ಕಾರ್ಕಳ: ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿ, ಕ್ರೀಡಾಕೂಟದಲ್ಲಿ ವಿಶೇಷ ಒಲವನ್ನು ಹೊಂದಿರುವ ರಾಜೇಶ್ ಶೆಟ್ಟಿ ಕುಕ್ಕುಂದೂರು ಇವರು ಅಂತರಾಷ್ಟ್ರೀಯ ಓಪನ್ ಚಾಂಪಿಯನ್ ಶಿಪ್ ನಲ್ಲಿ ಮೂರು ಪದಕಗಳನ್ನು ಪಡೆದುಕೊಳ್ಳುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

ಜೂನ್ 5ರಿಂದ 7ರವರೆಗೆ ಮಲೇಷ್ಯಾದಲ್ಲಿ ನಡೆದ ಓಪನ್ ಚಾಂಪಿಯನ್ ಶಿಪ್ ನಲ್ಲಿ ಇವರು 100 ಮೀ ಹರ್ಡಲ್ಸ್ ನಲ್ಲಿ ದ್ವಿತೀಯ, ಡಿಸ್ಕಸ್ ತ್ರೋನಲ್ಲಿ ತೃತೀಯ, ಹೈಜಂಪ್ ನಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ.
ಕೃಷಿಕರಾದ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಇವರು ಈ ಹಿಂದೆಯೂ ಹಲವಾರು ಪದಕಗಳನ್ನು ಪಡೆದು ಸಾಧನೆ ಗೈದಿದ್ದಾರೆ


