ಮೂಡುಬಿದಿರೆ

ಮೂಡುಬಿದಿರೆ: ನ್ಯೂ ಕಾಂತೇಶ್ವರ ಜ್ಯುವೆಲ್ಲರ್ಸ್ ಶುಭಾರಂಭ

ಮೂಡುಬಿದಿರೆ: ಪೇಟೆಯ ಹೃದಯ ಭಾಗದ ನೂತನ ರಾಮಯ್ಯ ಕಾಂಪ್ಲೆಕ್ಸ್ ನಲ್ಲಿ ನ್ಯೂ ಕಾಂತೇಶ್ವರ ಜ್ಯುವೆಲ್ಲರ್ಸ್‌ನ ನೂತನ ಆಭರಣ ಮಳಿಗೆಯನ್ನು ಶ್ರೀಕ್ಷೇತ್ರ ಕಾಂತಾವರದ ಧರ್ಮದರ್ಶಿ ಡಾ| ಕೆ. ಜೀವಂಧರ ಬಲ್ಲಾಳ್ ಎ. 12ರಂದು ಉದ್ಘಾಟಿಸಿದರು.

ಈ ಸಂದರ್ಭ ಅವರು ಮಾತನಾಡಿ ಗುಣಮಟ್ಟದ ಚಿನ್ನಾಭರಣಗಳ ತಯಾರಿಕೆಯಲ್ಲಿ 6 ದಶಕಗಳಿಂದಲೂ ಗ್ರಾಹಕರ ನಂಬಿಕೆ, ಪ್ರೀತಿಗೆ ಪಾತ್ರರಾದ ಕಾಂತೇಶ್ವರ ಜುವೆಲರ್ಸ್‌ನ ಕಾಂತಾವರ ರಾಮಯ್ಯ ಆಚಾರ್ಯರ ಪರಂಪರೆ ಎರಡನೇ ಮತ್ತು ಮೂರನೇ ತಲೆಮಾರುಗಳಲ್ಲೂ ಅದೇ ಮಟ್ಟದಲ್ಲಿ ಮುಂದುವರಿಯುತ್ತಾ ಬಂದಿದೆ ಎಂದರು.


ಮೂಡುಬಿದಿರೆ ಶ್ರೀ ಜೈನ ಮಠಾ ಧೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ ಪ್ರಾಚೀನ ಕಲೆಯನ್ನು ಚಿನ್ನ ಬೆಳ್ಳಿ ಮತ್ತಿತರ ಲೋಹಗಳ ಮೂಲಕ ಆಧುನಿಕ ಜಗತ್ತಿಗೆ ಪರಿಚಯಿಸಿ, ಉಳಿಸಿ ಬೆಳೆಸುವ ಅವಕಾಶ ಸದುಪಯೋಗಪಡಿಸಿಕೊಳ್ಳಲು, ಗ್ರಾಹಕರಲ್ಲಿ ಅಂಥ ಅಭಿ ರುಚಿ ಬೆಳೆಸಲು ಸ್ವರ್ಣ ಉದ್ಯಮಿಗಳು ಮುಂದಾಗಬೇಕು ಎಂದರು.


ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ. ಅಭಯಚಂದ್ರ, ಆಳ್ವಾಸ್ ಪ್ರವರ್ತಕ ಡಾ| ಎಂ. ಮೋಹನ ಆಳ್ವ ಚೌಟರ ಅರಮನೆ ಕುಲದೀಪ ಎಂ., ಪಡ್ಯಾರಬೆಟ್ಟ ಕ್ಷೇತ್ರದ ಧರ್ಮದರ್ಶಿ ಜೀವಂಧರ ಕುಮಾರ್, ಎಂಸಿಎಸ್ ಸೊಸೈಟಿ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ವಿಶೇಷ ಕರ್ತವ್ಯ ಅಧಿಕಾರಿ ಚಂದ್ರಶೇಖರ ಎಂ. ಉದ್ಯಮಿಗಳಾದ ಶ್ರೀಪತಿ ಭಟ್, ತಿಮ್ಮಯ್ಯ ಶೆಟ್ಟಿ ನಾರಾಯಣಷಿ ಎಂ., ಶ್ರೀಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊತ್ತೇಸರ ಬಾಲಕೃಷ್ಣ ಆಚಾರ್ಯ, ಶಿರ್ತಾಡಿ ಸಂಪತ್ ಸಾಮ್ರಾಜ್ಯ, ಪೆರಾಡಿ ಸಂಜೀವ ಶೆಟ್ಟಿ ಸಂತೋಷ ಶೆಟ್ಟಿ ಕಡಂದಲೆ, ಹಸನಬ್ಬ ಬಿ. ಪೆರಾಡಿ ಭಾಗವಹಿಸಿದ್ದರು. ಕಾಂತೇಶ್ವರ ಜುವೆಲರ್ಸ್ ಕೆ. ದಿನೇಶ ಆಚಾರ್ಯ ಉಪಸ್ಥಿತರಿದ್ದರು.

ಸುರೇಶ ಆಚಾರ್ಯ, ಸಂಜನ್ ಆಚಾರ್ಯ ಸ್ವಾಗತಿಸಿದರು. ನಿರ್ಮಾಣ ಕಾಮಗಾರಿಯಲ್ಲಿ ಸಹಕರಿಸಿದವರನ್ನು ಪುರಸ್ಕರಿಸಲಾಯಿತು. ಸೌಮ್ಯಾ ಕುಂದರ್ ನಿರೂಪಿಸಿದರು.

ವಿಶೇಷ ಕೊಡುಗೆ
ಉದ್ಘಾಟನೆ ಪ್ರಯುಕ್ತ ಎ. 22ರ ವರೆಗೆ ಆಭರಣ ತಯಾರಿ ವೆಚ್ಚದಲ್ಲಿ ಶೇ. 25 ರಿಯಾಯಿತಿ ಇದೆ

Related posts

ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘಕ್ಕೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಸಿಬ್ಬಂದಿ ಭೇಟಿ

Madhyama Bimba

ಮೂಡುಬಿದಿರೆಯಲ್ಲಿ ಕೆಂಪೇಗೌಡ ಜಯಂತಿ ಆಚರಣೆ

Madhyama Bimba

ಎಚ್ಚರ… ಎಚ್ಚರ… ಗ್ರಾಹಕರೇ ಎಚ್ಚರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More