Blog

ಎಸ್ಸೆಸ್ಸೆಲ್ಸಿ ಫಲಿತಾಂಶ: ಆಳ್ವಾಸ್ ಪ್ರೌಢಶಾಲೆಯ 93  ವಿದ್ಯಾರ್ಥಿಗಳು 95% ಕ್ಕಿಂತ ಅಧಿಕ ಅಂಕ

ವಿದ್ಯಾಗಿರಿ: ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಿಸಿದ್ದು, ಆಳ್ವಾಸ್ ಶಾಲೆಯ 75 ವಿದ್ಯಾರ್ಥಿಗಳು 625 ರಲ್ಲಿ 600ಕ್ಕೂ ಹೆಚ್ಚು ಅಂಕ ಪಡೆಯುವ ಮೂಲಕ ಸಾಧನೆ ಮೆರೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, ಸಾಧ್ವಿ ಪಿ.ವಿ (622), ಪ್ರಥ್ವಿರಾಜ್ ರೆಡ್ಡಿ (621), ಆದರ್ಶ (620), ಲಕ್ಷ್ಮಿ(619), ಪವನ್ ಕುಮಾರ್ (619), ಶಾಂಭವಿ (618), ಅನ್ವಿತಾ ಬಿ(617), ಶಂಕರ ಗೌಡ(617), ಶ್ರೇಯಾ (616), ಸುಶ್ಮಿತಾ (616), ದಿಲೀಪ್ (615), ಕೇಶವ (615), ಪ್ರಿಯಾಂಕ (615), ಸ್ವಾತಿ (615), ವೀರೇಶ್(615) ಅಂಕಗಳನ್ನು ಪಡೆಯುವುದರ ಮೂಲಕ ವಿಶಿಷ್ಠ ಸಾಧನೆ ಮೆರೆದಿದ್ದಾರೆ.

93ವಿದ್ಯಾರ್ಥಿಗಳು ಶೇ950ಕ್ಕೂ ಅಧಿಕ, 184 ವಿದ್ಯಾರ್ಥಿಗಳು ಶೇ90ಕ್ಕೂ ಅಧಿಕ, 247 ವಿದ್ಯಾರ್ಥಿಗಳು ಶೇ 85ಕ್ಕೂ ಅಧಿಕ ಅಂಕ ಪಡೆದಿದ್ದಾರೆ ಎಂದರು.

ನಾಲ್ಕು ವಿಷಯಗಳಲ್ಲಿ 5 ವಿದ್ಯಾರ್ಥಿಗಳು, ಮೂರು ವಿಷಯಗಳಲ್ಲಿ 13, ಎರಡು ವಿಷಯಗಳಲ್ಲಿ 37, ಹಾಗೂ 1ವಿಷಯದಲ್ಲಿ 85 ವಿದ್ಯಾರ್ಥಿಗಳು ಶೇ.100 ಅಂಕಗಳನ್ನು ಗಳಿಸಿದ್ದಾರೆ.

ಆಳ್ವಾಸ್‌ನ ಒಟ್ಟು ಪ್ರೌಢಶಾಲಾ ವಿದ್ಯಾರ್ಥಿಗಳು ಅಂತಿಮ ಪರೀಕ್ಷೆಯಲ್ಲಿ 95%ಕ್ಕಿಂತ 139 ವಿದ್ಯಾರ್ಥಿಗಳು ಅಂಕವನ್ನು ಗಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರಶಾಂತ್ ಬಿ., ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ವಿಜಯಾ ಟಿ. ಮೂರ್ತಿ, ಆಡಳಿತಾಧಿಕಾರಿ ಪ್ರೀತಂ ಕುಂದರ್ ಹಾಗೂ ಸಹಾಯಕ ಆಡಳಿತಾಧಿಕಾರಿ ರಾಜೇಶ್ ಕುಮಾರ್ ಶೆಟ್ಟಿ ಇದ್ದರು.

 

Related posts

ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ ಸತತ ಪ್ರಯತ್ನದ ಫಲವಾಗಿ ಪಳ್ಳಿ ಬೆಳ್ಳೆ ಬಸ್ ಪುನರಾರಂಭ: ಅಭಿನಂದನೆ ಸಲ್ಲಿಸಿದ ಬ್ಲಾಕ್ ಅಧ್ಯಕ್ಷ ಶುಭದ್ ರಾವ್

Madhyama Bimba

ಮಾಧ್ಯಮ ಪತ್ರಕರ್ತರ ಸಂಘ ಉದ್ಘಾಟನೆ

Madhyama Bimba

ಕಾರ್ಕಳದಲ್ಲಿ ಕಾಂಗ್ರೆಸ್ ಸಮಾವೇಶ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More