ಕಾರ್ಕಳ

ಕಾರ್ಕಳ: ಡಿವೈಡರ್‌ಗೆ ಮಿನಿ ಲಾರಿ ಡಿಕ್ಕಿ

ಕಾರ್ಕಳ: ಸಾಣೂರು ಪುಲ್ಕೇರಿ ಬೈಪಾಸ್ ಬಳಿ ಮಿನಿ ಲಾರಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಘಟನೆ ಜು. 06ರಂದು ಮುಂಜಾನೆ ನಡೆದಿದೆ.

ಕಾರ್ಕಳದಿಂದ ಬೆಳುವಾಯಿ ಮೂಡಬಿದ್ರೆ ಕಡೆಗೆ ಹೋಗುತ್ತಿದ್ದ ಮಿನಿಲಾರಿ ಚಾಲಕನ ಅತಿ ವೇಗದ ಚಾಲನೆಯಿಂದ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ಪರಿಣಾಮ ಲಾರಿಯಲ್ಲಿದ್ದ ರಮೇಶ ಎಂಬವರು ರಸ್ತೆಗೆ ಬಿದ್ದು ಗಾಯಗೊಂಡು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಚಾಲಕ ಸಚಿನ್‌ರಿಗೂ ಗಾಯವಾಗಿರುತ್ತದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಕಾರ್ಕಳ: ಶ್ರೀ ಲಕ್ಷ್ಮೀ ಜ್ಯುವೆಲ್ಲರ್‍ಸ್ ದೀಪಾವಳಿ ಕೊಡುಗೆ- ಪ್ರತಿ ಗ್ರಾಂ ಚಿನ್ನಕ್ಕೆ 400 ರೂ. ರಿಯಾಯಿತಿ

Madhyama Bimba

ಅಶಕ್ತ ಕುಟುಂಬಕ್ಕೆ ನೂತನ ಗ್ರಹ ನಿರ್ಮಾಣದ ಆಸರೆ: ಜಿಎಸ್‌ಬಿ ಸಮಾಜ ಹಿತ ರಕ್ಷಣಾ ವೇದಿಕೆಯ ಮಾದರಿ ಕಾರ್ಯ

Madhyama Bimba

ಹೆಬ್ರಿ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More