Blog

ಶಿಕ್ಷಕರಿಗೆ ಅಂಚೆ ಇಲಾಖೆಯ ಸೇವೆಗಳ ಪರಿಚಯ- ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಅಂಚೆ ಇಲಾಖೆ ಮಾಹಿತಿ ಕಾರ್ಯಗಾರ

ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳು, ಕಲ್ಲಬೆಟ್ಟು, ಮೂಡುಬಿದಿರೆ ಇಲ್ಲಿ ಅಂಚೆ ಇಲಾಖೆಯ ಜನಸಂಪರ್ಕ ಅಭಿಯಾನದ ಅಂಗವಾಗಿ ಶಿಕ್ಷಕರಿಗೆ ಅಂಚೆ ಇಲಾಖಾ ಮಾಹಿತಿ ಕಾರ್ಯಗಾರವು ನಡೆಯಿತು. ಅಂಚೆ ಇಲಾಖೆಯ ವಿವಿಧ ಸೇವೆಗಳು, ಜನಪರ ಯೋಜನೆಗಳು ಹಾಗೂ ಡಿಜಿಟಲ್ ಯುಗದಲ್ಲಿ ಅಂಚೆ ಇಲಾಖೆಯ ಬದಲಾಗುತ್ತಿರುವ ಕಾರ್ಯವೈಖರಿಯ ಕುರಿತು ಶಿಕ್ಷಕರಿಗೆ ಸಮಗ್ರ ಮಾಹಿತಿಯನ್ನು ನೀಡುವ ಉದ್ದೇಶದಿಂದ ಈ ಕಾರ್ಯಗಾರವು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಅಧಿಕಾರಿ ಗುರುಪ್ರಸಾದ್ ಅವರು ಅಂಚೆ ಇಲಾಖೆಯ ವ್ಯಾಪಕ ಸೇವೆಗಳ ಕುರಿತು ವಿವರವಾಗಿ ಮಾಹಿತಿ ಹಂಚಿಕೊಂಡರು. ಅಂಚೆ ಇಲಾಖೆ ಕೇವಲ ಪತ್ರ ವಹಿವಾಟಿಗೆ ಸೀಮಿತವಾಗಿರುವ ಸಂಸ್ಥೆಯಲ್ಲ; ಇಂದಿನ ದಿನಗಳಲ್ಲಿ ಉಳಿತಾಯ ಯೋಜನೆಗಳು, ವಿಮಾ ಸೇವೆಗಳು, ಅಂಚೆ ಬ್ಯಾಂಕಿಂಗ್, ಗ್ರಾಮೀಣ ಜನರಿಗೆಆರ್ಥಿಕ ಸೇವೆಗಳ ವಿಸ್ತರಣೆ, ಪಾರ್ಸೆಲ್ ಸೇವೆಗಳು ಸೇರಿದಂತೆ ಅನೇಕ ಜನಪರ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆಎಂದುಅವರು ತಿಳಿಸಿದರು. ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಅಂಚೆ ಇಲಾಖೆ ಜನಸಾಮಾನ್ಯರ ವಿಶ್ವಾಸಾರ್ಹ ಸಂಸ್ಥೆಯಾಗಿ ಬೆಳೆದಿದ್ದು, ಶಿಕ್ಷಕರು ವಿದ್ಯಾರ್ಥಿಗಳಿಗೂ ಪಾಲಕರಿಗೂ ಇದರ ಉಪಯುಕ್ತ ಮಾಹಿತಿಯನ್ನು ತಲುಪಿಸುವಲ್ಲಿ ಪಾತ್ರವಹಿಸಬೇಕು ಎಂದು ಅವರು ಹೇಳಿದರು.

ಕಾರ್ಯಗಾರದ ಅಧ್ಯಕ್ಷತೆಯನ್ನು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ.ಬಿ.ಪಿ ಸಂಪತ್‌ಕುಮಾರ್ ಅವರು ಮಾತಾನಾಡಿ, ಶಿಕ್ಷಣ ಸಂಸ್ಥೆಗಳು ಕೇವಲ ಪಠ್ಯಜ್ಞಾನವನ್ನು ನೀಡುವ ಕೇಂದ್ರಗಳಾಗಿರದೆ, ಸಮಾಜದ ವಿವಿಧ ವ್ಯವಸ್ಥೆಗಳ ಕುರಿತು ಜಾಗೃತಿ ಮೂಡಿಸುವ ವೇದಿಕೆಗಳಾಗಬೇಕು ಎಂದು ಹೇಳಿದರು. ಅಂಚೆ ಇಲಾಖೆಯಂತಹ ಜನಸೇವಾ ಸಂಸ್ಥೆಗಳ ಕಾರ್ಯವೈಖರಿಯನ್ನು ಶಿಕ್ಷಕರು ಅರಿತುಕೊಳ್ಳುವುದು ಅತ್ಯಂತ ಅಗತ್ಯ ಇಂತಹ ಮಾಹಿತಿ ಕಾರ್ಯಗಾರಗಳು ಶಿಕ್ಷಕರ ಜ್ಞಾನ ವಿಸ್ತರಣೆಗೆ ನೆರವಾಗುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿಯೂ ಸಾರ್ವಜನಿಕ ಸೇವೆಗಳ ಬಗ್ಗೆ ಅರಿವು ಬೆಳೆಸಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಗಾರದಲ್ಲಿ ಮೂಡುಬಿದಿರೆಯ ಕೊಡಂಗಲ್ಲಿನ ಸಬ್ ಪೋಸ್ಟ್ ಮಾಸ್ಟರ್ ಉಮಾ ಮತ್ತು ಅಂಚೆ ಕಚೇರಿಯ ಸಿಬ್ಬಂದಿಗಳು ಸಿಬಿಎಸ್‌ಸಿ ಶಾಲೆಯ ಪ್ರಾಂಶುಪಾಲ ಪ್ರಸಾದ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಶಿಕ್ಷಕ ಪಾರ್ಶ್ವನಾಥ ಜೈನ್ ಅವರು ಪ್ರಾಸ್ತವಿಕ ನುಡಿಗಳೊಂದಿಗೆ ಅತಿಥಿಗಳನ್ನು ಹಾಗೂ ಶಿಕ್ಷಕರನ್ನು ಸ್ವಾಗತಿಸಿ, ಇಂತಹ ಉಪಯುಕ್ತ ಕಾರ್ಯಗರವನ್ನು ಶಿಕ್ಷಕರಿಗೆ ಹೊಸ ಅರಿವು ಮತ್ತು ಸಮಕಾಲೀನ ಮಾಹಿತಿಯನ್ನು ನೀಡುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ಹೇಳಿದರು.

ಕಾರ್ಯಗಾರದಲ್ಲಿ ಅಂಚೆ ಇಲಾಖೆಯ ವಿವಿಧ ಯೋಜನೆಗಳು, ಸೇವೆಗಳ ಉಪಯೋಗ, ಡಿಜಿಟಲ್ ಅಂಚೆ ಸೇವೆಗಳ ಮಹತ್ವ ಸಾರ್ವಜನಿಕರೊಂದಿಗೆ ಇಲಾಖೆಯ ನಂಟುಕುರಿತಾಗಿ ಶಿಕ್ಷಕರಿಗೆ ಸಮಗ್ರ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿಕ್ಷಕವೃಂದ ಸಕ್ರೀಯವಾಗಿ ಭಾಗವಹಿಸಿ, ಉಪಯುಕ್ತ ಮಾಹಿತಿಯನ್ನು ಪಡೆದುಕೊಂಡರು.

Related posts

ವಿದ್ಯಾ ನಿಕೇತನ ಶಾಲೆಯ ಮಕ್ಕಳ ಸಾಧನೆ

Madhyama Bimba

ಆದಿ ದ್ರಾವಿಡ ಸಂಘದಿಂದ ಸಹಾಯ ಧನ

Madhyama Bimba

ಆನಂದ ಕಬ್ಬಿನಾಲೆ ಸೇನಾ ಸೇವೆಯಲ್ಲಿ ನಿವೃತ್ತಿ : ಮುನಿಯಾಲಿನಲ್ಲಿ ಭವ್ಯ ಸ್ವಾಗತ : ಗೌರವ ಅರ್ಪಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More