ಕಾರ್ಕಳಹೆಬ್ರಿ

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರೀಲ್ಸ್ ಸ್ಪರ್ಧೆ

ಪರಿಸರ ದಿನಾಚರಣೆ – 2026 ರ ಅಂಗವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಉಡುಪಿ ಇವರ ವತಿಯಿಂದ ಪರಿಸರ ಜಾಗೃತಿ ಹಾಗೂ ಹವಾಮಾನ ಕ್ರಮಗಳಿಗೆ ಸಾರ್ವಜನಿಕರ ಸಕ್ರೀಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ವಿಶೇಷ ರೀಲ್ಸ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಪ್ರಕೃತಿಯಿಂದ ಪ್ರೇರಿತ, ಹವಾಮಾನಕ್ಕಾಗಿ; ನಮ್ಮ ಭವಿಷ್ಯಕ್ಕಾಗಿ ಎಂಬ ಧ್ಯೇಯವಾಕ್ಯದಡಿ ನಡೆಯಲಿರುವ ಈ ಸ್ಪರ್ಧೆಯ ಮೂಲಕ ಪರಿಸರ ಸಂರಕ್ಷಣೆ, ಸುಸ್ಥಿರ ಜೀವನಶೈಲಿ, ಹವಾಮಾನ ಬದಲಾವಣೆಯ ಬಗ್ಗೆ ಅರಿವು ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು.
ಜಿಲ್ಲೆಯ ನಿವಾಸಿಗಳು ಮುಕ್ತವಾಗಿ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ತಮ್ಮ ಸೃಜನಶೀಲತೆಯನ್ನು ಬಳಸಿಕೊಂಡು 30 ಸೆಕೆಂಡುಗಳಿಂದ 120 ಸೆಕೆಂಡುಗಳ ಅವಧಿಯ ಮೂಲ ರೀಲ್ಸ್ ವೀಡಿಯೋಗಳನ್ನು ಸಿದ್ಧಪಡಿಸಿ, ಜೂನ್ 3 ರ ಒಳಗಾಗಿ ಇ- ಮೇಲ್  udupi@kspcb.gov.in  ಅಥವಾ  kspcbroudupi@gmail.com    ವಿಳಾಸ ಹಾಗೂ ಮೊ.ನಂ: 9964027311 ಗೆ ವಾಟ್ಸಾಪ್ ಮೂಲಕ ಕಳುಹಿಸಬಹುದಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಕ್ರಮವಾಗಿ5,000, 30,000 ಹಾಗೂ 2000 ರೂ.ಗಳ ನಗದು ಬಹುಮಾನ ನೀಡಲಾಗುವುದು.

ಸಲ್ಲಿಕೆಯಾಗುವ ವಿಡಿಯೋಗಳು ಸ್ಪರ್ಧೆಯ ಅಧಿಕೃತ ವಿಷಯ ವಸ್ತುವಿಗೆ ಹೊಂದಿಕೆಯಾಗಿರಬೇಕು. ಅಸಭ್ಯ, ಆಕ್ರಮಣಕಾರಿ, ಮಾನಹಾನಿಕಾರಕ ಅಥವಾ ಧಾರ್ಮಿಕವಾಗಿ ಸೂಕ್ಷ್ಮ ವಿಷಯಗಳನ್ನು ಒಳಗೊಂಡಿರಬಾರದು ಎಂದು ಕ.ರಾ.ಮಾ.ನಿ.ಮಂಡಳಿಯ ಪರಿಸರ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Related posts

ಹೆಬ್ರಿ: ಕನ್ನಡ ಪ್ರಥಮ ಭಾಷೆಯಲ್ಲಿ ಪೂರ್ಣ ಅಂಕ ಪಡೆದ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ

Madhyama Bimba

ಕ್ರೈಸ್ಟ್‌ಕಿಂಗ್‌ನಲ್ಲಿ ವರ್ಟೆಕ್ಸ್ ವೆಂಚರ್ – 2026 ಬೇಸಿಗೆ ಶಿಬಿರ

Madhyama Bimba

ಸಮಾಜ ಹಿತಕ್ಕಿಂತ ಕಾಂಗ್ರೆಸ್ ಓಲೈಕೆಯೇ ಅಣ್ಣಪ್ಪ ನಕ್ರೆ, ರಾಘವ ಕುಕ್ಕುಜೆ ಯವರಿಗೆ ಮುಖ್ಯವಾಯಿತೇ?-ಸಮುದಾಯದಕ್ಕೆ ಮೀಸಲಿಟ್ಟ ಹಣ ದುರ್ಬಳಕೆ ಆದಾಗ ಸೊಲ್ಲೆತ್ತಲಿಲ್ಲ ಯಾಕೆ?- ಸಮುದಾಯದ ತಾ.ಪಂ ಮಾಜಿ ಅಧ್ಯಕ್ಷ ಸುಂದರ್ ಬಿ. ಮತ್ತು ಸಂಜೀವ ಮಾಳ ತಿರುಗೇಟು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More