ಕಾರ್ಕಳ

ನಾಡ್ಪಾಲು ಪಂಚಾಯತ್‌ನಲ್ಲಿ ಉಚಿತ ಶ್ರವಣ ತಪಾಸಣಾ ಹಾಗೂ ಶ್ರವಣ ಯಂತ್ರ ಸಹಾಯಧನ ವಿತರಣೆ

ನಾಡ್ಪಾಲು ಗ್ರಾಮ ಪಂಚಾಯತ್ ಸಾರಥ್ಯದಲ್ಲಿ ಟೀಂ ಈಶ್ವರ ಮಲ್ಪೆ, ದಿ.ಭೋಜ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸೀತಾನದಿ ಹಾಗೂ ವಿಘ್ನೇಶ ಸಂಜೀವಿನಿ ಒಕ್ಕೂಟ ಸಹಯೋಗದಲ್ಲಿ ಉಚಿತ ಕಿವಿ ಶ್ರವಣ ತಪಾಸಣೆ ಹಾಗೂ ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣೆ ಕಾರ್ಯಕ್ರಮ ಏ. 18 ರಂದು ಪಂಚಾಯತ್‌ನಲ್ಲಿ ನಡೆಯಿತು.

ಶ್ರವಣ ತಜ್ಞೆ ಅಂಕಿತಾ ಕಲ್ಮಾಡಿ ಕಿವಿಯ ಆರೋಗ್ಯ ಮಾಹಿತಿ ನೀಡುವುದರೊಂದಿಗೆ ಸಾರ್ವಜನಿಕರ ಶ್ರವಣ ತಪಾಸಣೆ ನಡೆಸಿದರು. ಟೀಂ ಈಶ್ವರ ಮಲ್ಪೆ ಸಂಚಾಲಕರಾದ ಲವ ಬಂಗೇರ  ಕಾರ್ಯಕ್ರಮದ ಬಗ್ಗೆ ಹಾಗೂ ಟೀಮ್ ಈಶ್ವರ ಮಲ್ಪೆಯ ಉದ್ದೇಶಗಳ ಹಾಗೂ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಾಡ್ಪಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರ ಶ್ರವಣ ತಪಾಸಣೆ ಮಾಡಿ ಅಗತ್ಯವಿದ್ದವರಿಗೆ ಶ್ರವಣ ಯಂತ್ರವನ್ನು ವಿತರಿಸಲಾಯಿತು. ಹಾಗೂ ಶ್ರವಣ ಯಂತ್ರದ ಬಗ್ಗೆ ಟೀಮ್ ಈಶ್ವರ ಮಲ್ಪೆಯಿಂದ ಸಹಾಯಧನ ನೀಡಲಾಯಿತು.

. ನಾಡ್ಪಾಲು ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಹಾಗೂ ಸ .ಪ್ರ.ದ ಕಾಲೇಜು ಹೆಬ್ರಿಯ ಪ್ರಾಂಶುಪಾಲರಾದ ವಿದ್ಯಾಧರ ಹೆಗ್ಡೆಯವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮದ ಬಗ್ಗೆ ಹಾಗೂ ಶಿಕ್ಷಣ ಮಹತ್ವದ ಬಗ್ಗೆ ಮಾತನ್ನಾಡಿದರು.

ಈ ಸಂದರ್ಭದಲ್ಲಿ ನಾಡ್ಪಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ದ್ವಿತೀಯ ಪಿಯುಸಿ ಶೇಕಡಾ ೯೦ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ದಿ. ಭೋಜ ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ನಗದು ಪುರಸ್ಕಾರ ನೀಡಲಾಯಿತು

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ದಿನೇಶ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶೀತಲ್, ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀಮತಿ ದೇವಕಿ, ವಿಘ್ನೇಶ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಜಾತಾ ಹೆಗ್ಡೆ, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

Related posts

ಕ್ರೈಸ್ಟ್‌ಕಿಂಗ್: ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಆರಂಭೋತ್ಸವ

Madhyama Bimba

ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

Madhyama Bimba

ಕೌಡೂರು ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಹರಕೆ ಮಾರಿಪೂಜೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More