ಕಾರ್ಕಳ: ಅ. 13ರಂದು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಎದುರುಗಡೆ ಹೊಸದಾಗಿ ನಿರ್ಮಾಣ ಆಗುತ್ತಿರುವ ಕಟ್ಟಡದ ಹಿಂಬದಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿರಿಸಿ ಅಂದರ್ – ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ಖಚಿತ ಮಾಹಿತಿಯಂತೆ ಕಾರ್ಕಳ ನಗರ ಪೊಲೀಸ್ ಠಾಣಾ ಪಿಎಸ್‌ಐ ಸಂದೀಪ ಕುಮಾರ್ ಶೆಟ್ಟಿದಾಳಿ ನಡೆಸಿ 11 ಮಂದಿಯನ್ನು ಬಂಧಿಸಿದ್ದಾರೆ.
ಮೂಡಾರು ಗ್ರಾಮದ ಶ್ರೀನಿವಾಸ (50), ಕುಮಟಾ ತಾಲೂಕು ಚಂದಾವರ ಗ್ರಾಮದ ಮಂಜುನಾಥ (30), ಕಾರ್ಕಳ ಕಸಬಾ ಗ್ರಾಮದ ಮುತ್ತಣ್ಣ (21), ಮಂಜುನಾಥ (31), ನಾಗರಾಜ ಉಪ್ಪಾರ (47), ಲಕ್ಷಣ್, ಹೇಮ (60 ), ಮಿಯ್ಯಾರು ಗ್ರಾಮದ ಹೇಮನ್, ಬೈಪಾಸ ಬಳಿಯ ಚಿರಂಜೀವಿ, ಕಾರ್ಕಳ ಕಸಬಾ ಗ್ರಾಮದ ಯಮನೂರಪ್ಪ (20), ಆನೆಕೆರೆ ಬೈಪಾಸ ಬಳಿಯ ಮಲ್ಲಯ್ಯ (20) ಬಂಧಿತ ಆರೋಪಿಗಳು.
ಇಸ್ಟೀಟ್ ಜುಗಾರಿ ಅಟಕ್ಕೆ ಬಳಸಿದ ನಗದು ಹಣ 4950/- ರೂ. ಮತ್ತು52 ಇಸ್ಟೀಟ್ ಎಲೆಗಳು ಹಾಗೂ ನೆಲದ ಮೇಲೆ ಹಾಸಿದ ಹಳೆಯ ದಿನ ಪತ್ರಿಕೆಗಳನ್ನು ಸ್ವಾದೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.