ಕಾರ್ಕಳ

ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಗೋಲ್ಡ್ ಲೋನ್ ನಲ್ಲಿ ಪ್ರತಿ ಗ್ರಾಂಗೆ ರೂ. 9500 ಸಾಲ

ಕಾರ್ಕಳ: ಜೋಡುರಸ್ತೆಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದು, ಬೆಳ್ಳಿ ಹಬ್ಬದ ಸಂಭ್ರಮಾಚರಣೆಯಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಗೋಲ್ಡ್ ಲೋನ್ ಮೂಲಕ ಪ್ರತಿ ಗ್ರಾಂ ಗೆ ರೂ. 9500 ಸಾಲ ನೀಡಲಾಗುವುದು ಎಂದು ಸಂಘದ ಅಧ್ಯಕ್ಷರಾದ ಸಂತೋಷ್ ರಾವ್ ತಿಳಿಸಿದ್ದಾರೆ.


ಗ್ರಾಹಕರ ಅಗತ್ಯತೆಗೆ ಅನುಗುಣವಾಗಿ ಕ್ಲಪ್ತ ಸಮಯದಲ್ಲಿ, ಕಡಿಮೆ ದಾಖಲೆಗಳೊಂದಿಗೆ, ಕಡಿಮೆ ಬಡ್ಡಿ ದರದಲ್ಲಿ, ಸರಳ ವಿಧಾನಗಳ ಮೂಲಕ ಸಾಲ ನೀಡಲಾಗುವುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ ಗಣೇಶ್ ಚತುರ್ಥಿ ಹಾಗೂ ವರಮಹಾಲಕ್ಷ್ಮಿ ಪೂಜಾ ಸಂದರ್ಭದಲ್ಲಿ ಠೇವಣಿಗೆ ಹೆಚ್ಚಿನ ಬಡ್ಡಿದರ ನೀಡಿ ಗ್ರಾಹಕರ ಪ್ರಶಂಸೆಗೆ ಪಾತ್ರರಾಗಿದ್ದರು.

ಬೆಳ್ಳಿ ಹಬ್ಬದ ಪ್ರಯುಕ್ತ ಸ್ಥಳೀಯ ಸರಕಾರಿ ಶಾಲಾ ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸುಮಾರು. ರೂ 1.50 ಲಕ್ಷ ಮೌಲ್ಯದ ನೋಟ್ ಪುಸ್ತಕ, ಬ್ಯಾಗ್ ಗಳನ್ನು ವಿತರಿಸಿ ತಮ್ಮ ಕಾರ್ಯ ವ್ಯಾಪ್ತಿಯನ್ನು ಕೇವಲ ಸಹಕಾರಿ ಕ್ಷೇತ್ರಕ್ಕೆ ಮೀಸಲಿರಿಸದೆ ಶಿಕ್ಷಣ ಕ್ಷೇತ್ರ ಹಾಗೂ ಸಾಮಾಜಿಕ ಕ್ಷೇತ್ರದಲ್ಲೂ ತಮ್ಮ ಸಂಘವನ್ನು ತೊಡಗಿಸಿಕೊಳ್ಳುವುದರ ಮೂಲಕ ಸಮಾಜಕ್ಕೆ ಹತ್ತಿರವಾದ ಸಂಘ ಎಂಬ ಪ್ರಶಂಸೆಗೆ ಪಾತ್ರವಾಗಿದೆ.

Related posts

ಕರಾಟೆಯಲ್ಲಿ ಸಾಧನೆಗೈದ ನಿಟ್ಟೆಯ ಅವಳಿ ಸಹೋದರರಿಗೆ ‘ಯುವ ಸಾಧಕ’ ಬಿರುದು

Madhyama Bimba

ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್ – ಆರೋಪಿಯನ್ನು ಸಮರ್ಥಿಸುತ್ತಿರುವ ಬಿಜೆಪಿ ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ

Madhyama Bimba

ಸಾಣೂರು ಯುವಕ ಮಂಡಲ ವತಿಯಿಂದ ಜೂ. 14ರಂದು ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More