ಮೂಡುಬಿದಿರೆ

ಮೂಡಬಿದ್ರೆ ರೋಟರಿ ಕೇಂದ್ರೀಯ ಶಾಲೆ ಸಿಬಿಎಸ್‌ಇ ಪರೀಕ್ಷೆಯಲ್ಲಿ ಉತ್ತಮ ಸಾಧನೆ

ಮೂಡುಬಿದಿರೆ : 205-26 ನೇ ಸಾಲಿನ ಸಿಬಿಎಸ್ಸಿ ಪರೀಕ್ಷೆಯ ಹತ್ತನೇ ತರಗತಿಯಲ್ಲಿ ರೋಟರಿ ಕೇಂದ್ರೀಯ ಶಾಲೆಯು ಶೇಕಡ 100 ಫಲಿತಾಂಶ ದಾಖಲಿಸಿದೆ. ಒಟ್ಟು 35 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಶ್ರೀಯ ಟಿ. ಪಿ ಜೈನ್ ಶೇಕಡ 94.6% ಪಡೆಯುವುದರ ಮೂಲಕ ಸಾಧನೆ ಮೆರೆದಿದ್ದಾರೆ.


ಶ್ರೀಯಾ ಎಸ್ ಶೇ 92.8% ಜೊತೆಗೆ ಸಂಸ್ಕೃತದಲ್ಲಿ 100 ಅಂಕ ಪಡೆದಿದ್ದು , ಅನ್ವಿತಾ ಪ್ರದೀಪ್ (92.80%), ದಿವೀಕ್ಷ್ ಡಿ ರೈ(89.60%), ಸೀಮಾ ಬಿ( 89.40%), ಕೈರಾ ಲೇಖ್ ರಾಜ್ ಶೆಟ್ಟಿ ( 88.40%), ಚಾಡಲವಾಡ ರುಷಿಧರ್ ರೆಡ್ಡಿ ( 88%), ಈಶಾನ್ವಿ ಶೆಟ್ಟಿ (87.30%), ಫಾತಿಮಾ ಝುಹೈರಾ (85.80%), ಮೊಹಮ್ಮದ್ ಶಿಹಾಬ್ ಶಫಿ (84.80%) ಅಂಕ ಪಡೆದಿದ್ದಾರೆ. 20 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು ಉಳಿದ ಮಕ್ಕಳು ಉತ್ತಮ ಶ್ರೇಣಿ ಯಲ್ಲಿ ಉತ್ತೀರ್ಣರಾಗಿದ್ದಾರೆ.


ಉತ್ತಮ ಫಲಿತಾಂಶವನ್ನು ದಾಖಲಿಸಿರುವುದಕ್ಕೆ ಎಲ್ಲಾ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರನ್ನು ಶಾಲಾ ಆಡಳಿತ ಮಂಡಳಿಯ ಪರವಾಗಿ ಅಧ್ಯಕ್ಷರಾದ ರೊ. ನಾರಾಯಣ ಪಿ.ಎಂ, ಕಾರ್ಯದರ್ಶಿ ರೊ.ಅನಂತ ಕೃಷ್ಣರಾವ್ ಮತ್ತು ಸಂಚಾಲಕರಾದ ರೊ. ಜೆ.ಡಬ್ಲ್ಯೂ ಪಿಂಟೋ ರವರು ಅಭಿನಂದಿಸಿರುತ್ತಾರೆ.

Related posts

ಮೂಡುಬಿದಿರೆಯಲ್ಲಿ ‘ವಿಶ್ವ ಕಾರ್ಮಿಕ ದಿನಾಚರಣೆ’ಗೆ ಕಾರ್ಮಿಕರಿಗೆ ಮತ್ತು ಅವರ ಕುಟುಂಬದವರಿಗೆ ಕಣ್ಣಿನ ತಪಾಸಣಾ

Madhyama Bimba

ಶಾಲಾ ಸಂಸತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವ ಬೆಳೆಸುವ ವೇದಿಕೆ: ಮುನಿರಾಜ ರೆಂಜಾಳ

Madhyama Bimba

ಮೂಡುಬಿದಿರೆ ಯುವ ಬಂಟರ ಸಂಘ: ಅಧ್ಯಕ್ಷರಾಗಿ ಸಂದೀಪ್ ಶೆಟ್ಟಿ ಬೆಳುವಾಯಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More