ಕಾರ್ಕಳ

ಕಾರ್ಕಳ ಬಿಜೆಪಿ ಕಛೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ

ಕಾರ್ಕಳ : ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಕಾರ್ಕಳ ಬಿಜೆಪಿ ಕಛೇರಿಯಲ್ಲಿ  ಆಚರಿಸಲಾಯಿತು.

ಕಾರ್ಕಳ ಕ್ಷೇತ್ರಾಧ್ಯಕ್ಷರಾದ ನವೀನ್ ನಾಯಕ್ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.

ಕ್ಷೇತ್ರಾಧ್ಯಕ್ಷರಾದ ನವೀನ್ ನಾಯಕ್ ಅಂಬೇಡ್ಕರ್ ಅವರ ಕುರಿತು ಮಾತನಾಡಿ, ಬಾಬಾ ಸಾಹೇಬ್ ಅವರು ಅತ್ಯಂತ ಕಡು ಬಡತನ ಮತ್ತು ಸಾಮಾಜಿಕ ಅಸಮಾನತೆಯ ನಡುವೆಯೂ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದ ಅವರ ಛಲ ಇಂದಿನ ಯುವಜನತೆಗೆ ಮಾದರಿ. ಅಸ್ಪೃಶ್ಯತೆ ಎಂಬ ಸಾಮಾಜಿಕ ಪಿಡುಗಿನ ವಿರುದ್ಧ ನಿರಂತರ ಹೋರಾಟ ಎಂದು ಮರೆಯುವಂತಿಲ್ಲ. ಆದರೆ ಇಂದು ನಾವು ಬಾಬಾಸಾಹೇಬ್ ಅಂಬೇಡ್ಕರ್ ಅವರ ವ್ಯಕ್ತಿತ್ವವನ್ನು ಸಂವಿಧಾನ ರಚನೆಗೆ ಸೀಮಿತಗೊಳಿಸಿ ನೋಡುತ್ತಿದ್ದೇವೆ. ಆದರೆ, ಅವರ ಜೀವಿತಾವಧಿಯಲ್ಲಿ ಅವರಿಗೆ ನೋವು ನೀಡಿ ರಾಜಕೀಯವಾಗಿ ಅತಿ ಹೆಚ್ಚು ಅಡ್ಡಿಪಡಿಸಿದ ಮತ್ತು ಅವಮಾನಿಸಿದ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆ ಎಂಬುದು ಮರೆಯಲಾಗದ ಸತ್ಯ ಎಂದು ತಿಳಿಸಿದರು. ಅಂಬೇಡ್ಕರ್ ಅವರು ಸಂಸತ್ತನ್ನು ಪ್ರವೇಶಿಸಬಾರದೆಂಬ ಉದ್ದೇಶದಿಂದ ಕಾಂಗ್ರೆಸ್ ಎರಡು ಬಾರಿ ಅವರ ವಿರುದ್ಧ ಬಲವಾದ ಅಭ್ಯರ್ಥಿಗಳನ್ನು ನಿಲ್ಲಿಸಿ ಅವರನ್ನು ಸೋಲಿಸಲು ಷಡ್ಯಂತ್ರ ರೂಪಿಸಿದ ಕೀರ್ತಿ ಕಾಂಗ್ರೆಸ್ಸಿಗರಿಗೆ ಸಲ್ಲುತ್ತದೆ. ಅಂಬೇಡ್ಕರ್ ಅವರು ನಿಧನರಾದಾಗ, ದೆಹಲಿಯಲ್ಲಿ ಅವರ ಅಂತ್ಯಸಂಸ್ಕಾರ ಮಾಡಲು ಅಂದಿನ ಕಾಂಗ್ರೆಸ್ ಸರ್ಕಾರ ಜಾಗ ನೀಡಲು ನಿರಾಕರಿಸಿತು ಎಂಬ ಗಂಭೀರ ಆರೋಪವು ಕಾಂಗ್ರೆಸ್ ಮೇಲಿದೆ. ಎಂಬುವುದು ನಾವು ಎಂದಿಗೂ ಮರೆಯಬಾರದ ಸತ್ಯ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಪಕ್ಷದ ವಕ್ತಾರರು, ನ್ಯಾಯವಾದಿಗಳಾದ ರವಿಂದ್ರ ಮೊಯ್ಲಿ, ಮಂಡಲ ಉಪಾಧ್ಯಕ್ಷರಾದ ಅನಂತ ಕೃಷ್ಣ ಶೆಣೈ, ನಗರ ಅಧ್ಯಕ್ಷರಾದ ನಿರಂಜನ್ ಜೈನ್, ಮಾಜಿ ಪುರಸಭಾ ಅಧ್ಯಕ್ಷರಾದ ಸುಮಾ ಕೇಶವ್, ಪುರಸಭಾ ಸದಸ್ಯರು, ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಶ್ರೀನಿವಾಸ್ ಕಾರ್ಲ, ಎಸ್ ಟಿ ಮೋರ್ಚಾ ಅಧ್ಯಕ್ಷರಾದ ಸಂಜೀವ ಮಾಳ ಹಾಗೂ ಪಕ್ಷದ ವಿವಿಧ ಮೋರ್ಚಾದ ಪದಾಧಿಕಾರಿಗಳು, ಸದಸ್ಯರು ಹಾಗೂ, ಪದಾಧಿಕಾರಿಗಳು, ಉಪಸ್ಥಿತರಿದ್ದರು.

Related posts

ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

Madhyama Bimba

ಮುದ್ರಾಡಿ: ದಾನಿಗಳಿಂದ ಕೊಡಮಾಡಲ್ಪಟ್ಟ ಕಂಪ್ಯೂಟರ್ ಮತ್ತು ಪ್ರಿಂಟರ್ ಹಸ್ತಾಂತರ

Madhyama Bimba

ನಾಳೆ (ಫೆ.08) ಕಾರ್ಕಳ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ರಜತ ಸಂಭ್ರಮ, ಸಾಮೂಹಿಕ ಬ್ರಹ್ಮೋಪದೇಶ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More