ಕಾರ್ಕಳ

ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮಶಾಲೆ ಮತ್ತು ಪ್ರೌಢಶಾಲೆ ಪ್ರಾರಂಭೋತ್ಸವ

ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯ ಪ್ರಾರಂಭೊತ್ಸವ ಜೂ. 1ರಂದು ನೆರವೇರಿತು.


ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಾಧನೆ ಹೆಜ್ಜೆ ಗುರುತುಗಳನ್ನು ದೃಶ್ಯಾಧಾರಿತವಾಗಿ ವಿಜ್ಞಾನ ಶಿಕ್ಷಕಿಯಾಗಿರುವ ಕುಮಾರಿ ಅನಿಶಾ ಪ್ರಸ್ತುತಪಡಿಸಿದರು.


ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ವೈದ್ಯಾಧಿಕಾರಿಯಾದ ವಿದ್ಯಾ ಮಾತನಾಡಿ ದೈಹಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಉತ್ತಮವಾಗಿರುವುದು ಆರೋಗ್ಯದ ಲಕ್ಷಣ.ಧ್ಯಾನ ವ್ಯಾಯಾಮಗಳ ಮೂಲಕ ಉತ್ತಮ ಆರೋಗ್ಯವನ್ನು ನಾವು ಪಡೆಯಬಹುದು. ಜೀವನದಲ್ಲಿ ಒತ್ತಡಗಳು ಜಾಸ್ತಿಯಾದಾಗ ಆರೋಗ್ಯ ಹಾಳಾಗುತ್ತದೆ ಎಂದು ಹೇಳಿದರು.


ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯ ಉಪಪ್ರಾಂಶುಪಾಲೆಯಾಗಿರುವ ಶ್ರೀಮತಿ ವಾಣಿ.ಕೆ ಶಾಲಾ ಶಿಸ್ತು ಹಾಗೂ ನಿಯಮಗಳು, ಇಡೀ ವರ್ಷದ ಶಾಲೆಯ ಆಗುಹೋಗುಗಳ ಬಗ್ಗೆ ವಿವರಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.


ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿಇಒ ಹಾಗೂ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ದಿನೇಶ್ ಎಂ. ಕೊಡವೂರು2026-27ರ ಶೈಕ್ಷಣಿಕ ವರ್ಷದ ಬಗ್ಗೆ ಶಾಲಾ ಮಾಹಿತಿಯನ್ನು ನೀಡಿದರು.

ಜೆಇಎ ಸಂಯೋಜಕರಾದ ಸಂದೀಪ್ ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಬಗ್ಗೆಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಸ್ಟೂಡೆಂಟ್ ಡೀನ್ ಅಕಾಡಮಿಕ್ಸ್ ಡಾ.ಮಿಥುನ್.ಯು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳನ್ನು ಚಂಡೆ ನಾದದೊಂದಿಗೆ, ಸುಗಂಧ ಜಲವನ್ನು ಚಿಮುಕಿಸಿ, ಪೆನ್ನು ನೀಡುವ ಮೂಲಕ ವಿಶೇಷವಾಗಿ ಸ್ವಾಗತಿಸಲಾಯಿತು.

ವಿದ್ಯಾರ್ಥಿನಿ ಸಮೃದ್ಧಿ ಪೈ ಪ್ರಾರ್ಥಿಸಿ ,ಸಹ ಶಿಕ್ಷಕಿ ಸುಪ್ರಿಯಾ ಕಾರ್ಯಕ್ರಮ ನಿರ್ವಹಿಸಿದರು.

Related posts

ಸಂತ ಲಾರೆನ್ಸರ ವಾರ್ಷಿಕ ಮಹೋತ್ಸವದ ಭವ್ಯ ಸಮಾರೋಪ

Madhyama Bimba

ಮುನಿಯಾಲು: ತ್ರಯೋದಶ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Madhyama Bimba

ಎಸ್.ವಿ.ಟಿ ಕನ್ನಡ ಮಾಧ್ಯಮ: ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 100 ಫಲಿತಾಂಶ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More