ಕಾರ್ಕಳ

ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಕಾರ್ಕಳದಲ್ಲಿ ಕ್ರಿಯೇಟಿವ್ ಸ್ಫೂರ್ತಿ ಮಾತು-15 ಸರಣಿ ಕಾರ್ಯಕ್ರಮ

ವಿದ್ಯಾರ್ಥಿಗಳು ಕಲಿಕೆ ಮಾತ್ರವಲ್ಲದೆ ಅನೇಕ ಮೌಲ್ಯಗಳು, ಶಿಸ್ತು, ಆತ್ಮವಿಶ್ವಾಸವನ್ನು ಮೈಗೂಡಿಸಿಕೊಳ್ಳಬೇಕೆಂಬ ಸದುದ್ದೇಶದಿಂದ ಪ್ರಾರಂಭವಾದ ಕ್ರಿಯೇಟಿವ್ ಸಂಸ್ಥೆಯ ವಿನೂತನ ಪರಿಕಲ್ಪನೆ ಕ್ರಿಯೇಟಿವ್ ಸ್ಫೂರ್ತಿ ಮಾತು ಕಾರ್ಯಕ್ರಮದ 15 ಸರಣಿ ಕಾರ್ಯಕ್ರಮವು ಸಪ್ತಗಿರಿ ವೇದಿಕೆಯಲ್ಲಿ ಜರುಗಿತು.


ಖ್ಯಾತ ವಾಗ್ಮಿಗಳು, ರಾಷ್ಟ್ರೀಯ ಜೆಸಿಐ ತರಬೇತುರಾರರಾದ ಕೆ. ರಾಜೇಂದ್ರ ಭಟ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ವಿದ್ಯಾರ್ಥಿಗಳಲ್ಲಿ ಅನೇಕ ಸಾಮರ್ಥ್ಯಗಳಿವೆ ಅದನ್ನು ಶೋಧಿಸಿ ಹೊರತೆಗೆದಾಗ ಅವರಿಗೆ ತಮ್ಮ ಸಾಮರ್ಥ್ಯದ ಅರಿವು ಉಂಟಾಗುತ್ತದೆ. ಓದು ಅನ್ನುವುದು ಭಾವನಾತ್ಮಕವಾದಾಗ ಅದು ಸಾರ್ಥಕತೆಯನ್ನು ಪಡೆಯುತ್ತದೆ ತಾಳ್ಮೆ ವಿದ್ಯಾರ್ಥಿಯನ್ನು ಉತ್ತುಂಗ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ನಿರ್ಭೀತಿಯಿಂದ ಕೆಲಸ ಕಾರ್ಯಗಳನ್ನು ಮಾಡಿದಾಗ ಯಶಸ್ಸನ್ನು ಕಾಣಲು ಸಾಧ್ಯ. ಸರಳ ಜೀವನ ಶೈಲಿಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದು ವಿವಿಧ ಪ್ರಾತ್ಯಕ್ಷಿಕೆ ಗಳ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಕಾಲೇಜಿನ ಸಹ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿಯವರು ಸಂಸ್ಥೆಯಲ್ಲಿ ನಡೆಯುವ ಪಾಠ ಪ್ರವಚನಗಳು ಹಾಗೂ ಶೈಕ್ಷಣಿಕ ವರ್ಷದಲ್ಲಿ ನಡೆಯುವ ಅನೇಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಉಪನ್ಯಾಸಕರಾದ ಶ್ರೀ ಲಕ್ಷ್ಮಿಕಾಂತ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ವೃಂದ, ಉಪನ್ಯಾಸಕ ವರ್ಗ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ಕೆರ್ವಾಶೆಯಲ್ಲಿ ಆ. 09ರಂದು ಆಟಿಡೊಂಜಿ ಕೆಸರ್ದ ಕೂಟ

Madhyama Bimba

ಪುರಸಭೆ ವ್ಯಾಪ್ತಿಯಲ್ಲಿ ಅಸಮರ್ಪಕ ಕಸ ವಿಲೇವಾರಿ ತಕ್ಷಣ ಕ್ರಮಕ್ಕೆ ಆಗ್ರಹ : ಶಾಸಕರ ಮೌನಕ್ಕೆ‌ ಆಕ್ರೋಶ ನಮ್ಮೂರಿಗೂ ಒಬ್ಬ ಜನಪರ ಕಾಳಜಿಯ ಶಾಸಕ ಬೇಕಿತ್ತು- ಶುಭದರಾವ್

Madhyama Bimba

ಜು.19 ರಂದು ಕಾರ್ಕಳ ಕ್ರಿಯೇಟಿವ್ ಕಾಲೇಜಿನಲ್ಲಿ “ಕ್ರಿಯೇಟಿವ್ ಪುಸ್ತಕಧಾರೆ-2026: 25 ಕೃತಿಗಳ ಅನಾವರಣ: ಅಜಿತ್ ಹನುಮಕ್ಕನವರ್ ಭಾಗಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More