ಮೂಡುಬಿದಿರೆ

ಹರೀಶ್ ಕೆ ಆದೂರು ಸಹಿತ ಹತ್ತು ಮಂದಿಗೆ `ಯಕ್ಷತೂಣೀರ ಸಾಧನಾ ಪ್ರಶಸ್ತಿ ಪ್ರದಾನ’

ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ಕಾಸರಗೋಡು ವತಿಯಿಂದ ದಶಮಾನ ಸಂಭ್ರಮ ಕಾರ್ಯಕ್ರಮ  ಸ್ಕಂದ ಪ್ಲಾಸ್ಟಿಕ್ಸ್ ಸಂಸ್ಥೆಯ ಆವರಣದಲ್ಲಿ ಅದ್ದೂರಿಯಾಗಿ ನಡೆಯಿತು.

ಎಡನೀರು ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶಿಷ್ಯ ಶ್ರೀ ತೋಟಕಾಚಾರ್ಯ ಪರಂಪರಾಗತ ಶ್ರೀ ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು.

ಯಕ್ಷತೂಣೀರ ಸಂಸ್ಥೆಯು ವಿವಿಧ ಕ್ಷೇತ್ರಗಳಲ್ಲಿ ಅಪರಿಮಿತ ಸಾಧನೆಯನ್ನು ಗೈದು, ಸಮಾಜಕ್ಕೆ ಮಾದರಿಯಾದವರನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಶ್ರೀಗಳು, ಯಕ್ಷತೂಣೀರ ಸಂಸ್ಥೆ ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸುವ ಕಾರ್ಯ ಮಾಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪೆರಡಂಜಿ ಗೋಪಾಲಕೃಷ್ಣ ಭಟ್ಟರ ಸ್ಮೃತಿ-ಕೃತಿ ಅಪರಂಜಿ ಅನಾವರಣಗೊಳಿಸಿದರು.

ಸಾಧನಾ ಪ್ರಶಸ್ತಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹತ್ತು ಮಂದಿಗೆ ಪೂಜ್ಯ ಶ್ರೀಗಳು ಯಕ್ಷತೂಣೀರ ಸಂಪ್ರತಿಷ್ಠಾನದ ದಶಮಾನದ ಸಂಭ್ರಮದ ಶುಭಾವಸರದಲ್ಲಿ ಸಾಧನಾ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿಯು ಫಲಪುಷ್ಪ,ಹಾರ,ಪ್ರಶಸ್ತಿ ಫಲಕ,ಪುಸ್ತಕಗೌರವ ಹಾಗೂ ಗೌರವಧನಗಳನ್ನೊಳಗೊಂಡಿತ್ತು.

ಗಡಿನಾಡು ಕಾಸರಗೋಡಿನವರಾಗಿದ್ದು, ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾಧ್ಯಮ ಹಾಗೂ ಸಾಹಿತ್ಯ ಸಂಘಟನಾ ಕ್ಷೇತ್ರದಲ್ಲಿ ಸಾಧನೆಮಾಡುತ್ತಿರುವ ಹರೀಶ್ ಕೆ ಆದೂರು ಸಹಿತ 10 ಮಂದಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಗೋಪಾಲಕೃಷ್ಣ ಭಟ್ ತುಪ್ಪೆಕಲ್ಲು (ವೈದಿಕ), ತೆಕ್ಕೆಕರೆ ಶಂಕರನಾರಾಯಣ ಭಟ್(ಕನ್ನಡ ಸಾಹಿತ್ಯ), ವಿಷ್ಣು ಭಟ್ ಬಜೆ (ಪಾಕಶಾಸ್ತ್ರ), ಡಾ. ಕೆ. ಎಂ. ಕೆ. ಭಟ್ ಕಾಟಿಪಳ್ಳ (ವೈದ್ಯಕೀಯ), ಯತೀಶ್ ಕುಮಾರ್ ರೈ (ಶಿಕ್ಷಣ ಹಾಗೂ ಕಲೆ), ಗಣಪತಿ ಭಟ್ ಮಧುರಕಾನನ (ಕೃಷಿ ಮತ್ತು ಸಾಹಿತ್ಯ), ಹರೀಶ್ ಆದೂರು (ಪತ್ರಿಕೋದ್ಯಮ ಮತ್ತು ಸಾಹಿತ್ಯ), ಅನುಪಮಾ ರಾಘವೇಂದ್ರ ಉಡುಪುಮೂಲೆ (ಭರತನಾಟ್ಯ ಮತ್ತು ಸಾಹಿತ್ಯ), ರಾಕೇಶ್ ಗೋಳಿಯಡ್ಕ (ಪ್ರಸಾದನ ಕಲೆ), ಶ್ರೀಲಕ್ಷ್ಮೀ ಕುಳೂರು (ಚಿತ್ರಕಲೆ) ಈ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪೆರಡಂಜಿ ಸ್ಮರಣೆಯನ್ನು ವ್ಯಂಗ್ಯಚಿತ್ರಗಾರ ವೆಂಕಟ್ ಭಟ್ ಎಡನೀರು, ಅಪರಂಜಿ ಕೃತಿ ಪರಿಚಯವನ್ನು ನಾ. ಕಾರಂತ ಪೆರಾಜೆ ನಡೆಸಿದರು. ಇದೇ ಸಂದರ್ಭ ಯಕ್ಷಗಾನದ ಭಾಗವತರಾದ ವೆಂಕಟ್ರಮಣ ಭಟ್ ತಲ್ಪಣಾಜೆ ಅವರಿಗೆ ಪೆರಡಂಜಿ ಪ್ರಶಸ್ತಿ, ಯಕ್ಷಗಾನ ಕಲಾವಿದ ವಿಶ್ವನಾಥ ಭಟ್ ಬಜೆ, ರಾಜೇಶ್ವರಿ ಈಶ್ವರ ಭಟ್ ಅವರಿಗೆ ಯಕ್ಷತೂಣೀರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಯಕ್ಷತೂಣೀರ ಸಂಪ್ರತಿಷ್ಠಾನದ ಅಧ್ಯಕ್ಷ ಸುಬ್ರಹ್ಮಣ್ಯ ಅಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಕೀಲ ಎಂ. ನಾರಾಯಣ ಭಟ್ ಉಪಸ್ಥಿತರಿದ್ದರು.

ಮುರಳೀಕೃಷ್ಣ ಸ್ವಾಗತಿಸಿದರು. ಗೀತಾ ಪ್ರಾರ್ಥನೆ ಹಾಡಿದರು. ಶಿವಕುಮಾರ್ ಅಡ್ಕ ಕಾರ್ಯಕ್ರಮ ನಿರ್ವಹಿಸಿದರು. ಶ್ಯಾಮಮೂರ್ತಿ, ಹರಿಕೃಷ್ಣ ಭಟ್, ಗೋವಿಂದ ಭಟ್ ಬಳ್ಳಮೂಲೆ ಸನ್ಮಾನ ಪತ್ರ ವಾಚಿಸಿದರು. ಕೃಷ್ಣ ಭಟ್ ಅಡ್ಕ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ . ಸಾದ್ವಿ ಕೃಷ್ಣ ವಯನಾಡು, ಅನ್ವಿತಾ ಪೆರಡಂಜಿ ಅವರಿಂದ `ನೃತ್ಯಾರ್ಪಣ’ ನಡೆಯಿತು. ‘ಮೇದಿನಿ ನಿರ್ಮಾಣ-ಮಹಿಷ ವಧೆ’ ಯಕ್ಷಗಾನ ಬಯಲಾಟ ಜನಮನ ರಂಜಿಸಿತು.

Related posts

ತೆಂಕಮಿಜಾರು ಸರಕಾರಿ ಪ. ಪೂ. ಕಾಲೇಜಿಗೆ ಶೇ 94 ಫಲಿತಾಂಶ

Madhyama Bimba

ಮೂಡುಬಿದಿರೆ, ಗೌರಿಕೆರೆ ಬಳಿಯ ಶ್ರೀ ರಾಮಪುರದ ಸಪರಿವಾರ ಶ್ರೀ ರಾಮ ದೇವರ ಬಿಂಬ ಪುನರ್ ಪ್ರತಿಷ್ಠೆ ಹಾಗೂ ಅಷ್ಠಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Madhyama Bimba

ಮೆಸ್ಕಾಂ ಗ್ರಾಹಕ ಸಲಹಾ ಸಮಿತಿಗೆ ಶಾಸಕ ಕೋಟ್ಯಾನ್ ಅಧ್ಯಕ್ಷ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More