್ರಿಕ್ಟ್ 3181ರ ಜೋನ್-4ರ ಅಸಿಸ್ಟೆಂಟ್ ಗವರ್ನರ್ ರೋ. ಉಮೇಶ್ ರಾವ್ ಮಿಜಾರ್ ಹಾಗೂ ಡಿಸ್ಟ್ರಿಕ್ಟ್ 3182ರ ಜೋನ್-5ರ ಅಸಿಸ್ಟೆಂಟ್ ಗವರ್ನರ್ ರೋ. ವಿಘ್ನೇಶ್ ಶೆಣೈ ಉಪಸ್ಥಿತರಿದ್ದು, ಇಂತಹ ಜಂಟಿ ಸಭೆಗಳು ಎರಡು ಜಿಲ್ಲೆಗಳ ರೋಟರಿ ಸದಸ್ಯರ ನಡುವೆ ಉತ್ತಮ ಬಾಂಧವ್ಯ, ಪರಸ್ಪರ ಕಲಿಕೆ ಮತ್ತು ಸೇವಾ ಸಹಕಾರವನ್ನು ವೃದ್ಧಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಔಷಧೀಯ ಸಸ್ಯಗಳ ತಜ್ಞ ದಿನೇಶ್ ನಾಯಕ್ ಅವರು ಔಷಧೀಯ ಸಸ್ಯಗಳ ಮಹತ್ವ, ಅವುಗಳ ಸಂರಕ್ಷಣೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅವುಗಳ ಉಪಯೋಗಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು.
ಈ ಸಂದರ್ಭ ಎಕ್ಸಲೆಂಟ್ ಕಾಲೇಜಿನ ಚೇರ್‌ಮೆನ್ ಯುವರಾಜ್ ಜೈನ್ ದಂಪತಿ ಮತ್ತು ರಾಜೇಶ್ ಆರ್ ಕೋಟ್ಯಾನ್ ರವರವರು ಮಾಡಿದ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಎರಡೂ ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಕಾರ್ಕಳ ರೋಟರಿ ಕ್ಲಬ್‌ನ ಸುಮಾರು ೪೦ ಸದಸ್ಯರು ಕುಟುಂಬ ಸಮೇತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಸ್ರಿ ಶಾಲೆಯಲ್ಲಿ ‘ಒಂದು ಗಿಡ ಹೆತ್ತವರೊಂದಿಗೆ’ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ
