ಮೂಡುಬಿದಿರೆ

ಮೂಡುಬಿದಿರೆ ಯುವ ಬಂಟರ ಸಂಘ: ಅಧ್ಯಕ್ಷರಾಗಿ ಸಂದೀಪ್ ಶೆಟ್ಟಿ ಬೆಳುವಾಯಿ

ಮೂಡುಬಿದಿರೆ ಯುವ ಬಂಟರ ಸಂಘದ 2026 ಹಾಗೂ 2027 ರ ಸಾಲಿನ ನೂತನ ಅಧ್ಯಕ್ಷರಾಗಿ ಸಂದೀಪ್ ಶೆಟ್ಟಿ ಬೆಳುವಾಯಿ ಕಾರ್ಯದರ್ಶಿಯಾಗಿ ರಮೇಶ್ ಶೆಟ್ಟಿ ಮಿಜಾರು, ಕೋಶಾಧಿಕಾರಿಯಾಗಿ ಭರತ್ ಶೆಟ್ಟಿ ಇರುವೈಲು ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಸಂಘದ ನಿಕಟಪೂರ್ವ ಅಧ್ಯಕ್ಷ ಜಯಕುಮಾರ್ ಶೆಟ್ಟಿ ಆಯ್ಕೆಗೊಂಡಿದ್ದಾರೆ.

ಉಪಾಧ್ಯಕ್ಷರಾಗಿ ಸಂದೀಪ್ ಎಂ ಶೆಟ್ಟಿ ತೋಡಾರು, ಸುಕುಮಾರ್ ಶೆಟ್ಟಿ ದರೆಗುಡ್ಡೆ, ಜೊತೆ ಕಾರ್ಯದರ್ಶಿಯಾಗಿ ನಿಖಿಲ್ ಶೆಟ್ಟಿ ಇರುವೈಲು, ಜೊತೆ ಕೋಶಾಧಿಕಾರಿಯಾಗಿ ಸಂತೋಷ್ ಶೆಟ್ಟಿ ಚಿತ್ತಾರ, ಕ್ರಿಡಾ ಕಾರ್ಯದರ್ಶಿಯಾಗಿ ಆದರ್ಶ್ ಶೆಟ್ಟಿ ಕಡಂದಲೆ, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ನಿತ್ಯಾನಂದ ಶೆಟ್ಟಿ ಬಿರಾವು, ತಿಲಕ್ ಶೆಟ್ಟಿ, ಅಖಿಲ್ ಶೆಟ್ಟಿ ಮಿಜಾರು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶರತ್ ಶೆಟ್ಟಿ ಪುತ್ತಿಗೆ, ಸುದಾಕರ ಶೆಟ್ಟಿ ಬೆದ್ರ, ಸುದೀರ್ ಶೆಟ್ಟಿ ದರೆಗುಡ್ಡೆ , ಅಶೋಕ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಆದರ್ಶ ಶೆಟ್ಟಿ ಕೊಡ್ಯಡ್ಕ ಸಾಮಾಜಿಕ ಜಾಲತಾಣ ಪ್ರಮುಖರಾಗಿದ್ದಾರೆ. ವಿನಯ್ ಶೆಟ್ಟಿ ಪಂಚರತ್ನ, ಅರುಣ್ ಶೆಟ್ಟಿ ವಾಲ್ಪಾಡಿ, ಮಿಥುನ್ ಶೆಟ್ಟಿ ತೋಡಾರು ಮನೋಜ್ ಶೆಟ್ಟಿ ಬೆದ್ರ ಗೌರವ ಸಲಹೆಗಾರರಾಗಿದ್ದಾರೆ.
ಸಂಘದ ನಿಕಟಪೂರ್ವ ಅಧ್ಯಕ್ಷರಾದ ಜಯಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಮೂಡುಬಿದಿರೆ ಕನ್ನಡ ಭವನದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು.

Related posts

ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗ ಪಂಚಾಯತ್ ನೌಕರರು

Madhyama Bimba

ಬನ್ನಡ್ಕ ಪಾಡಿಯಾರ್ ಯುವಕರಿಂದ ಶ್ರಮದಾನ

Madhyama Bimba

ಶಾಲಾ ಸಂಸತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವ ಬೆಳೆಸುವ ವೇದಿಕೆ: ಮುನಿರಾಜ ರೆಂಜಾಳ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More