ಕಾರ್ಕಳ : ಕಾರ್ಕಳ ಬಸ್ಸು ಏಜೆಂಟರ ಬಳಗದಿಂದ ನ. 1ರಂದು ಕಾರ್ಕಳ ಬಸ್‌ಸ್ಟ್ಯಾಂಡ್ ಸೌಹಾರ್ದ ಸಂಗಮ ಸಭಾ ವೇದಿಕೆಯಲ್ಲಿ 23ನೇ ವರ್ಷದ ಸೌಹಾರ್ದ ಸಂಗಮ, ಸನ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ ಸಮಾರಂಭ ರಕ್ತದಾನ ಶಿಬಿರ ಜರಗಲಿದೆ.
ಕಾಯಕ್ರಮದ ಉದ್ಘಾಟನೆಯನ್ನು ಕಾರ್ಕಳ ನಿವೃತ್ತ ಚಾರ್ಟರ್ಡ್ ಅಕೌಂಟೆಂಟ್ ಕೆ. ಕಮಲಾಕ್ಷ ಕಾಮತ್ ವಹಿಸಿಕೊಳ್ಳಲಿರುವರು.
ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ, ಮಿಯ್ಯಾರು ಸಂತ ಡೊಮಿನಿಕ್ ದೇವಾಲಯದ ಧರ್ಮಗುರುಗಳಾದ ವಂದನೀಯ ರೆ| ಫಾ| ಕ್ಯಾನ್ಯುಟ್ ಬರ್ಬೋಜಾ, ಮಲ್ಪೆ ಸಯ್ಯದಿನಾ ಅಬೂಬಕರ್ ಸಿದ್ದೀಕ್ ಜಾಮಿಯಾ ಮಸೀದಿಯ ಧರ್ಮಗುರುಗಳಾದ ಮೌಲನಾ ಇಮ್ರಾನುಲ್ಲಾ ಖಾನ್ ಮನ್ಸೂರಿ ಆಶೀರ್ವಚನ ನೀಡಲಿರುವರು.
ಅಧ್ಯಕ್ಷತೆಯನ್ನು ಗಣಿತನಗರ ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಸುಧಾಕರ ಶೆಟ್ಟಿ ವಹಿಸಿಕೊಳ್ಳಲಿರುವರು. ಸೌಹಾರ್ದ ಭಾಷಣವನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ ಮಾಡಲಿರುವರು.
ಮುಖ್ಯ ಅತಿಥಿಗಳಾಗಿ ಕಾರ್ಕಳ ಪುರಸಭೆಯ ಅಧ್ಯಕ್ಷರಾದ ಯೋಗೀಶ್ ದೇವಾಡಿಗ, ರೋಟರಿ ಕ್ಲಬ್ ಕಾರ್ಕಳ ಮಾಜಿ ಸಹಾಯಕ ಗವರ್ನರ್ ಹರಿಪ್ರಕಾಶ್ ಶೆಟ್ಟಿ, ರೇಷ್ಮಾ, ಮೋಟಾರ್‍ಸ್‌ನ ಮಾಲಕರಾದ ಗೋಪಿನಾಥ್ ಭಟ್ ಮುನಿಯಾಲು, ಬಜಗೋಳಿ ಉದ್ಯಮಿಗಳಾದ ಸತೀಶ್ ಜಿ. ಶೆಟ್ಟಿ, ಕಾರ್ಕಳ ಉದ್ಯಮಿಗಳಾದ ಚೇತನ್ ನಾಯಕ್ ಭಾಗವಹಿಸಲಿರುವರು.
ಕಾರ್ಕಳ ಸಮಾಜ ಸೇವಕರಾದ ಟಿ. ರಾಮಚಂದ್ರ ನಾಯಕ್, ಬೆಳ್ತಂಗಡಿ ಬಸ್ಸು ಚಾಲಕರಾದ ಎನ್. ರಾಮ ಮೂಲ್ಯ ಹಾಗೂ ಬೋರ್ಕಟ್ಟೆ ಯುವ ಕೃಷಿಕ ಸೌರವ್ ಪೂಜಾರಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.
ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಬೆಳಿಗ್ಗೆ ಗಂಟೆ 9.30ರಿಂದ 12.30ರವರೆಗೆ ಜರಗಲಿದೆ.
ಕಾರ್ಕಳ ತಾಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಗವುದು. ಹಾಗೂ ರಾತ್ರಿ ಗಂಟೆ 9.00ರಿಂದ ಚೈತನ್ಯ ಕಲಾವಿದರು ಬೈಲೂರು ಇವರಿಂದ ಸಾಂಸಾರಿಕ ತುಳು ನಾಟಕ ಅಷ್ಟೆಮಿ ಜರಗಲಿರುವುದು. ಈ ಎಲ್ಲಾ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹೆಚ್ಚಿನ ಸಂಖೈಯಲ್ಲಿ ಭಾಗವಹಿಸುವಂತೆ ಬಸ್ಸು ಏಜೆಂಟರ ಬಳಗದ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್ ಮತ್ತು ಸರ್ವಸದಸ್ಯರು ವಿನಂತಿಸಿದ್ದಾರೆ.