ಕಾರ್ಕಳ

ಕಾರ್ಕಳ ಪವಾಡ ಪುರುಷ ಸಂತ ಲಾರೆನ್ಸ್ ಬಸಿಲಿಕಾ, ಅತ್ತೂರು: 4ನೇ ದಿನದ ವಾರ್ಷಿಕ ಮಹೋತ್ಸವ

ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವದ ನಾಲ್ಕನೇ ದಿನದಂದು ಎರಡು ಪ್ರಮುಖ ಬಲಿಪೂಜೆಗಳು ನಡೆದವು. ಬೆಳಿಗ್ಗೆಯ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೋ ಅವರು ನೆರವೇರಿಸಿದರು. ಸಂಜೆಯ ಬಲಿಪೂಜೆಯನ್ನು ಅಜ್ಮಿರ್‌ನ ನೂತನ ಧರ್ಮಾಧ್ಯಕ್ಷರಾದ ಪರಮಪೂಜ್ಯ ಧರ್ಮಾಧ್ಯಕ್ಷ ಡಾ. ಜಾನ್ ಕಾರ್ವಾಲೋ ಅವರು ನೆರವೇರಿಸಿದರು. ತಮ್ಮ ಉಪದೇಶಗಳಲ್ಲಿ “ನಾನು ನಿಮ್ಮನ್ನು ಪ್ರೀತಿಸಿದ್ದೇನೆ” ಎಂಬ ಮಹೋತ್ಸವದ ಸಂದೇಶವನ್ನು ವಿವರಿಸಿ, ಕ್ರಿಸ್ತನ ನಿರ್ವ್ಯಾಜ ಪ್ರೀತಿಯನ್ನು ಅನುಭವಿಸಿ, ಅದನ್ನು ದೀನದಲಿತರಾದ ಸಹೋದರ ಸಹೋದರಿಯರೊಂದಿಗೆ ಹಂಚಿಕೊಳ್ಳುವ ಮೂಲಕ ವಿಸ್ತರಿಸುವ ಅಗತ್ಯವಿದೆ ಎಂದು  ಹೇಳಿದರು.


ಇತರ ಬಲಿಪೂಜೆಗಳನ್ನು ವಂ. ಸ್ಟೀವನ್ ಫೆನಾಂಡಿಸ್ (ಐಸಿವೈಎಂ ನಿರ್ದೇಶಕರು), ವಂ. ಅನಿಲ್ ಲೋಬೋ (ಸುಂಡೇಕೆರೆ, ಚಿಕ್ಕಮಗಳೂರು), ವಂ. ಕ್ಲಾನಿ ಡಿಸೋಜಾ (ಗ್ಲಾಡ್ಸಮ್ ಹೋಮ್, ಮಂಗಳೂರು), ವಂ. ಸುನಿಲ್ ಪಿಂಟೊ (ಕಡಬ ಶಾಲೆಯ ಪ್ರಾಂಶುಪಾಲರು), ವಂ. ಪ್ರದೀಪ್ ಕಾರ್ಡೋಜಾ (ಮಿಲಾಗ್ರಿಸ್ ಕ್ಯಾಥೆಡ್ರಲ್ ಸಹಾಯಕ ಧರ್ಮಗುರು), ವಂ. ರೋಹಿತ್ ಡಿಕೋಸ್ಟಾ (ಮಂಗಳ ಜ್ಯೋತಿ ನಿರ್ದೇಶಕರು, ಮಂಗಳೂರು), ಮತ್ತು ವಂ. ರೋಹನ್ ಡಯಾಸ್, ಅSSಖ ಸಭೆ (ಅಲಂಗಾರ್, ಮೂಡುಬಿದ್ರೆ) ನೆರವೇರಿಸಿದರು.


ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊರವರು ಮಹೋತ್ಸವದ ಯಶಸ್ವಿ ಆಚರಣೆಗೆ ಸೂಕ್ತ ವ್ಯವಸ್ಥೆ ಮಾಡಿದ ಅತ್ತೂರು ಪುಣ್ಯಕ್ಷೇತ್ರದ ಧರ್ಮಗುರುಗಳು, ಸಹಾಯಕ ಯಾಜಕರು ಮತ್ತು ಎಲ್ಲ ಭಕ್ತರಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು. ಬಸಿಲಿಕಾದ ಭವಿಷ್ಯ ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಳ್ಳಲು ಭಕ್ತರ ಪ್ರಾರ್ಥನೆಗಳನ್ನು ವಿನಂತಿಸಿದರು.

ಕುಂದಾಪುರ ವಿಭಾಗದ ಸಹಾಯಕ ಆಯುಕ್ತರಾದ ಶ್ರೀಮತಿ ರಶ್ಮಿ ಅವರು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದರು.

Related posts

ಬಜಗೋಳಿ: ವಲಯ ಮಟ್ಟದ ಭಜನಾ ತರಬೇತಿ ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ ಸಮಾರೋಪ

Madhyama Bimba

ಅನಂತಶಯನ ಶಾರದಾ ಮಹಿಳಾ ಮಂಡಳಿ ಅಧ್ಯಕ್ಷರಾಗಿ ಶ್ರೀಮತಿ ಜ್ಯೋತಿ ಫಾಟಕ್

Madhyama Bimba

ಕಾರ್ಕಳ: ಮಲಗಿದ್ದಲ್ಲಿಯೇ ಮೃತ್ಯು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More