ಮೂಡುಬಿದಿರೆ

ಎಕ್ಸಲೆಂಟ್ ಸಿ.ಬಿ.ಎಸ್.ಇ ಶಾಲೆಯಲ್ಲಿ  GIGGLE & GROW’ ಮಕ್ಕಳ ಆಟದ ಮನೆಯ ಉದ್ಘಾಟನೆ

ಮೂಡುಬಿದಿರೆ ದಸರಾ ಹಬ್ಬದ ಶುಭ ಸಂದರ್ಭದಲ್ಲಿ ನವದುರ್ಗೆಯರ ಪ್ರತೀಕವಾದ ಒಂಬತ್ತು ಮಹಿಳಾ ಅತಿಥಿಗಳ ಉಪಸ್ಥಿತಿಯಲ್ಲಿ ಎಕ್ಸಲೆಂಟ್ ಸಿ.ಬಿ.ಎಸ್.ಇ ಶಾಲೆಯ ನೂತನ `GIGGLE & GROW’’ ಆಟದ ಮನೆಯ ಉದ್ಘಾಟನೆಯು ವಿಜೃಂಭಣೆಯಿಂದ ನೆರವೇರಿತು.


ನವದುರ್ಗೆಯರ ಕಲ್ಪನೆ ಭಾರತೀಯ ಪರಂಪರೆಯ ಅತೀ ವಿಶಿಷ್ಟವಾದ ಕೊಡುಗೆಗಳಲ್ಲಿ ಒಂದು. ದುರ್ಗಾದೇವಿಯ ಒಂಬತ್ತು ರೂಪಗಳನ್ನು ಒಂಬತ್ತು ದಿನಗಳ ಕಾಲ ಪ್ರತಿದಿನವೂ ಒಂದೊಂದು ಅರ್ಥದಲ್ಲಿ ಆಚರಿಸುವ ಪದ್ಧತಿ ದಸರಾ ಹಬ್ಬದ ವಿಶೇಷತೆಗಳಲ್ಲಿ ಒಂದು. ನಾರೀಶಕ್ತಿಯ ಪ್ರತೀಕವಾಗಿಂi ವಿಭಿನ್ನ ಹಾಗೂ ಸಾಂಕೇತಿಕ ಅರ್ಥದಲ್ಲಿ ಈ ಹಬ್ಬವನ್ನು ಆಚರಿಸುವುದುಂಟು. ಮಕ್ಕಳು ದೇವರ ಸ್ವರೂಪ. ಪುಟ್ಟ ಮಕ್ಕಳು ಆಡುತ್ತ, ನಲಿಯುತ್ತ ಬೆಳೆಯಬೇಕೆಂಬುದು ಹಿರಿಯರೆಲ್ಲರ ಅಭಿಲಾಷೆ. ಆ ಮಕ್ಕಳಿಗೆ ಹೇಗೆ ಮನೆಯಲ್ಲಿ ತಾಯಿಯ ರಕ್ಷಣೆ ಸಿಗುತ್ತದೋ ಹಾಗೆ ಅವರ ಆಟಪಾಟಗಳಲ್ಲಿ ಆ ಮಹಾತಾಯಿ ದುರ್ಗಾದೇವಿಯ ಅನುಗ್ರಹ ಪ್ರತಿದಿನವೂ ಪ್ರಾಪ್ತವಾಗುತಿರಬೇಕೆಂಬ ಸದಾಶಯದಿಂದ ಎಕ್ಸಲೆಂಟ್ ಸಿ.ಬಿ.ಎಸ್.ಇ. ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಮPಳ ಆಟದ ಮನೆ `GIGGLE & GROW’ ಇದರ ಉದ್ಘಾಟನೆಯನ್ನು ನೆರವೇರಿಸಲಾಯಿತು.

ಉದ್ಘಾಟನೆಗೆ ಮೂಡುಬಿದಿರೆ ಪರಿಸರದಲ್ಲಿ ಮಹತ್ವದ ಸಾಧನೆಗಳಿಂದ ಗುರುತಿಸಿಕೊಂಡಿರುವ ಒಂಬತ್ತು ಶ್ರೇಷ್ಠ ಮಹಿಳೆಯರಾದ ಶ್ರೀಮತಿ ಮೀನಾಕ್ಷಿ ನಾರಾಯಣ, ಶ್ರೀಮತಿ ಮುನಾವರ, ಶ್ರೀಮತಿ ಪ್ರಕಾಶಿನಿ ಹೆಗ್ಡೆ, ಶ್ರೀಮತಿ ವೈಲೆಟ್ ಡಿಸೋಜ, ಶ್ರೀಮತಿ ಅಪೇಕ್ಷ ಪೂರ್ಣಚಂದ್ರ, ಶ್ರೀಮತಿ ಬಿಂದ್ಯಾ ಶರತ್ ಶೆಟ್ಟಿ, ಶ್ರೀಮತಿ ರಮ್ಯಾ ವಿಕಾಸ್, ಶ್ರೀಮತಿ ಸರಿತಾ ಆಶೀರ್ವಾದ್, ಶ್ರೀಮತಿ ಸಾರಿಕಾ ಬಂಗೇರ ಅವರನ್ನು ಆಹ್ವಾನಿಸಲಾಗಿತ್ತು.


ಮುಖ್ಯ ಅತಿಥಿಗಳಾಗಿ ಶ್ರೀಮತಿ ಮಂಜುಳಾ ಅಭಯಚಂದ್ರ ಜೈನ್ ಆಗಮಿಸಿದ್ದರು.
ಈ ಸಂದರ್ಭದಲಲಿ ಮುಖ್ಯ ಅತಿಥಿಗಳನ್ನು ಹಾಗೂ ಒಂಬತ್ತು  ಮಂದಿ ಮಹಿಳಾ ಸಾಧಕಿಯರನ್ನು ಸಂಸ್ಥೆಯ ಪರವಾಗಿ ಹಾರ್ದಿಕವಾಗಿ ಅಭಿನಂದಿಸಿ ಗೌರವಿಸಲಾಯಿತು.

ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು.

ವಿನೂತನ ಪರಿಕಲ್ಪನೆಯೊಂದಿಗೆ ಇದನ್ನು ಅನುಷ್ಠಾನಕ್ಕೆ ತಂದ ಸಂಸ್ಥೆಯ ಕಾರ್ಯದರ್ಶಿಯವರಾದ ಶ್ರೀಮತಿ ರಶ್ಮಿತಾ ಜೈನ್ ಅವರು ಕಾರ್‍ಯಕ್ರಮದ ನೇತೃತ್ವವನ್ನು ವಹಿಸಿಕೊಂಡು ಅತಿಥಿಗಳನ್ನು ಸ್ವಾಗತಿಸಿದರು.

ಸಂಸ್ಥೆಯ ಆಡಳಿತ ನಿರ್ದೇಶಕರು, ಪ್ರಾಂಶುಪಾಲರು, ಶೈಕ್ಷಣಿಕ ಸಂಯೋಜಕರು ಹಾಗೂ ಸಿಬ್ಬಂದಿಗಳು, ಪುಟಾಣಿಗಳು  ಕಾರ್‍ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಸುಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಯವರಾದ ಶ್ರೀಮತಿ ರಶ್ಮಿತಾ ಜೈನರವರು ಮಾತನಾಡಿ ಮಕ್ಕಳ ಸರ್ವತೋಮುಖ ವಿಕಾಸಕ್ಕೆ ಪೂರಕವಾದ ವಾತಾವರಣವನ್ನು ಶಾಲೆಯಲ್ಲಿ ಕಲ್ಪಿಸುವುದು ಅತ್ಯಗತ್ಯ. ಆ ನಿಟ್ಟಿನಲ್ಲಿ ಎಕ್ಸಲೆಂಟ್ ಸಿ.ಬಿ.ಎಸ್.ಇ ಸಂಸ್ಥೆಯು ಮಕ್ಕಳ ಆಟೋಟ ಚಟುವಟಿಕೆಗಳಿಗೆ ಬೇಕಾದ ಎಲ್ಲಾ ಸೌಕಾರ್ಯಗಳನ್ನು ನೀಡುತ್ತಾ ಬಂದಿದೆ ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಅಧ್ಯಕ್ಷರು ಮಾತನಾಡಿ ಒಬ್ಬ ವ್ಯಕ್ತಿ ಸಾಧನೆಯ ಗುರಿ ತಲುಪಬೇಕಾದರೆ ದೇವರ ಅನುಗ್ರಹ ಅತೀ ಅಗತ್ಯ. ಆ ನಿಟ್ಟಿನಲ್ಲಿ ನವರಾತ್ರಿಯ ಈ ಸುಸಂದರ್ಭದಲ್ಲಿ ಒಂಬತ್ತು
ಮಹಿಳೆಯರಿಂದ ಕಾರ್ಯಕ್ರಮಕ್ಕೆ ಮೆರುಗನ್ನು ನೀಡುತ್ತಿರುವುದು ಅತ್ಯಂತ ಅರ್ಥ ಪೂರ್ಣವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಶಿಕ್ಷಕಿಯಾದ ಶ್ರೀಮತಿ ಅಕ್ಷತಾ ನಿರೂಪಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಸುರೇಶ್ ವಂದಿಸಿದರು.

Related posts

ಪಂಚಾಯತ್ ನೌಕಕರ ಮುಷ್ಕರ: ಜನಸೇವೆಯಲ್ಲಿ ವ್ಯತ್ಯಯ

Madhyama Bimba

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ. ಮಂಗಳೂರು- 2024-25ಸಾಲಿನಲ್ಲಿ ದಾಖಲೆಯ ರೂ. 16 ಕೋಟಿಗೆ ಮೀರಿದ ನಿವ್ವಳ ಲಾಭ- ಕೆ. ಜೈರಾಜ್ ಬಿ. ರೈ

Madhyama Bimba

ಮೂಡುಬಿದಿರೆ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವ ಆಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More