ಕಾರ್ಕಳಹೆಬ್ರಿ

ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ- ಶೇ.65 ಬೋನಸ್ – ಶೇ.15ಡಿವಿಡೆಂಟ್ ವಿತರಣೆ

ಸಾಣೂರು ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ 21ನೇ ವಾರ್ಷಿಕ ಮಹಾಸಭೆಯು ಸಾಣೂರು ಸುವರ್ಣ ಗ್ರಾಮೋದಯ ಸೌಧದಲ್ಲಿ ಸೆ.24ರಂದು ಸಂಘದ ಅಧ್ಯಕ್ಷರಾದ ಸಾಣೂರು ನರಸಿಂಹ ಕಾಮತ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.


ಸಾಣೂರು ಹಾಲು ಉತ್ಪಾದಕರ ಸಹಕಾರ ಸಂಘವು ಕಳೆದ ಹಲವಾರು ವರ್ಷಗಳಂತೆ ಈ ವರ್ಷವೂ ಲೆಕ್ಕ ಪರಿಶೋಧನೆಯಲ್ಲಿ “ಎ” ಗ್ರೇಡ್ ಸಾಧನೆಯನ್ನು ಕಾಯ್ದುಕೊಂಡಿದ್ದು, ರೂ. 3,02,518.51/- ಲಾಭ ಗಳಿಕೆಯ ಜೊತೆಗೆ ಪ್ರಸಕ್ತ ವರ್ಷದಲ್ಲಿ ಹೈನುಗಾರ ಸದಸ್ಯರಿಗೆ 65% ಬೋನಸ್ ಮತ್ತು 15% ಡಿವಿಡೆಂಟ್ ವಿತರಿಸಿದೆ ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಎಲ್ಲಾ ಕಡೆ ಹಿರಿಯರೇ ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದು, ಯುವ ಜನತೆ ಆಸಕ್ತಿ ವಹಿಸಿ ಜವಾಬ್ದಾರಿ ತೆಗೆದುಕೊಂಡಾಗ ಮಾತ್ರ ಹೈನುಗಾರಿಕೆಯಲ್ಲಿ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.
ನಿರಂತರ ಏರುತ್ತಿರುವ ಹೈನುಗಾರಿಕೆಯ ಖರ್ಚು ವೆಚ್ಚಗಳ ಮಧ್ಯೆಯೂ, ಗುಣಮಟ್ಟದ ಹಾಲಿನ ಉತ್ಪಾದನೆಯ ಸಾಧನೆ ತೋರಿಸುತ್ತಿರುವ ಹೈನುಗಾರರಿಗೆ ಸರಕಾರದ ಸಹಾಯಧನ ಪ್ರತಿ ಲೀಟರ್ಗೆ ರೂ.5/- ಹೆಚ್ಚಿಸಬೇಕು ಮತ್ತು ದುಬಾರಿ ಆಗಿರುವ ನಂದಿನಿ ಪಶುಆಹಾರದ ದರದಲ್ಲಿ ಕೇಜಿಗೆ ಕನಿಷ್ಠ ರೂ.5/-ದರದಲ್ಲಿ ಸಬ್ಸಿಡಿಯನ್ನು ಒದಗಿಸುವಂತೆ ರಾಜ್ಯ ಸರಕಾರ ಮತ್ತು ಒಕ್ಕೂಟ ಹಾಗೂ ಹಾಲು ಮಹಾಮಂಡಳಿಗೆ ಒತ್ತಾಯಿಸಿ ಮಹಾಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.


ಒಕ್ಕೂಟದ ಸಹಾಯಕ ವ್ಯವಸ್ಥಾಪಕರಾದ ಯಶವಂತ್ ಸಂಘದ ಲೆಕ್ಕಪರಿಶೋಧನಾ ವರದಿಯ ಪರಿಶೀಲನೆಯ ಜೊತೆಗೆ ಹೈನುಗಾರ ಸದಸ್ಯರಿಗೆ ಹಾಲು ಒಕ್ಕೂಟ, ಹಾಲು ಮಹಾ ಮಂಡಳಿ, ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಸಿಗುವ ಹಲವಾರು ಯೋಜನೆಗಳು ಮತ್ತು ಸಾಲ ಸೌಲಭ್ಯಗಳ ಮಾಹಿತಿಯನ್ನು ನೀಡಿದರು.


ಈ ಸಂದರ್ಭದಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಹಾಕಿದ ಸದಸ್ಯರಾದ ಶ್ರೀಮತಿ ಮಾಲತಿ ಮೂಲ್ಯ, ರಾಯಲ್ ನೋರೋನ್ನಾ, ಜೆರೂಮ್. ವಿ. ಡಿ’ಸಿಲ್ವ, ಶ್ರೀಮತಿ ಲಿಯೋನಿಲಾ ಡಿಸೋಜ, ಶ್ರೀಮತಿ ಶ್ಯಾಮಲಾ ಶೆಟ್ಟಿ,ಸೋಮಶೇಖರ್ ರಾವ್, ಉಮೇಶ್ ಸುವರ್ಣ, ಕರುಣಾಕರ ದೇವಾಡಿಗ, ಸುಂದರ ಶೆಟ್ಟಿ ಮತ್ತು ಪ್ರೇಮ ಶೆಟ್ಟಿ, ಸಂಘಕ್ಕೆ ಗುಣಮಟ್ಟದ ಹಾಲು ಪೂರೈಸಿದ ಸದಸ್ಯರಾದ ದಾದು ಪೂಜಾರಿ, ಶ್ರೀಧರ ಸಮಗಾರ ಮತ್ತು ಸುಂದರಶೆಟ್ಟಿಯವರನ್ನು ನಗದು ಪುರಸ್ಕಾರದ ಜೊತೆಗೆ ಗೌರವಿಸಲಾಯಿತು.

ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಲಕ್ಷ್ಮಿತಾ ಡಿ. ಕುಲಾಲ್, ಪ್ರಜ್ಞಾ ಮೂಲ್ಯ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳ ಸಾಧನೆಗೈದ ಹರಿ. ಜೆ. ಶೆಟ್ಟಿಗಾರ್, ಅವ್ನಿ ಪಿ. ಶೆಟ್ಟಿ ಮತ್ತು ಕೌಶಿಕ ದೇವಾಡಿಗರನ್ನು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ನಿರ್ದೇಶಕರುಗಳಾದ ಕೊರಗ ಶೆಟ್ಟಿ, ಜಯಾನಂದ ಮೂಲ್ಯ, ಶ್ರೀಧರ ಸಮಗಾರ ಮತ್ತು ಶ್ರೀಮತಿ ಸಂಜೀವಿ ಉಪಸ್ಥಿತರಿದ್ದರು.

ನಿರ್ದೇಶಕರುಗಳಾದ ಶ್ರೀಮತಿ ಪೂರ್ಣಿಮಾ ಕಿಣಿ ಪ್ರಾರ್ಥಸಿದರು. ರಾಯಲ್ ನೊರೋನ್ನಾ ಸ್ವಾಗತಿಸಿದರು. ಜಯಶೆಟ್ಟಿಗಾರ್ ವಾರ್ಷಿಕ ವರದಿ ಮಂಡಿಸಿದರು. ಶ್ರೀಮತಿ ಯಶೋಧ ಸುವರ್ಣ2026-27ನೇ ಸಾಲಿನ ಅಂದಾಜು ಆಯವ್ಯಯವನ್ನು ಹಾಗೂ ಸೋಮಶೇಖರ್ ರಾವ್ ಸಂಘದ ಕಾರ್ಯ ಚಟುವಟಿಕೆಗಳು ಮತ್ತು ಯೋಜನೆಗಳ ವಿವರಗಳನ್ನು ಮಂಡಿಸಿದರು. ದಿಲೀಪ್ ಶೆಟ್ಟಿ ಸಂಘದ ನೀತಿ ಸಂಹಿತೆಯನ್ನು ಮಂಡಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ್ ಶೆಟ್ಟಿ 2024-25ನೇ ಸಾಲಿನ ಮಹಾಸಭೆಯ ನಡಾವಳಿಯನ್ನು ಓದಿ ಸ್ವೀಕರಿಸಿದರು. ನಿರ್ದೇಶಕರಾದ ಪ್ರವೀಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಹಾಲು ಪರೀಕ್ಷಕಿ ಶ್ರೀಮತಿ ಪ್ರಮೀಳಾ ವಂದಿಸಿದರು.

Related posts

ಕಡ್ತಲ ಶಾಲೆಯಲ್ಲಿ ಬ್ಯಾಗ್ ಹಾಗೂ ಶಾಲಾ ಪರಿಕರಗಳ ವಿತರಣೆ

Madhyama Bimba

ಗಾಂಧಿ ಜಯಂತಿ ಪ್ರಯುಕ್ತ ಕೆಕೆಎಂಪಿಯಿಂದ ಪ್ರಯಾಣಿಕರ ತಂಗುದಾಣ ಸ್ವಚ್ಛತಾ ಕಾರ್ಯಕ್ರಮ

Madhyama Bimba

ಬೆಳ್ಮಣ್ ಸರಕಾರಿ ಮಾದರಿ ಶಾಲೆ ಪ್ರಾರಂಭೋತ್ಸವ – ಎಲ್‌ಕೆಜಿ-ಯುಕೆಜಿ ತರಗತಿಗಳ ಉದ್ಘಾಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More