Blog

ಮೂಡುಬಿದಿರೆ ಲಯನ್ಸ್ ಕ್ಲಬ್ ‘ಹರಿಭವ’ ಲೋಕಾಪ೯ಣೆ

ಮೂಡುಬಿದಿರೆ ಲಯನ್ಸ್ ಕ್ಲಬ್‌ನ ಸುವರ್ಣ ಮಹೋತ್ಸವದ ಅಂಗವಾಗಿ ಲಯನ್ಸ್ ಸೇವಾ ಟ್ರಸ್ಟ್ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ಕೀರ್ತಿನಗರದ ಲಯನ್ಸ್ ಪಾರ್ಕ್‌ನಲ್ಲಿ ನಿರ್ಮಿಸಲಾದ ‘ಹರಿಭವ’ ಸಭಾಭವನವನ್ನು ಲಯನ್ಸ್ ಜಿಲ್ಲೆ 317ಡಿ ಜಿಲ್ಲಾ ರಾಜ್ಯಪಾಲ ಕುಡ್ಪಿ ಅರವಿಂದ ಶೆಣೈ ಲೋಕಾರ್ಪಣೆಗೊಳಿಸಿದರು.

ಸುವರ್ಣ ಮಹೋತ್ಸವ ವರ್ಷದ ಅಧ್ಯಕ್ಷ ಹಾಗೂ ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಭಾಭವನವನ್ನು ಯಾವುದೇ ಸೇವಾ ಶುಲ್ಕವಿಲ್ಲದೆ ಸಾರ್ವಜನಿಕ ಹಾಗೂ ಸರ್ಕಾರಿ ಕಾರ್ಯಕ್ರಮಗಳಿಗೆ ನೀಡಲಾಗುವುದು ಎಂದರು.

ಎಂ.ಕೆ. ಪದ್ಮನಾಭ ಭವಾನಿ ಭೋಜನ ಶಾಲೆಯನ್ನು ಉದ್ಘಾಟಿಸಿದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿದರು.

ನಿಯೋಜಿತ ಜಿಲ್ಲಾ ರಾಜ್ಯಪಾಲ ಹೆಚ್.ಎಂ. ತಾರಾನಾಥ್, ಚುನಾಯಿತ ಪ್ರಥಮ ಜಿಲ್ಲಾ ಉಪ ರಾಜ್ಯಪಾಲ ಗೋವರ್ಧನ್ ಕೆ. ಶೆಟ್ಟಿ, ಚುನಾಯಿತ ದ್ವಿತೀಯ ಜಿಲ್ಲಾ ಉಪ ರಾಜ್ಯಪಾಲ ಲ. ವೆಂಕಟೇಶ್ ಹೆಬ್ಬಾರ್, ಪ್ರಾಂತೀಯ ಅಧ್ಯಕ್ಷ ಡಿ.ಕೆ. ಜಗದೀಶ್ಚಂದ್ರ ಹಾಗೂ ವಲಯಾಧ್ಯಕ್ಷ ಜೊಸ್ಸಿ ಮೆನೇಜಸ್ ಶುಭಹಾರೈಸಿದರು.

ಕಾರ್ಯದರ್ಶಿ ಎಚ್.ಆರ್. ಸಂಪುಟ ಚಂದ್ರೇಗೌಡ ಹಾಗೂ ಕೋಶಾಧಿಕಾರಿ ಬಾಲಕೃಷ್ಣ ಹೆಗ್ಡೆ ಮಾತನಾಡಿದರು.

ಕ್ಲಬ್ ಕಾರ್ಯದರ್ಶಿ ಓಸ್ವಾಲ್ಡ್ ಮಾರ್ಟಿನ್ ಡಿಕೋಸ್ತ, ಕೋಶಾಧಿಕಾರಿ ಹರೀಶ್ ತಂತ್ರಿ ಎಂ., ಲಯನ್ಸ್ ಸೇವಾ ಟ್ರಸ್ಟ್ ಕಾರ್ಯದರ್ಶಿ ಕ್ಲಿಫರ್ಡ್ ರೋಕಿ ಪಿಂಟೊ, ಕೋಶಾಧಿಕಾರಿ ವಿನೋದ್ ವಿಲೈಡ್ ಡೇಸಾ, ಲಿಯೋ ಕ್ಲಬ್ ಅಧ್ಯಕ್ಷ ಪ್ರಖ್ಯಾತ್ ಹೆಗ್ಡೆ, ಕಾರ್ಯದರ್ಶಿ ಸ್ವಯಂ ಎಸ್. ಪೂಜಾರಿ ಹಾಗೂ ಕೋಶಾಧಿಕಾರಿ ಶಶಾಂಕ್ ಉಪಸ್ಥಿತರಿದ್ದರು.

ಶೋಭಾ ಶಿವಪ್ರಸಾದ್ ಹೆಗ್ಡೆ 50 ಮಂದಿ ಮಾತೆಯರಿಗೆ ಸೀರೆ ವಿತರಿಸಿದರು.

ಮಾಜಿ ಅಧ್ಯಕ್ಷ ಡಾ. ನಿತ್ಯಾನಂದ ಶೆಟ್ಟಿಯವರ ಪರವಾಗಿ ಪ್ರಶಾಂತ್ ಶೆಟ್ಟಿ, ಶಿವಪ್ರಸಾದ್ ಹೆಗ್ಡೆ–ಶೋಭಾ ಎಸ್. ಹೆಗ್ಡೆ ದಂಪತಿ, ಎಂ.ಕೆ. ದಿನೇಶ್–ಶಾಂತಿ ದಿನೇಶ್ ದಂಪತಿ ಹಾಗೂ ಕುಡ್ಪಿ ಅರವಿಂದ ಶೆಣೈ ಅವರನ್ನು ಸನ್ಮಾನಿಸಲಾಯಿತು.

ಗುಣಪಾಲ ಕಡಂಬ, ಹಿರಿಯ ಸದಸ್ಯರು, ಮಾಜಿ ಅಧ್ಯಕ್ಷರು, ದಾನಿಗಳು, ಟ್ರಸ್ಟ್ ಸದಸ್ಯರು ಹಾಗೂ ಕಾಮಗಾರಿ ನಿರ್ವಹಿಸಿದವರನ್ನು ಗೌರವಿಸಲಾಯಿತು. ವಲೇರಿಯನ್ ಸಿಕ್ಕೇರಾ, ಅಲ್ಲಿನ್ ಹರ್ಷ, ಅರುಣ್ ಡಿಸಿಲ್ವ, ವಲೇರಿಯನ್ ಸಿಕ್ವೆರ, ಆಲ್ವಿನ್ ಮಿನೇಜಸ್ ಹಾಗೂ ವಿನೋದ್ ಡೇಸಾ ಸನ್ಮಾನಿತರ ವಿವರ ನೀಡಿದರು.

ವೈಷ್ಣವಿ ವಿ. ಭಟ್ ಪ್ರಾರ್ಥಿಸಿದರು. ಶಿವಪ್ರಸಾದ್ ಹೆಗ್ಡೆ ಸ್ವಾಗತಿಸಿದರು. ವಿನಯ ಕುಮಾರ್ ಶೆಟ್ಟಿ ಮತ್ತು ದಯಾನಂದ ನಿರೂಪಿಸಿದರು. ಓಸ್ವಾಲ್ಡ್ ಡಿಕೋಸ್ತ ವಂದಿಸಿದರು. ಡಾ. ಪ್ರಕೃತಿ ಎಸ್. ಹೆಗ್ಡೆ ಭರತನಾಟ್ಯ ಪ್ರದರ್ಶಿಸಿದರು. ಬಳಿಕ ಚೈತನ್ಯ ಕಲಾವಿದರು ಜೈಲೂರು ತಂಡದಿಂದ ‘ರಾಘು ಮಾಸ್ಟ್ರು’ ತುಳು ನಾಟಕ ಪ್ರದರ್ಶನ ನಡೆಯಿತು.

Related posts

ಫೇಸ್ಬುಕ್ ಕಿರಿಕ್ – ಓರ್ವ ಬಂಧನ

Madhyama Bimba

ಬೈಕ್ ಕಾರು ಅಪಘಾತ

Madhyama Bimba

5 ದಿನಗಳ ಕಾಲ ಕಟ್ಟೆಚ್ಚರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More