ಕಾರ್ಕಳಹೆಬ್ರಿ

ಕಾಂತಾವರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮತ್ತು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪುಸ್ತಕ, ಸಮವಸ್ತ್ರ, ಲೇಖನ ಸಾಮಾಗ್ರಿ ವಿತರಣೆ

ಕಾರ್ಕಳ ತಾಲೂಕು ಕಾಂತಾವರ ಗ್ರಾಮದ ಶ್ರೀ ಕಾಂತೇಶ್ವರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ) ಮುನಿಯಾಲು, ಉದಯ ಶೆಟ್ಟಿ ಮುನಿಯಾಲು ಅಭಿಮಾನಿ ಬಳಗ ಮತ್ತು ಅಮೃತಹಸ್ತ ಜನಸೇವಾ ಟ್ರಸ್ಟ್ ಕಾಂತಾವರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪುಸ್ತಕ, ಲೇಖನ ಸಾಮಾಗ್ರಿ, ಕೊಡೆ ಮತ್ತು ಸಮವಸ್ತ್ರ ವಿತರಣೆ ಕಾರ್ಯಕ್ರಮವು ಶ್ರೀ ಕಾಂತೇಶ್ವರ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು.

ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಉದಯ ಶೆಟ್ಟಿ ಮುನಿಯಾಲು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶೈಕ್ಷಣಿಕ ಸಾಮಾಗ್ರಿಗಳ ವಿತರಣೆಗಳನ್ನು ಮಾಡಿದರು ಹಾಗೂ ವಿದ್ಯಾರ್ಥಿ ಜೀವನವು ಜೀವನದ ಅತ್ಯಂತ ಅಮೂಲ್ಯ ಕ್ಷಣಗಳಾಗಿದೆ, ಬದುಕನ್ನು ರೂಪಿಸುವ ಈ ಕ್ಷಣಗಳನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಂಡು ಓದಿನ ಕಡೆಗೆ ಹೆಚ್ಚು ಗಮನ ನೀಡಬೇಕು. ಆ ಮೂಲಕ ತಮ್ಮ ಭವಿಷ್ಯವನ್ನು ಭದ್ರ ಮಾಡಿಕೊಳ್ಳಬೇಕು ಎಂದರು.


ಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಉದ್ಯಮಿ ಗುಂಡುಕಲ್ಲು ಉದಯ ಶೆಟ್ಟಿ ಅವರು ಭಾಗವಹಿಸಿ ಮಾತನಾಡಿ ನಾವು ಕಲಿತ ಶಾಲೆಯು ಇದು ನನ್ನ ಜೀವನದ ಅತ್ಯಂತ ಭಾವನಾತ್ಮಕ ಸಂಸ್ಥೆಯಾಗಿದೆ, ಈ ಸಂಸ್ಥೆಯ ಶ್ರೇಯಸ್ಸಿಗಾಗಿ ದುಡಿಯಲು ಸದಾ ಸಿದ್ದನಿದ್ದೇನೆ ಮತ್ತು ನಮ್ಮ ಸಂಸ್ಥೆಯ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಿದ ಉದಯ ಶೆಟ್ಟಿ ಮುನಿಯಾಲು ಅವರಿಗೆ ಧನ್ಯವಾದಗಳನ್ನು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ರಘುನಾಥ ಶೆಟ್ಟಿ ಕಾಂತಾವರ ಮತ್ತು ಅಮೃತಹಸ್ತ ಜನಸೇವಾ ಟ್ರಸ್ಟಿನ ಸಂಚಾಲಕ ಸುದರ್ಶನ್ ಬಂಗೇರ ಬಾಂದೊಟ್ಟು ಸಂದರ್ಬೋಚಿತ ಮಾತನಾಡಿದರು.

 


ಈ ಸಂದರ್ಭದಲ್ಲಿ ಶಾಲೆಯ ಸಂಚಾಲಕರಾದ ರಂಜಿತ್ ಶೆಟ್ಟಿ, ಶಾಲಾಭಿವೃದ್ದಿ ಮಂಡಳಿಯ ಅಧ್ಯಕ್ಷೆ ಶ್ರೀಮತಿ ರೇಶ್ಮಾ ದೇವಾಡಿಗ, ಶಿಕ್ಷಣ ಪ್ರೇಮಿ ಪಿಕೆ ಜಾರ್ಜ್, ಅಮೃತಹಸ್ತ ಜನಸೇವಾ ಟ್ರಸ್ಟಿನ ಅಧ್ಯಕ್ಷ ಅರುಣ್ ಕೋಟ್ಯಾನ್ ಕೇಪ್ಲಾಜೆ, ನಿವೃತ್ತ ಶಿಕ್ಷಕ ಕಮಾಲಾಕರ್, ಗುರಿಗುತ್ತು ಪ್ರಕಾಶ್ ಶೆಟ್ಟಿ, ಲಿಂಗಪ್ಪ ದೇವಾಡಿಗ ಆಂಬೊಡಿಮಾರ್, ಕುದ್ದೊಟ್ಟು ವಾಸು ಶೆಟ್ಟಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಯ ಕೊಟ್ಯಾನ್ ಪಡ್ಡಮೇರು ಮೊದಲಾದವರು ಉಪಸ್ಥಿತರಿದ್ದರು.

 

ಶಾಲೆಯ ಪ್ರಧಾನಾಧ್ಯಪಕರಾದ ತಿಪ್ಪೆಸ್ವಾಮಿ ಸ್ವಾಗತಿಸಿದರು. ಸಂಸ್ಥೆಯ ಪೂರ್ವ ವಿದ್ಯಾರ್ಥಿ ಪ್ರದೀಪ್ ಬೇಲಾಡಿ ಪ್ರಸ್ತಾವನೆಗೈದರು, ಹಿರಿಯ ಶಿಕ್ಷಕರಾದ ಪ್ರಕಾಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ರೇಖಾ ಧನ್ಯವಾದ ಸಲ್ಲಿಸಿದರು.

 

Related posts

ರಸ್ತೆಯಲ್ಲಿ ಸಿಕ್ಕ ಮೊಬೈಲನ್ನು ವಾರೀಸುದಾರರಿಗೆ ಹಿಂತಿರುಗಿಸಿ ಬೈಲೂರಿನ ಆಟೋಚಾಲಕ

Madhyama Bimba

ರಾಜೇಶ್ವರಿ ನ್ಯಾಷನಲ್ ಸ್ಕೂಲ್‌ನಲ್ಲಿ ಕ್ಲಬ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

Madhyama Bimba

ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ : ” ಶತರಥ ” ಶಾಲಾ ಮಕ್ಕಳ ವಾಹನ ವ್ಯವಸ್ಥೆಗೆ ಚಾಲನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More