ಕಾರ್ಕಳ

ಕೆ.ಎಂಇ.ಎಸ್. ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಭಾ ಪುರಸ್ಕಾರ

ನಾವು ಗಳಿಸಿದ ಹಣದಲ್ಲಿ ದಾನ ಮಾಡಿದರೆ ನಮ್ಮ ಜೀವನ ಸಾರ್ಥಕವಾಗುವುದರಲ್ಲಿ ಎರಡು ಮಾತಿಲ್ಲ. ವಿದ್ಯಾದಾನವೂ ಅತಿ ಶ್ರೇಷ್ಠ. ಮಾನವನ ಜೀವನಕ್ಕೆ ಅರ್ಥಬರಬೇಕಿದ್ದರೆ ಆತನು ಇತರರಿಗಾಗಿ ಬದುಕಬೇಕು. ವಿದ್ಯಾರ್ಥಿಗಳು ವಿದ್ಯೆಯೊಂದಿಗೆ, ಗುರಿಯನ್ನು ಹೊಂದಿರಬೇಕು. ಗುರು ಮತ್ತು ಗುರಿಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ. ಕೆ.ಎಮ್.ಇ.ಎಸ್ ವಿಧ್ಯಾಸಂಸ್ಥೆ ಎಲ್ಲಾ ದೃಷ್ಟಿಯಲ್ಲಿಯೂ ಅತ್ಯುತ್ತಮ ವಿಧ್ಯಾ ಸಂಸ್ಥೆಯಾಗಿದೆ. ತಂದೆ-ತಾಯಿ, ಗುರು ಹಿರಿಯರ ಆಶೀರ್ವಾದವೇ ನಮ್ಮನ್ನು ಕೊನೆಯವರೆಗೆ ಸಲಹುತ್ತದೆ ಎಂದು ಕಮಲಾಕ್ಷ ಕಾಮತ್ ಸಿ.ಎ ಹೇಳಿದರು.

ಅವರು ಕೆ.ಎಂಇ.ಎಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಅವರು ಸಂಸ್ಥೆಗೆ ನೀಡಿದ ನೀರಿನ ಫಿಲ್ಟರನ್ನು ಉದ್ಘಾಟಿಸಲಾಯಿತು.

ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ.ಎಸ್ ಇಮ್ತಿಯಾಜ್ ಅಹಮ್ಮದ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ನಮ್ಮ ಶಾಲೆಯಲ್ಲಿ ಅತಿ ಕಡಿಮೆ ಫೀಝ್ ತೆಗೆದುಕೊಂಡು ಅತ್ಯುನ್ನತ ಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಕಾಲೇಜಿನ ಸರ್ವತೋಮುಖ ಸಹಕಾರವನ್ನು ನೀಡಿದ್ದಾರೆ ಮುಂದೆಯೂ ಇದು ಮುಂದುವರೆಯಬೇಕು ಎಂದು ಹೇಳಿದರು.

ಕಾಲೇಜು ವಿಭಾಗದ ಉನ್ನತ ಶ್ರೇಣಿಯಲ್ಲಿ ಪಾಸಾದ 46 ವಿದ್ಯಾರ್ಥಿಗಳನ್ನು ಮತ್ತು ಹೈಸ್ಕೂಲು ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿರುವ 21ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿ ಅಭಿಶೇಕ್ ಮಡಿವಾಳ, ಕಾಲೇಜಿನ ಪ್ರಾಂಶುಪಾಲರಾದ ಕೆ.ಬಾಲಕೃಷ್ಣ ವೇದಿಕೆಯಲ್ಲಿದ್ದರು.

ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲೊಲಿಟಾ ಡಿಸಿಲ್ವಾ ಸ್ವಾಗತಿಸಿದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪಾಟ್ಕರ್ ಪ್ರಾಸ್ತವಿಕ ಭಾಷಣ ಮಾಡಿದರು. ಉಪನ್ಯಾಸಕರಾದ ಗುರುಕುಮಾರ್, ಸಂಗೀತ ಅಧ್ಯಾಪಕಿ ಹಿಲ್ಡಾ ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ರಾಸಾಯನ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಅಲ್ವಿನಾ ಡಿ ಸೋಜ ಕಾರ್ಯಕ್ರಮ ನಿರೂಪಿಸಿದರು.
ಉಪನ್ಯಾಸಕಿ ನಿವೇದಿತಾ ಧನ್ಯವಾದ ಸಲ್ಲಿಸಿದರು.

Related posts

ಮೇ 23 ಶನಿವಾರದಂದು ನಾನಿಲ್ತಾರು ದಿ. ಸುಂದರ ಮೂಲ್ಯ ಅಭಿಮಾನಿ ಬಳಗದ ವತಿಯಿಂದ ಸಂಸ್ಮರಣಾ ಕಾರ್ಯಕ್ರಮ

Madhyama Bimba

ಜೆಇಇ ಮೈನ್ಸ್ ಫಲಿತಾಂಶ ಪ್ರಕಟ: ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ

Madhyama Bimba

ಮೌಲ್ಯ ಸಂಗಮ ಸಮಾರೋಪ ಸಮಾರಂಭ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More