ಮೂಡುಬಿದಿರೆ

 ಕಲ್ಲಮುಂಡ್ಕೂರು ಸಹಕಾರಿ ಸಂಘ ಬಿಜೆಪಿ ಬೆಂಬಲಿತ ಮಡಿಲಿಗೆ- ಕಾಂಗ್ರೆಸ್ ಬೆಂಬಲಿತರಿಗೆ ಎರಡು ಸ್ಥಾನ

ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪೂರ್ಣ ಬಹುಮತದೊಂದಿಗೆ ಗೆಲುವು ಸಾಧಿಸಿದ್ದಾರೆ. ಒಟ್ಟು 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 10 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಬೆಂಬಲಿತರು ಸ್ಪಷ್ಟ ಬಹುಮತ ಪಡೆದಿದ್ದಾರೆ.

ಸಾಮಾನ್ಯ ಕ್ಷೇತ್ರದಲ್ಲಿ ನಾಗರಾಜ್ ಕಾಮತ್, ಮಾರುತಿ ಭಟ್ ಕೆ.ಎಸ್‌, ವಿದ್ಯಾನಂದ ಶೆಟ್ಟಿ, ಸುಧಾಕರ್ ಮೇಲ್ದಬೆಟ್ಟು, ಮಹಿಳಾ ಕ್ಷೇತ್ರದಲ್ಲಿ ಆಶಾಲತಾ ಶೆಟ್ಟಿ, ವಿಶಾಲಾಕ್ಷಿ, ಪರಿಶಿಷ್ಟ ಜಾತಿ ಕ್ಷೇತ್ರದಲ್ಲಿ ರತನ್, ಪರಿಶಿಷ್ಠ ಪಂಗಡ ಕ್ಷೇತ್ರದಲ್ಲಿ ಸುಕುಮಾರ್ ನಾಯ್ಕ, ಹಿಂದುಳಿದ (ಬಿ) ಕ್ಷೇತ್ರದಲ್ಲಿ ಜೋಯಿಸನ್‌ ಪ್ರವೀಣ್‌ ಡಿಸೋಜ ಹಾಗೂ ಸಾಲಗಾರರಲ್ಲದ ಕ್ಷೇತ್ರದಲ್ಲಿ ಕೇಶವ ಪೂಜಾರಿ ಗೆಲುವು ಸಾಧಿಸಿದ ಅಭ್ಯರ್ಥಿಗಳಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಸತೀಶ್ ಅಮೀನ್, ಹಾಗೂ ಸಾಮಾನ್ಯ ಕ್ಷೇತ್ರದಿಂದ ವಸಂತ್ ಭಟ್ ಆಯ್ಕೆಯಾಗಿದ್ದಾರೆ.

ಮೇ 17ರಂದು ಫಲಿತಾಂಶ ಪ್ರಕಟಗೊಂಡಿತು.

ವಿಜಯೋತ್ಸವ: ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರು, ಜಿಲ್ಲಾ ಉಪಾಧ್ಯಕ್ಷರಾದ ಈಶ್ವರ ಕಟೀಲ್, ಶಾಂತಿ ಪ್ರಸಾದ್ ಹೆಗ್ಡೆ ಮತ್ತಿತರ ಮುಖಂಡರು ಈ ಸಂದರ್ಭದಲ್ಲಿದ್ದು ವಿಜಯೋತ್ಸವ ಆಚರಿಸಿದರು.

ಸೊಸೈಟಿ ಮಾಜಿ ಅಧ್ಯಕ್ಷ ಜೋಕಿಮ್ ಕೊರೆಯ ಈ ಬಾರಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವುದು ವಿಶೇಷವಾಗಿತು.

Related posts

ಇನ್ಸ್‌ಪೆಕ್ಟರ್ ಸಂದೇಶ್ ಪ್ರಕರಣಗಳ ತನಿಖೆ ಸಿಐಡಿಗೆ

Madhyama Bimba

ಜ 21:ಬೋರುಗುಡ್ಡೆ ಶ್ರೀ ಸತ್ಯನಾರಾಯಣ ದೇವಸ್ಥಾನದ ಗರ್ಭಗೃಹ ಶಿಲಾನ್ಯಾಸ

Madhyama Bimba

ಎಕ್ಸಲೆಂಟ್ ಮೂಡುಬಿದಿರೆ ಶಾಲೆಯ ಸುವರ್ಣ ಸಾಧನೆ: 2025-26ನೇ ಸಾಲಿನ ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಅಗ್ರ 10 ರ್‍ಯಾಂಕ್‌ಗಳಲ್ಲಿ 9 ವಿದ್ಯಾರ್ಥಿಗಳು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More