ಮೂಡುಬಿದಿರೆ

ಮೂಡುಬಿದಿರೆಯಲ್ಲಿ ಕೆಂಪೇಗೌಡ ಜಯಂತಿ ಆಚರಣೆ

ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಮೂಡುಬಿದಿರೆ ಆಡಳಿತ ಸೌಧದಲ್ಲಿ ಇಂದು ಆಚರಿಸಲಾಯಿತು.

ಶಾಸಕ ಉಮಾನಾಥ ಕೋಟ್ಯಾನ್ ಅವರು ದೀಪಬೆಳಗಿಸಿ ಕೆಂಪೇಗೌಡ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ನಂತರ ಮಾತನಾಡಿದ ಅವರು ದೂರದೃಷ್ಟಿಯೊಂದಿಗೆ ಬೆಂಗಳೂರು ಅಭಿವೃದ್ಧಿ ಮಾಡಿದ ಕೆಂಪೇಗೌಡ ಕೆರೆ ರಸ್ತೆ ಪೇಟೆ ಗಿಡ ಮರಗಳನ್ನು ಕಟ್ಟಿಕೊಟ್ಟ ರೀತಿ ನಮಗೆಲ್ಲರಿಗೂ ಮಾದರಿ ಎಂದು ಹೇಳಿದರು.

ಕೆಂಪೇಗೌಡ ಜಯಂತಿ ಪ್ರಯುಕ್ತ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಸಹಿತ ಬಹುಮಾನ ನೀಡಲಾಯಿತು.

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ತಹಶೀಲ್ದಾರ್ ಪುಟ್ಟರಾಜು, ಆರೋಗ್ಯಾಧಿಕಾರಿ ಡಾ. ಅಕ್ಷತಾ ಭಾಗವಹಿಸಿದ್ದರು. ಗ್ರಾಮಕರಣಿಕ ಅರ್ಜುನ್ ಕಾರ್ಯಕ್ರಮ ನಿರೂಪಿಸಿದರು

Related posts

ಎಸ್‌ಕೆಪಿಎ ಮೂಡುಬಿದಿರೆ ವಲಯದ 16ನೇ ವಾರ್ಷಿಕ ಸಭೆ

Madhyama Bimba

ಮೂಡುಬಿದಿರೆಯಲ್ಲಿ ನಾಳೆ(ಆದಿತ್ಯವಾರ) ‘ ಗೃಹಲಕ್ಷ್ಮಿ ಕೋಟಿ ಸಂಭ್ರಮ’

Madhyama Bimba

ರೋಟರಿ ಕ್ಲಬ್ ನಿಂದ ಗ್ಲಾಸ್ ಲೋಟ ವಿತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More