ಮೂಡುಬಿದಿರೆ

 ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ವಿರೋಧಿಸಿ ಸಿಪಿಐಎಂ ನಾಳೆ ಪ್ರತಿಭಟನೆ

ಮೂಡುಬಿದಿರೆಯಲ್ಲಿ ತಾಲೂಕಿಗೆ ಸರಕಾರಿ ಆಸ್ಪತ್ರೆಯನ್ನು ಸರ್ಕಾರ ಮಂಜೂರುಗೊಳಿಸಬೇಕು. ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿಯೊಂದಿಗೆ ಸಹಭಾಗಿತ್ವ ನೀಡುವುದನ್ನು ನಿರ್ಬಂಧಿಸುವಂತೆ ಆಗ್ರಹಿಸಿ ಏಪ್ರಿಲ್ 21ರಂದು ಮಂಗಳವಾರ ಮೂಡುಬಿದಿರೆಯಲ್ಲಿ ಸಾರ್ವಜನಿಕರಿಂದ ಬ್ರಹತ್ ಸಾಮೂಹಿಕ ಧರಣಿ ನಡೆಯಲಿದೆ ಎಂದು ಸಿಪಿಐಎಂ. ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಯಾದವ ಶೆಟ್ಟಿ ಹಾಗೂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ ಆಚಾರಿ ತಿಳಿಸಿದ್ದಾರೆ.

ಮೂಡಬಿದ್ರಿ ತಾಲೂಕಿನ ಸರಕಾರಿ ಆಸ್ಪತ್ರೆಯನ್ನು ಖಾಸಗಿ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ರದ್ದುಗೊಳಿಸಬೇಕು. ಬಡಜನರ ಆರೋಗ್ಯವನ್ನು ಖಾತರಿಪಡಿಸಬೇಕೆಂದು ಒತ್ತಾಯಿಸಿ ಬೆಳಿಗ್ಗೆ 10 ಗಂಟೆಗೆ ಮೂಡಬಿದ್ರಿ ಮಿನಿವಿಧಾನ ಸೌಧದ ಮುಂದುಗಡೆ ಬ್ರಹತ್ ಸಾಮೂಹಿಕ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 9.30ಕ್ಕೆ ಹಳೆ ಪೋಲೀಸ್ ಠಾಣಾ ಬಳಿಯಿಂದ ಮಿನಿವಿಧಾನ ಸೌಧದ ತನಕ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.

ಸುಸಜ್ಜಿತವಾದ ಕಟ್ಟಡ, ಸಾಕಷ್ಟು ಪ್ರಮಾಣದಲ್ಲಿ ಬೆಡ್ಡುಗಳು, ಹೊರರೋಗಿ ಮತ್ತು ಒಳರೋಗಿ ವಿಭಾಗದಲ್ಲಿ ಎಲ್ಲಾ ರೀತಿಯ ಕಾಯಿಲೆಗಳಿಗೆ ಸಾಮಾನ್ಯ ವೈದ್ಯರು ಮತ್ತು ತಜ್ಞವೈದರಿಂದ ಉಚಿತ ತಪಾಸಣೆ, ತುರ್ತು ಚಿಕಿತ್ಸಾ ವಿಭಾಗದಲ್ಲಿ ಅಪಘಾತ, ವಿಷಪ್ರಾಶನ, 24/7 ಚಿಕಿತ್ಸೆ, ರೋಗ ನಿರ್ಣಯ ಪರೀಕ್ಷೆಗಳು, ಎಕ್ಸರೇ, ಇಸಿಜಿ, ಆಲ್ಮಾ ಸೌಂಡ್, ಸಿಟಿಸ್ಮಾನ್, ಮೂತ್ರ ಮತ್ತು ರಕ್ತ ಪರೀಕ್ಷೆಗಳು, ಪ್ರಸೂತಿ ಮತ್ತು ರೋಗ, ಮೂಳೆ, ಶಿರ ಚಿಕಿತ್ಸೆ, ದಂತಚಿಕಿತ್ಸೆ, ಹೆರಿಗೆಯಾದ ತಾಯಿ ಮತ್ತು ಮಗುವಿಗೆ ಉಚಿತ ಚಿಕಿತ್ಸೆ ಉಚಿತವಾಗಿ ಲಸಿಕೆ ಮತ್ತು ಔಷಧಿಗಳು, ಡಯಾಲಿಸಿಸ್, ಅಂಬುಲೆನ್ಸ್ ಮತ್ತು ಒಳರೋಗಿಗಳಿಗೆ ಊಟದ ವ್ಯವಸ್ಥೆ ಸಿಗುವಂತಾಗಬೇಕು.

ಬೇಡಿಕೆಗಳು:
ಮೂಡಬಿದ್ರಿ ತಾಲೂಕಿಗೆ ಸರಕಾರಿ ಆಸ್ಪತ್ರೆಯಾಗಿ ಘೋಷಣೆಯಾಗಬೇಕು. ಮೂಡಬಿದ್ರಿ ಸರಕಾರಿ ಆಸ್ಪತ್ರೆಯನ್ನು ಖಾಸಗಿ ಆಸ್ಪತ್ರೆಯೊಂದಿಗೆ ಟೈಅಪ್ ಮಾಡಿರುವುದನ್ನು ಕೈಬಿಡಬೇಕು.
ಸರಕಾರಿ ಆಸ್ಪತ್ರೆಯನ್ನು ಖಾಸಗೀಕರಣ ಮಾಡುವದನ್ನು ಕೈಬಿಡಬೇಕು.
ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸಬೇಕು
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ತಾಲೂಕು ಸಮಿತಿಯ ಹೋರಾಟದ ಮುಂದುವರಿದ ಭಾಗವಾಗಿ ಸಾರ್ವಜನಿಕರಿಂದ ಸಾಮೂಹಿಕ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿರುತ್ತೇವೆ ಎಂದು ಅವರು ತಿಳಿಸಿದರು.

ದ.ಕ ಜಿಲ್ಲಾ ಸಮಿತಿ ಸದಸ್ಯರು ರಾಧ, ತಾಲೂಕು ಸಮಿತಿ ಸದಸ್ಯರು ಲಕ್ಷ್ಮೀ, ಕಾರ್ಯದರ್ಶಿ ರಮಣಿ ಉಪಸ್ಥಿತರಿದ್ದರು.

Related posts

  ನೆಲ್ಲಿಕಾರು ಪಂಚಾಯತ್ ಮಾಜಿ ಅಧ್ಯಕ್ಷೆ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿ ಆದೇಶ

Madhyama Bimba

ಮೂಡುಬಿದಿರೆ: ನ್ಯೂ ಕಾಂತೇಶ್ವರ ಜ್ಯುವೆಲ್ಲರ್ಸ್ ಶುಭಾರಂಭ

Madhyama Bimba

ಎಕ್ಸಲೆಂಟ್‌ನಲ್ಲಿ ಡಿ. 18ರಂದು ಸಂಗೀತ ಸಂಜೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More