ಕಾರ್ಕಳ

ಶಿರ್ಲಾಲು ಸೂರ್ಯಂಥೋಕ್ಲು ಶಾಲೆಯಲ್ಲಿ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿ ವಿತರಣೆ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೂರ್ಯಂಥೋಕ್ಲು ಶಿರ್ಲಾಲು ಇಲ್ಲಿಗೆ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿ ವಿತರಣೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶಶಿಧರ ವಾಗ್ಲೆ ವಹಿಸಿದ್ದರು.

ಮುಖ್ಯ ಅತಿಥಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷರಾದ ರೋಟೇರಿಯನ್ ಮಂಜುನಾಥ ಹೆಗಡೆ ಮಕ್ಕಳಿಗೆ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ನಿಕಟ ಪೂರ್ವ ಅಧ್ಯಕ್ಷರಾದ ರೋಟೇರಿಯನ್ ಉಪೇಂದ್ರ ವಾಗ್ಲೆ ಮಾತನಾಡಿ ಇಂತಹ ಗ್ರಾಮೀಣ ಸಂಸ್ಥೆಗಳಿಗೆ ತಮ್ಮ ನೆರವು ಸದಾ ದೊರೆಯುವ ಭರವಸೆ ನೀಡಿದರು.

ಕೋಶಾಧಿಕಾರಿ ರೋಟೇರಿಯನ್ ಪ್ರಶಾಂತ್ ಜೈನ್ ಭಾಗವಹಿಸಿದ್ದರು.
ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವೀಂದ್ರ ಪೂಜಾರಿ ಉಪಸ್ಥಿತರಿದ್ದರು.

ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಪೋಷಕರು ಭಾಗವಹಿಸಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಜೆಸಿಂತಾ ಕ್ಯಾಸ್ಟಲಿನೋ ಪ್ರಸ್ತಾವನೆಗೈದು, ಸ್ವಾಗತಿಸಿದರು. ಸಹ ಶಿಕ್ಷಕಿ ಅರುಂಧತಿ ಧನ್ಯವಾದ ಸಲ್ಲಿಸಿದರು. ಗೌರವ ಶಿಕ್ಷಕಿ ಮುಕ್ತಾ ಕಾರ್ಯಕ್ರಮ ನಿರೂಪಿಸಿದರು.

Related posts

ಹೆಬ್ರಿ: ವ್ಯಕ್ತಿ ನಾಪತ್ತೆ

Madhyama Bimba

ಮಾಳದ ನಿವಾಸಿ ನಾರಾಯಣ ಮೃತ್ಯು

Madhyama Bimba

ಮುದ್ರಾಡಿ: ಕ್ರಾಫ್ಟ್ ತರಗತಿ ಉದ್ಘಾಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More