ಕಾರ್ಕಳಹೆಬ್ರಿ

ಎಸ್.ವಿ.ಟಿ.: ವಿದ್ಯಾರ್ಥಿ ಸಂಘದ ಚುನಾವಣೆ

ಎಸ್.ವಿ.ಟಿ. ವನಿತಾ ಪದವಿ ಪೂರ್ವ ಕಾಲೇಜು ಕಾರ್ಕಳ ಇಲ್ಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆಯು ಪ್ರಜಾಪ್ರಭುತ್ವ ಮಾದರಿಯಲ್ಲಿ, ವಿದ್ಯುನ್ಮಾನ ಮತಯಂತ್ರವನ್ನು ಬಳಸಿ ನಡೆಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ನೇಮಿರಾಜ ಶೆಟ್ಟಿ ಕೆ ಮತ್ತು ಹಿರಿಯ ಸಹ ಶಿಕ್ಷಕರಾದ ಯೋಗೇಂದ್ರ ನಾಯಕ್ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಯಿತು.

ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದ ಸಿಬ್ಬಂದಿಗಳು ಮತಗಟ್ಟೆ ಅಧಿಕಾರಿಗಳಾಗಿ ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ದ್ವಿತೀಯ ವಾಣಿಜ್ಯ ವಿಭಾಗದ ಕು.ದೀಪ್ತಿ ಶೆಟ್ಟಿ , ಉಪಾಧ್ಯಕ್ಷರಾಗಿ ಪ್ರೌಢಶಾಲಾ ಭಾಗದ ಹತ್ತನೇ ತರಗತಿಯ ಕು.ಸಮೀಕ್ಷಾ, ಕಾರ್ಯದರ್ಶಿಯಾಗಿ ದ್ವಿತೀಯ ವಾಣಿಜ್ಯ ವಿಭಾಗದ ಕು.ಪ್ರೇಕ್ಷಾ ಆಚಾರ್ಯ ಆಯ್ಕೆಯಾದರು.
ಇದೇ ಸಂದರ್ಭದಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದ ಮಂತ್ರಿಮಂಡಲದ ರಚನೆಯು ನಡೆಯಿತು.

Related posts

ಅಜೆಕಾರು ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ,

Madhyama Bimba

ಮುಂಡ್ಕೂರು ಬಳಿ ಅಕ್ರಮ ಮರಳು ಸಾಗಾಟ

Madhyama Bimba

ಕಾರ್ಕಳ: ಅನಂತಶಯನ ಬಳಿ ಮೋಟಾರ್ ಸೈಕಲ್‌ಗೆ ಕಾರು ಡಿಕ್ಕಿ- ಗಾಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More