ಕಾರ್ಕಳ

ಕಾರ್ಕಳ: ಮುಂಡ್ಕೂರು ಜಾರಿಗೆಕಟ್ಟೆ ಬಳಿ ಮೋಟಾರ್ ಸೈಕಲ್‌ಗಳ ನಡುವೆ ಮುಖಾಮುಖಿ ಡಿಕ್ಕಿ- ಗಾಯ

ಕಾರ್ಕಳ: ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆ ಬಳಿ ಬೆಳ್ಮಣ್ – ಕಿನ್ನಿಗೋಳಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಮೋಟಾರ್ ಸೈಕಲ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸವಾರರು ಗಾಯಗೊಂಡ ಘಟನೆ ಏ. 23ರಂದು ವರದಿಯಾಗಿದೆ.

ಕಿನ್ನಿಗೋಳಿ ಕಡೆಯಿಂದ ಬೆಳ್ಮಣ್ ಕಡೆಗೆ ಹೋಗುತ್ತಿದ್ದ ಮೋಟಾರು ಸೈಕಲ್ ಸವಾರ ಅಮರನಾಥನು ಬೆಳ್ಮಣ್‌ನಿಂದ ಕಿನ್ನಿಗೋಳಿ ಕಡೆಗೆ ಬರುತ್ತಿದ್ದ ರಮೇಶ ಎಂಬುವವರ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದಾನೆ.

ಢಿಕ್ಕಿ ಪರಿಣಾಮ ಎರಡೂ ವಾಹನಗಳು ಜಖಂಗೊಂಡು ಸವಾರರು ಗಾಯಗೊಂಡಿರುತ್ತಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಕಾಬೆಟ್ಟು ಸರಕಾರಿ ಪ್ರೌಢಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ

Madhyama Bimba

10ನೇ ವರ್ಷದ ಸಂಭ್ರಮದಲ್ಲಿ ಕಾರ್ಕಳದ ಶ್ರೀ ವಿಜಯಲಕ್ಷ್ಮೀ ಫ್ಯಾಬ್ರಿಕ್ಸ್-ದೀಪಾವಳಿಯ ಪ್ರಯುಕ್ತ ಲಕ್ಕಿ ಕೂಪನ್, ವಿಶಿಷ್ಟ ಬಹುಮಾನಗಳು

Madhyama Bimba

ಅಜೆಕಾರು ಜ್ಯೋತಿ ಮಹಿಳಾ ಮಂಡಳಿ ವತಿಯಿಂದ ಮಹಿಳಾ ದಿನಾಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More