ಕಾರ್ಕಳಹೆಬ್ರಿ

ಕಾರ್ಕಳ: ಕ್ಷಯಮುಕ್ತ ಭಾರತ ಅಭಿಯಾನ – ಆರೋಗ್ಯ ತಪಾಸಣಾ ಶಿಬಿರ

ರೋಟರಿ ಕ್ಲಬ್ ಕಾರ್ಕಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರ ಉಡುಪಿ, ಜಿಲ್ಲಾ ಅಂಧತ್ವ ನಿವಾರಣ ವಿಭಾಗ ಉಡುಪಿ, ತಾಲೂಕು ಸಾರ್ವಜನಿಕ ಆಸ್ಪತ್ರೆ ಕಾರ್ಕಳ, ತಾಲೂಕು ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ಖಾಯಿಲೆಗಳ ವಿವಿಧ ಘಟಕಗಳು, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಬೆಟ್ಟು ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಬೆಟ್ಟು ಕಾರ್ಕಳ ಇಲ್ಲಿ ಸಾರ್ವಜನಿಕರಿಗೆ ವಿವಿಧ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಯಿತು.


ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ ಶಿಬಿರವನ್ನು ಉದ್ಘಾಟಿಸಿ ಸಮುದಾಯ ಮಟ್ಟದಲ್ಲಿ ಶೀಘ್ರ ಸಕ್ರಿಯ ಕ್ಷಯರೋಗ ತಪಾಸಣೆ ಮಾಡಿ 100 ದಿನಗಳ ಕ್ಷಯ ಮುಕ್ತ ಭಾರತ ಮಾಡುವ ಈ ಅಭಿಯಾನದಲ್ಲಿ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಲು ಕರೆ ನೀಡಿದರು.

ಈ ಶಿಬಿರದಲ್ಲಿ ಉಚಿತವಾಗಿ ಕ್ಷಯರೋಗ ತಪಾಸಣೆಯ ಎದೆಯ ಕ್ಷಕಿರಣ, ಮಧುಮೇಹ, ರಕ್ತದೊತ್ತಡ, ಹಿಮೋಗ್ಲೋಬಿನ್, ಕಣ್ಣಿನ ತಪಾಸಣೆ ಹಾಗೂ ಇತರೆ ಸಾಮಾನ್ಯ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು.

ಈ ಶಿಬಿರದಲ್ಲಿ ಒಟ್ಟು 105 ಜನ ಸ್ಥಳೀಯರಿಗೆ ವಿವಿಧ ಆರೋಗ್ಯ ತಪಾಸಣೆ ನಡೆಸಲಾಯಿತು.

ಈ ಶಿಬಿರದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರದಿಂದ ರೇಡಿಯೋ ಇಮೇಜಿಂಗ್ ಆಫೀಸರ್ ಕೃಷ್ಣ ಪ್ರಸಾದ್, ಸಾರ್ವಜನಿಕ ಆಸ್ಪತ್ರೆ ಕಾರ್ಕಳ ಇಲ್ಲಿನ ಆಯುಷ್ ವೈದ್ಯಾಧಿಕಾರಿ ಡಾ. ರೇಷ್ಮಾ, ಪ್ರಸಾದ್ ನೇತ್ರಾಲಯ ಉಡುಪಿಯ ಡಾ. ಪ್ರಶಾಂತ್ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಸಾದ್ ಪೂಜಾರಿ, ತಾಲೂಕು ಹಿರಿಯ ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕ ಶಿವಕುಮಾರ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಯೋಗೀಶ್ ಕಿಣಿ, ರೋಟರಿ ಕ್ಲಬ್ ನ ಕಾರ್ಯದರ್ಶಿ ರೊ. ಚೇತನ್ ನಾಯಕ್, ರೊ. ಜೇರೋಲ್ಡ್ ಕುಟಿನ್ಹೋ, ರೊ. ಶೇಖರ್ ಹೆಚ್. ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

 

Related posts

ಕಾರ್ಕಳದಲ್ಲಿ ಅಂದರ್ – ಬಾಹರ್ ಇಸ್ಪೀಟ್ ಜೂಜಾಟ: ಬಂಧನ

Madhyama Bimba

ಕರಾಟೆಯಲ್ಲಿ ಸಾಧನೆಗೈದ ನಿಟ್ಟೆಯ ಅವಳಿ ಸಹೋದರರಿಗೆ ‘ಯುವ ಸಾಧಕ’ ಬಿರುದು

Madhyama Bimba

2024-25 ನೇ ಸಾಲಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಾಧ್ಯಮ ಮಾನ್ಯತೆ ಹೊಂದಿದ ಪತ್ರಕರ್ತರಿಗೆ ಮೀಡಿಯಾ ಕಿಟ್: ಅರ್ಜಿ ಆಹ್ವಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More