ಕಾರ್ಕಳಹೆಬ್ರಿ

ವಿಬಿಎಸ್ ಸಭಾ: ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಕಾರ್ಕಳ: ಕಾರ್ಕಳ ತಾಲೂಕಿನಲ್ಲಿದ್ದು ಪ.ಪೂ. ತರಗತಿಗಳಲ್ಲಿ ಕಲಿಯುತ್ತಿರುವ ವಿಶ್ವಕರ್ಮ ಸಮಾಜದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಂದ ವಿದ್ಯಾರ್ಥಿ ವೇತನಕ್ಕೆ ಮತ್ತು ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಥಮ, ದ್ವಿತೀಯ, ಪಿಯು ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಕಲಿಯುತಿದ್ದು ಶೇ.60ಕ್ಕಿಂತ ಮೇಲ್ಪಟ್ಟು ಅಂಕಗಳನ್ನು ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.

ವಿಬಿಎಸ್ ಸಭಾದಿಂದ ನೀಡುವ ದತ್ತಿನಿಧಿಗೆ 2026ನೇ ಸಾಲಿನಲ್ಲಿ ಎಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ92 ಮೇಲ್ಪಟ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ನಗದು ಪುರಸ್ಕಾರ ಹಾಗೂ ಪ್ರತಿಭಾ ಪುರಸ್ಕಾರಕ್ಕೆ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಜಿಯು ಹಸ್ತಾಕ್ಷರದಲ್ಲಿದ್ದು ವಿದ್ಯಾರ್ಥಿ ಓದುತ್ತಿರುವ ಕಾಲೇಜು, ತರಗತಿ, ಮನೆಯ ವಿಳಾಸ, ಕೂಡುವಳಿಕೆಯ ಮೊಕ್ತೇಸರರ ಅಥವಾ ಸಮಾಜದ ಸಂಘ ಸಂಸ್ಥೆಗಳ ಅಧ್ಯಕ್ಷರ ದೃಢೀಕರಣದೊಂದಿಗೆ ಅಂಕಪಟ್ಟಿ ದೃಢೀಕೃತ ಸಂಪೂರ್ಣ ವಿವರಗಳೊಂದಿಗೆ ಕಾಲೇಜಿನ ಪ್ರಾಂಶುಪಾಲರ ದೃಢೀಕರಣವನ್ನು ಹೊಂದಿರಬೇಕು.

ವಿದ್ಯಾರ್ಥಿವೇತನಕ್ಕೆ ಅರ್ಜಿಗಳನ್ನು ಪದ್ಮನಾಭ ಆಚಾರ್ಯ ವಿಬಿಎಸ್ ಸಭಾ ಪೆರ್ವಾಜೆ ರಸ್ತೆ ಕಾರ್ಕಳ ಅಥವಾ ರಮೇಶ್ ಆಚಾರ್ಯ (ಮೊ: 9844995533) ಮನು ಜುವೆಲ್ಲರ್‍ಸ್ ಸಪ್ತಗಿರಿ ಕಾಂಪ್ಲೆಕ್ಸ್ ಮಾರ್ಕೆಟ್, ರೋಡ್ ಕಾರ್ಕಳ ಇಲ್ಲಿಂದ ಪಡೆದುಕೊಳ್ಳಬಹುದು.

ಅರ್ಜಿ ಫಾರಂಗಳನ್ನು ಪಡೆದು ಭರ್ತಿ ಮಾಡಿ ಜೂ.10ರೊಳಗೆ ತಲುಪುವಂತೆ ಅಧ್ಯಕ್ಷರು ವಿಬಿಎಸ್ ಸಭಾ ಪೆರ್ವಾಜೆ ರಸ್ತೆ ಕಾರ್ಕಳ ಇಲ್ಲಿಗೆ ಕಳುಹಿಸುವಂತೆ ಪ್ರಕಟನೆ ತಿಳಿಸಿದೆ.

 

Related posts

ಡಾ.ಬಾಬು ಜಗಜೀವನ ರಾಂ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಪ್ರಶಸ್ತಿ: ಅರ್ಜಿ ಆಹ್ವಾನ

Madhyama Bimba

ಹೆಬ್ರಿ: ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ- ಪ್ರಕರಣ ದಾಖಲು

Madhyama Bimba

ರಾಹೆ _169 : ಸಾಣೂರು ಚಿಲಿಂಬಿ ಗುಡ್ಡ ಅರಣ್ಯ ಪರಿಸರದಲ್ಲಿ ಹೆದ್ದಾರಿ ಕಾಮಗಾರಿಗೆ ಅನುಮತಿ : ಸಂಸದ ಕೋಟಾರವರ ವಿಶೇಷ ಪ್ರಯತ್ನ ಸಫಲ.

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More