ಕಾರ್ಕಳ

ಕಾರ್ಕಳ: ಆನ್‌ಲೈನ್ ವಂಚನೆ: ರೂ. 25,66,000 ಕಳೆದುಕೊಂಡ ನಲ್ಲೂರಿನ ವ್ಯಕ್ತಿ

ಕಾರ್ಕಳ: ನಲ್ಲೂರಿನ ಗಣೇಶ ಆಚಾರ್ಯ(34) ಎಂಬುವವರು ಆನ್‌ಲೈನ್ ವಂಚನೆಯಿಂದ ರೂ. 25,66,000 ಕಳೆದುಕೊಂಡ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಗಣೇಶ ಆಚಾರ್ಯ ಇವರಿಗೆ 2024 ಜುಲೈ 23 ರಂದು ಇನ್ಸಟಾಗ್ರಾಂ ಮೂಲಕ ಸುಜನ್ ಶೆಟ್ಟಿ ಸಿದ್ದಾಪುರ ಎಂಬುದಾಗಿ ಪರಿಚಯ ಮಾಡಿಕೊಂಡ ವ್ಯಕ್ತಿಯು ತನಗೆ ಕಾಲೇಜಿಗೆ ಹೋಗಲು 200 ರೂ ಹಣ ಬೇಕೆಂದು ಒತ್ತಾಯಿಸಿ 2024 ಜುಲೈ 24ರಂದು ಆತನ ಕೆನರಾ ಬ್ಯಾಂಕ್ ಖಾತೆಯ ಗೂಗಲ್ ಪೇ ಗೆ ಹಣ ಹಾಕಿಸಿಕೊಂಡು ನಂತರ ಹಂತಹಂತವಾಗಿ ಫೋನ್ ಮಾಡಿ ತನಗೆ ಕಾಲೇಜಿಗೆ ಹಣ ಕಟ್ಟಲು ಹಣ ಬೇಕು, ಅನಾರೋಗ್ಯದ ಬಗ್ಗೆ, ಲ್ಯಾಪ್‌ಟಾಪ್ ರಿಪೇರಿ ಮಾಡಲು, ಕೃಷಿ ಸಾಲದ ಹಣ ಕಟ್ಟಲು ಹಣ ಬೇಕೆಂದು ನಂಬಿಸಿ ಹಣ ಪಡೆದುಕೊಂಡಿದ್ದು, ಆ ಹಣವನ್ನು ವಾಪಾಸು ಕೊಡಲು ಬ್ಯಾಂಕ್ ಖಾತೆ ಸರಿಪಡಿಸಲು ಹಣ ಬೇಕೆಂದು ವಾಪಾಸು ಕೊಡುತ್ತೇನೆಂದು ನಂಬಿಸಿ 2024 ಜುಲೈ 24 ರಿಂದ 2026 ಏಪ್ರಿಲ್ರ 04 ವರೆಗೆ ಹಂತಹಂತವಾಗಿ 25,66,000 / ರೂ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಾಪಾಸು ಕೊಡದೇ ಮೋಸ ಮಾಡಿರುತ್ತಾರೆ.

Related posts

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರೀಲ್ಸ್ ಸ್ಪರ್ಧೆ

Madhyama Bimba

ಸಿ.ಎ. ಫೌಂಡೇಶನ್ ಫಲಿತಾಂಶ: ಜ್ಞಾನಸುಧಾದ 12 ವಿದ್ಯಾರ್ಥಿಗಳು ತೇರ್ಗಡೆ

Madhyama Bimba

ಕಾರ್ಕಳ: ಗ್ರಾಹಕರ ಮನಗೆಲ್ಲಲು ಸಜ್ಜಾದ ‘ಎನ್‌ಪಿ ಚಿಲ್ ಸ್ಟೇಷನ್’ ಎಸಿ ಐಸ್‌ಕ್ರೀಮ್ ಪಾರ್ಲರ್ ಉದ್ಘಾಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More