ಕಾರ್ಕಳಹೆಬ್ರಿ

ಅಮೃತಭಾರತಿಯಲ್ಲಿ ಸೇವಾ ಸಂಗಮ ಶಿಶು ಮಂದಿರ ಪ್ರಾರಂಭೋತ್ಸವ

ಹೆಬ್ರಿ ಅಮೃತಭಾರತಿಯಲ್ಲಿ ಸೇವಾ ಸಂಗಮ ಶಿಶು ಮಂದಿರದ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆಯನ್ನು ಟ್ರಸ್ಟ್‌ನ ಸದಸ್ಯ ಸುಧೀರ್ ನಾಯಕ್ ವಹಿಸಿ ಮಾತನಾಡಿ ಮಕ್ಕಳ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣ ಪೋಷಕರಿಂದ ಮತ್ತು ಸ್ವಸ್ಥ ಸಮಾಜದಿಂದ ಆಗಬೇಕು ಈ ನಿಟ್ಟಿನಲ್ಲಿ ಉತ್ತಮ ಸಂಸ್ಕಾರ ನೀಡುವ ಸಂಸ್ಥೆಗಳು ಬೇಕು ಎಂದು ತಿಳಿಸಿದರು.

ಟ್ರಸ್ಟ್ ನ ಕಾರ್ಯದರ್ಶಿ ಗುರುದಾಸ್ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುಟಾಣಿಗಳನ್ನು ಸಾಂಪ್ರದಾಯಿಕವಾಗಿ ಚೆಂಡೆ ವಾದನ, ಪೌರಾಣಿಕ ವೇಷಭೂಷಣದ ಮೂಲಕ ಶೋಭಾ ಯಾತ್ರೆ ನಡೆಸಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಅಮೃತ ಭಾರತಿ ಟ್ರಸ್ಟ್‌ನ ಬಾಲಕೃಷ್ಣ ಮಲ್ಯ, ರಾಜೇಶ್ ನಾಯಕ್, ಶೈಲೇಶ್ ಕಿಣಿ, ವಿಷ್ಣುಮೂರ್ತಿ ನಾಯಕ್, ವಸತಿ ನಿಲಯದ ಸದಸ್ಯ ರಾಮಕೃಷ್ಣ ಆಚಾರ್ಯ, ಸಂಸ್ಥೆಯ ಮುಖ್ಯಸ್ಥರಾದ ಅರುಣ್ ಹೆಚ್ ವೈ, ಅಪರ್ಣಾ ಆಚಾರ್, ಶಕುಂತಲಾ, ಪಿ ಆರ್ ಓ ವಿಜಯಕುಮಾರ್ ಶೆಟ್ಟಿ ಹಾಗೂ ಶಿಶು ಮಂದಿರದ ಸದಸ್ಯರಾದ ಆಶಾ ನಾಯಕ್, ಲಕ್ಷ್ಮೀ ನಾಯಕ್ ಉಪಸ್ಥಿತರಿದ್ದರು.

ಶಿಶು ಮಂದಿರದ ಮುಖ್ಯ ಶಿಕ್ಷಕಿ ಮೀನಾಕ್ಷಿ ಸ್ವಾಗತಿಸಿ, ಮಲ್ಲಿಕಾ ವಂದಿಸಿ, ಅನಿತಾ ನಿರೂಪಿಸಿ, ನಿವೇದಿತಾ ಸಹಕರಿಸಿದರು.

 

Related posts

ಸುಂದರ ಕೋಟ್ಯಾನ್ ಪಂಜಿಕುಡೇಲು ನಿಧನ

Madhyama Bimba

ಹೆಬ್ರಿ: ವಿಶ್ವ ಪರಿಸರ ದಿನಾಚರಣೆ

Madhyama Bimba

ಕಾರ್ಕಳ: ಮೋಟಾರ್ ಸೈಕಲ್‌ಗೆ ಕಾರು ಡಿಕ್ಕಿ- ಚಾಲಕ ಪರಾರಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More