ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರು ಇಲ್ಲಿಯ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಸಭೆಯು ಅ. 22ರಂದು ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಸಂತೋಷ್ ಸಾಲ್ಯಾನ್ ಬೈಲೂರು, ಕಾರ್ಯದರ್ಶಿಯಾಗಿ ನಿತಿನ್ ಶೆಟ್ಟಿ ಕೊಂಕೆಮನೆ ಬೈಲೂರು, ಗೌರವಾಧ್ಯಕ್ಷರಾಗಿ ಪ್ರಶಾಂತ್ ಶೆಟ್ಟಿ ಬೈಲೂರು, ಕೋಶಾಧಿಕಾರಿಯಾಗಿ ಸಂದೀಪ್ ಮಾಡ ಬೈಲೂರು, ಉಪಾಧ್ಯಕ್ಷರುಗಳಾಗಿ ಅಶ್ವಿತ್ ಶೆಟ್ಟಿ, ಶರತ್ ಶೆಟ್ಟಿ, ಶಾಕೀರ್ ಹುಸೇನ್, ಸ್ಟೀವನ್ ಡಿಸೋಜ, ಗಣೇಶ್ ಕೌಡೂರು, ಗೌರವ ಸಲಹೆಗಾರರುಗಳಾಗಿ ಪ್ರಸನ್ನ ಶೆಟ್ಟಿ, ಡಾ| ಕಿರಣ್, ಮಹೇಶ್ ಮಾಡ, ಸುರೇಶ್ ಶೆಟ್ಟಿ ಸಾಯಿರಾಂ, ರಮೇಶ್ ಕಲ್ಲೊಟ್ಟೆ, ಸುರೇಶ್ ಕೆ., ದಿಲೀಪ್ ಶೆಟ್ಟಿ, ಮಾಲಿನಿ ಜೆ. ಶೆಟ್ಟಿ., ಜೊತೆ ಕಾರ್ಯದರ್ಶಿಯಾಗಿ ಶೈಲೇಶ್ ಕೋಟ್ಯಾನ್ ಬೈಲೂರು ಆಯ್ಕೆಯಾದರು.
