ಕಾರ್ಕಳ

ಕಾಂಗ್ರೆಸ್ ಓಲೈಕೆಗಾಗಿ ಸುಳ್ಳು ಪ್ರಚಾರ ನಿಲ್ಲಿಸಿ, ತಾಕತ್ತಿದ್ದರೆ ಸಮುದಾಯದ ಅಭಿವೃದ್ಧಿಗೆ ಹಾಗೂ ಹೆಬ್ರಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಿಮ್ಮ ಸರ್ಕಾರದಿಂದ 06.00 ಕೋಟಿ ಅನುದಾನ ತಂದು ತೋರಿಸಿ! – ತಾ.ಪಂ ಮಾಜಿ ಅಧ್ಯಕ್ಷ ಸುಂದರ್ ಬಿ. ಸಂಜೀವ ಮಾಳ ತಿರುಗೇಟು

ಕಾರ್ಕಳ: “ಕಾರ್ಕಳದ ಅಭಿವೃದ್ಧಿ ಎನ್ನುವುದು ಅದು ಸುನಿಲ್ ಕುಮಾರ್ ಅವರ ದೂರದೃಷ್ಟಿಯ ಫಲ. ಇಡೀ ರಾಜ್ಯದಲ್ಲಿ ತಾಲೂಕು ಮಟ್ಟದಲ್ಲಿ ಮಾದರಿಯಾಗಿ ನಿರ್ಮಾಣಗೊಂಡಿರುವ ಅಂಬೇಡ್ಕರ್ ಭವನ ಇದ್ದರೆ ಅದು ಕಾರ್ಕಳದಲ್ಕಿ. ಶಾಸಕರ ನಿರಂತರ ಪ್ರಯತ್ನದ ಫಲವಾಗಿ ಬೃಹತ್ ಅನುದಾನ ದೊರಕಿದ್ದರ ಪರಿಣಾಮ ಸುಸಜ್ಜಿತ ಅಂಬೆಡ್ಕರ್ ಭವನ ಆಗಿರುವುದು. ಇದರ ಲಾಭ ಪಡೆದುಕೊಂಡು ಪ್ರಚಾರದ ತೆವಲಿಗಾಗಿ ಇದು ನಮ್ಮ ಶ್ರಮದ ಪ್ರತಿಫಲ ಎಂಬುದಾಗಿ ಹೇಳುವ ನೀವುಗಳು ಬೊಗಳೆ ಬಿಡುವುದರಲ್ಲಿ ನಿಸ್ಸೀಮರು. ಎಂದು ಸಮುದಾಯದ ಮುಖಂಡರಾದ ತಾ.ಪಂ ಮಾಜಿ ಅಧ್ಯಕ್ಷ ಸುಂದರ್ ಮತ್ತು ಬಿ. ಸಂಜೀವ ಮಾಳ ಇವರು ಅಣ್ಣಪ್ಪ ನಕ್ರೆ ಹಾಗೂ ರಾಘವ ಕುಕ್ಕುಜೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಾರ್ಕಳದಲ್ಲಿ ಶಾಸಕ ವಿ. ಸುನಿಲ್ ಕುಮಾರ್ ಅವರ ನಿರಂತರ ಪ್ರಯತ್ನದಿಂದ ಇಂದು ಭವ್ಯವಾದ ಅಂಬೇಡ್ಕರ್ ಭವನ ತಲೆಯೆತ್ತಿದೆ. ಈ ಯೋಜನೆಯ ಅನುದಾನದ ಹಿಂದೆ ಅವರ ಅವಿರತ ಪರಿಶ್ರಮವಿದೆ. ಆದರೆ, ಮತ್ಯಾರೋ ಬಂದು ಇದು ನಮ್ಮ ಪ್ರಯತ್ನ ಎನ್ನುವುದು ಹಾಸ್ಯಾಸ್ಪದ. ದಾರಿ ತಪ್ಪಿಸುವ ರಾಜಕಾರಣ ಬಿಟ್ಟು, ಜನಪರ ಕೆಲಸ ಮಾಡಿ. ಅಥವಾ ಜನಪರ ಕೆಲಸ ಮಾಡಿದವರನ್ನು ಗುರುತಿಸುವ ಕಾರ್ಯ ಮಾಡಿ.

ಕಾರ್ಕಳ ಅಂಬೇಡ್ಕರ್ ಭವನ ನಿಮ್ಮಿಂದಲೇ ಆದದ್ದು ಎಂದು ಸುಳ್ಳು ಬಿಡುವ ನೀವು ಪ್ರತ್ಯೇಕ ತಾಲೂಕು ಆಗಿ ರಚನೆಗೊಂಡಿರುವ ಹೆಬ್ರಿ ತಾಲೂಕಿಗೆ ಸುಸ್ಸಜ್ಜಿತ ಅಂಬೇಡ್ಕರ್ ಭವನಕ್ಕೆ 6.00ಕೋಟಿ ಅನುದಾನ ತನ್ನಿ: ಮುಕ್ತ ಸವಾಲು!

ಹೆಬ್ರಿ ತಾಲೂಕು ಕೇಂದ್ರವಾಗಿ ಘೋಷಣೆಯಾಗಿ ವರ್ಷಗಳೇ ಕಳೆದರೂ ಅಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣವಾಗಿಲ್ಲ. ಈಗ ರಾಜ್ಯದಲ್ಲಿ ನಿಮ್ಮದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ನಿಮಗೆ ನಿಜವಾಗಿಯೂ ಸಮುದಾಯದ ಮೇಲೆ ಕಾಳಜಿ ಇದ್ದರೆ, ನೀವು ಹೇಳಿದಂತೆ ಕಾರ್ಕಳ ಅಂಬೆಡ್ಕರ್ ಭವನಕ್ಕೆ ನಿಮ್ಮ ಪ್ರಯತ್ನದಿಂದ ಅನುದಾನ ಬಂದಿದ್ದರೆ ಹೆಬ್ರಿ ಅಂಬೇಡ್ಕರ್ ಭವನಕ್ಕೆ ೬.೦ ಕೋಟಿ ರೂ. ಅನುದಾನ ತಂದು ನಿರ್ಮಾಣ ಮಾಡಿ ತೋರಿಸಿ. ಆಗ ನಿಮ್ಮ ಶಕ್ತಿ ಏನು ಎಂಬುದು ಜನರಿಗೆ ತಿಳಿಯುತ್ತದೆ. ಸವಾಲು ಸ್ವೀಕರಿಸುವ ತಾಕತ್ತು ನಿಮಗಿದೆಯೇ ಎಂದು ಪ್ರಶ್ನಿಸಿದ್ದಾರೆ.

ಕೊರಗ ಸಮುದಾಯದ ಅಭಿವೃದ್ಧಿಗೆ ನಮ್ಮ ಬದ್ಧತೆ!!
ಕೇಂದ್ರ ಸರ್ಕಾರದ ಪಿ.ಎಂ ಜನ್ ಮನ್ ಕಾರ್ಯಕ್ರಮದಡಿ ಕೊರಗ ಸಮುದಾಯದ ಏಳಿಗೆಗಾಗಿ ನಮ್ಮ ಕೇಂದ್ರ ಸರಕಾರದ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ. ತಲಾ 60.00 ಲಕ್ಷ ರೂ. ವೆಚ್ಚದಲ್ಲಿ ಮುಡಾರು, ಮುಂಡ್ಕೂರು, ಬೆಳ್ಮಣ್ ಮತ್ತು ಮರ್ಣೆ ಗ್ರಾಮಗಳಲ್ಲಿ ಸಮುದಾಯ ಭವನ ಮಂಜೂರಾಗಿದೆ. ಮುಂಡ್ಕೂರು, ಬೆಳ್ಮಣ್ ಮತ್ತು ಮುಡಾರು ಗ್ರಾಮಗಳಲ್ಲಿ ಕಾಮಗಾರಿ ಈಗಾಗಲೇ ಮುಕ್ತಾಯದ ಹಂತದಲ್ಲಿದೆ. ಉಳಿದ ಒಂದು ಭವನ ಸ್ಥಳೀಯರ ಮನವಿಯಂತೆ ನಿಟ್ಟೆ ಗ್ರಾಮದಲ್ಲಿ ಶೀಘ್ರದಲ್ಲೇ ಕಾಮಗಾರಿ ಆರಂಭವಾಗಿ ಭವನ ನಿರ್ಮಾಣವಾಗಲಿದೆ. ಕಾರ್ಕಳದ ೦೪ ಕಡೆಗಳಲ್ಲಿ ಕೊರಗರ ಭವನ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಅನುದಾನ ತರುವಲ್ಲಿ ಶಾಸಕರ ಪ್ರಯತ್ನ ಅಭಿನಂದನೀಯ.

“ನಾವು ಕೆಲಸದ ಮೂಲಕ ಉತ್ತರ ನೀಡುವವರು. ಕೇವಲ ಸುಳ್ಳು ಹೇಳಿಕೆ ನೀಡಿ ದಾರಿ ತಪ್ಪಿಸುವುದು ನಮ್ಮ ಸಂಸ್ಕೃತಿಯಲ್ಲ. ಸಮಾಜದ ಏಳಿಗೆಗಾಗಿ ಶ್ರಮಿಸುವ ಬದ್ಧತೆ ನಮಗಿದೆ. ನಿಮ್ಮ ಹತ್ತಿರ ಅಧಿಕಾರವಿದೆ, ಅನುದಾನ ತನ್ನಿ, ಅಭಿವೃದ್ಧಿ ಮಾಡಿ ತೋರಿಸಿ. ಅಲ್ಲಿಯವರೆಗೆ ಸುಳ್ಳು ಹೇಳುವುದನ್ನು ನಿಲ್ಲಿಸಿ ಎಂದು ಆಗ್ರಹಿಸಿದ್ದಾರೆ.

Related posts

ಕಾರ್ಕಳ ಜೈಹಿಂದ್ ಗೇಮ್ಸ್ ಕ್ಲಬ್ ವತಿಯಿಂದ ‘ಜೈಹಿಂದ್ ಟ್ರೋಫಿ’ ಕ್ರಿಕೆಟ್ ಕ್ರೀಡಾಕೂಟ

Madhyama Bimba

ಕ್ರೈಸ್ಟ್‌ಕಿಂಗ್: ತುಳುನಾಡ ಇತಿಹಾಸ ದರ್ಶನ ಉಪನ್ಯಾಸ ಕಾರ್ಯಕ್ರಮ

Madhyama Bimba

 ಮಾಂಟ್ರಾಡಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ  ನಿರ್ದೇಶಕರ ಆಯ್ಕೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More