ಮೂಡುಬಿದಿರೆ

ಮೂಡುಬಿದಿರೆ ವಕೀಲರ ಸಂಘಕ್ಕೆ ಶರತ್ ಶೆಟ್ಟಿ ಅಧ್ಯಕ್ಷ- ಜಯಪ್ರಕಾಶ್ ಭಂಡಾರಿ ಪ್ರಧಾನ ಕಾರ್ಯದರ್ಶಿ

ಮೂಡುಬಿದಿರೆ: ಇಲ್ಲಿನ ಮೂಡುಬಿದಿರೆ ವಕೀಲರ ಸಂಘ (ರಿ.) ಇದರ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ಶರತ್ ಶೆಟ್ಟಿ ಡಿ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಂಗಳವಾರ ಜರಗಿದ ನೂತನ ಪದಾಧಿಕಾರಿಗಳ ಆಯ್ಕೆಯ ಸಂದರ್ಭದಲ್ಲಿ ಶಾಂತಿ ಪ್ರಸಾದ್ ಹೆಗ್ಡೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಭಂಡಾರಿ ಕೆ. ಸತತ ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಳಿದಂತೆ ಮರ್ವಿನ್ ಜಾನ್ಸನ್ ಲೋಬೋ ( ಜತೆ ಕಾರ್ಯದರ್ಶಿ) , ಶ್ರೀಮತಿ ಶುಭ ಸಹನ ( ಕೋಶಾಧಿಕಾರಿ), ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀಮತಿ ದೀಕ್ಷಾ, ಕು. ರೂಪಾ , ಶ್ರೀಮತಿ ಸಂಜನಾ ಎಚ್. ಆಯ್ಕೆಯಾಗಿದ್ಧಾರೆ. ಎಲ್ಲ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆದಿದೆ. ಹಿರಿಯ ನ್ಯಾಯವಾದಿ ಎಂ. ಸುಬ್ರಹ್ಮಣ್ಯ ತಂತ್ರಿ ಚುನಾವಣಾ ಅಧಿಕಾರಿಯಾಗಿ ಸಹಕರಿಸಿದರು.

Related posts

ಎಕ್ಸಲೆಂಟ್ ಸಿ.ಬಿ.ಎಸ್.ಇ ಶಾಲೆಯಲ್ಲಿ  GIGGLE & GROW’ ಮಕ್ಕಳ ಆಟದ ಮನೆಯ ಉದ್ಘಾಟನೆ

Madhyama Bimba

ಮಾದಕ ವ್ಯಸನದ ವಿರುದ್ಧ ಯುವಜನತೆ ಜಾಗೃತರಾಗಬೇಕು: ಪಿಎಸ್‌ಐ ಪ್ರತಿಭಾ ಕೆ.ಎಸ್.

Madhyama Bimba

ಮೂಡುಬಿದಿರೆಯಲ್ಲಿ ಆಟೋಕ್ರಾಸ್ ಎಕ್ಸ್ 2026 ರೇಸ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More