ಮೂಡುಬಿದಿರೆ

ಆದಿಶಕ್ತಿ ದುರ್ಗಾಂಬಿಕ ದೇವಸ್ಥಾನ ಗೌರವಾರ್ಪಣೆ

ಶಿರ್ತಾಡಿ: ಶ್ರೀ ಆದಿಶಕ್ತಿ ದುರ್ಗಾಂಬಿಕ ದೇವಸ್ಥಾನ ಶ್ರೀ ಕ್ಷೇತ್ರ ಕಂದಿರು ಶಿರ್ತಾಡಿ ಶ್ರೀ ಕ್ಷೇತ್ರಕ್ಕೆ ಭಕ್ತರು ನೀಡಿರುವ ಪರಿಕರಗಳ ಸಮರ್ಪಣೆಯು ಶ್ರೀ ಕ್ಷೇತ್ರದಲ್ಲಿ ಜರಗಿತು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗೋಪಾಲ್ ಕೋಟ್ಯಾನ್ ಮಾರೂರು, ನಿವೃತ್ತ ಎಸಿಎಫ್ ಎನ್ ಮುರಳಿಧರನ್, ಮೂಡಬಿದ್ರಿ ಜಯ ಬಂಗೇರ ಮರೋಡಿ, ಶ್ರೀಮತಿ ಬೇಬಿ ಬೋಜ ಶೆಟ್ಟಿ, ಖಂಡಿಗ ಬೆಳುವಾಯಿ ಸೂರಜ್ ಆಳ್ವ ಚಪ್ಪಣ್ಣ ಗುರಿ, ಬೆಳುವಾಯಿ ಲಕ್ಷ್ಮೀನಾರಾಯಣ ಶಾಂತಿ ನಿಟ್ಟೆ, ಶಿವಾನಂದ ಶಾಂತಿ ತಾಕೊಡೆ, ಸಂಜೀವ ಶಾಂತಿ ವಾಲ್ಪಾಡಿ, ಸಂಕೇತ್ ಶಾಂತಿ ಮಾಂಟ್ರಾಡಿ ಯವರು ದೀಪ ಬೆಳಗಿಸಿ ಚೇರ್ ಟೇಬಲ್ ಪಾತ್ರೆ ಪರಿಕರಗಳನ್ನು ಕ್ಷೇತ್ರಕ್ಕೆ ಸಮರ್ಪಿಸಲಾಯಿತು.

ಅನುವಂಶಿಕ ಆಡಳಿತ ಮೊಕ್ತೇಸರರಾದ ಸೋಮನಾಥ ಶಾಂತಿಯವರು ಸ್ವಾಗತಿಸಿ ಸುಮಾರು ೧ ಲಕ್ಷ ಮೊತ್ತದ ಪರಿಕರಗಳನ್ನು ಖರೀದಿಸಲು ಸಹಕಾರ ನೀಡಿದವರನ್ನು ಸ್ಮರಿಸಿದರು.

ಸುಮಂತ್ ಶಾಂತಿ ಧನ್ಯವಾದಗೈದರು. ಸಮಿತ್ ರಾಜ್, ಮಾನಸ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಕಂದಿರು ಸಹಕರಿಸಿದರು.

ಅನಂತರ ವಿಶೇಷ ಪೂಜೆ ಕಲ್ಕುಡ ದೈವ ದರ್ಶನ, ಅನ್ನ ಸಂತರ್ಪಣೆ ಜರಗಿತು.

Related posts

ಕಡಂದಲೆ ಉಳುವೆ ಶ್ರೀ ಆದಿಶಕ್ತಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸಂಪನ್ನ 

Madhyama Bimba

ಕೌಶಲ ಜ್ಞಾನವಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ -ಸವಿತಾ

Madhyama Bimba

ಜೇಸಿ ರಾಷ್ಟ್ರೀಯ ತರಬೇತುದಾರರಾಗಿ ವಿಕ್ರಮ ನಾಯಕ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More