ಕಾರ್ಕಳ

ವಿಕಾಸ ಉದ್ಯೋಗ ಸೇತು ಉದ್ಘಾಟನೆ

ವಿದ್ಯಾರ್ಥಿಗಳನ್ನು ಹಾಗೂ ಯುವಜನರಿಗೆ ಉದ್ಯೋಗ ಕಲ್ಪಿಸುವ ವಿಕಾಸ ಉದ್ಯೋಗ ಸೇತು ಕಾರ್ಯಕ್ರಮವು ಕೇವಲ ಇಂದಿಗೆ ಮಾತ್ರ ಸೀಮಿತವಾಗಿರದೆ ಪ್ರತಿ ತಿಂಗಳು ನಿರಂತರವಾಗಿ ನಡೆಯಲಿದೆ ಎಂದು ಶಾಸಕರಾದ ವಿ. ಸುನಿಲ್ ಕುಮಾರ್ ಹೇಳಿದರು.

ಕಾರ್ಕಳ ವಿಕಾಸ ಕಚೇರಿಯಲ್ಲಿ ನಡೆದ ವಿಕಾಸ ಉದ್ಯೋಗ ಸೇತು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಸ್ವರ್ಣ ಕಾರ್ಕಳ ಕಲ್ಪನೆಯನ್ನು ಮುಂದಿಟ್ಟುಕೊಂಡು ಕಾರ್ಕಳದ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ. ಉದ್ಯೋಗ ಸೇತು ಕಾರ್ಯಕ್ರಮದಡಿ 1600 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ ಎಲ್ಲರಿಗೂ ಉದ್ಯೋಗ ದೊರಕದೆ ಇದ್ದರೂ ಜೀವನದಲ್ಲಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮುಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಕೆಲಸ ಪಡೆಯುಲು ಅನುಭವ ಸಂದರ್ಭದಲ್ಲಿ ಈ ಉದ್ಯೋಗದಿಂದ ಇದು ಸಾಧ್ಯವಾಗಲಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಹಿರಿಯರಾದ ಬೋಳ ಪ್ರಭಾಕರ ಕಾಮತ್ ವಹಿಸಿದ್ದರು.

ಸಾಣೂರು ರಾಜೇಶ್ವರಿ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ ಮಾತನಾಡಿ ವಿಕಾಸ ಉದ್ಯೋಗ ಸೇತು ಕಾರ್ಯಕ್ರಮವು ಇತರ ಶಾಸಕರಿಗೆ ಮಾದರಿಯಾಗಿದೆ ಎಂದರು.

ವೇದಿಕೆಯಲ್ಲಿ ಉದ್ಯಮಿ ಗಣೇಶ್ ಕಾಮತ್, ಮಣಿರಾಜ್ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಮಹಾವೀರ ಜೈನ್, ಕ್ಷೇತ್ರಾಧ್ಯಕ್ಷರಾದ ನವೀನ್ ನಾಯಕ್, ಫೋಕೋನ್ ಕಂಪೆನಿಯ ರಾಜೇಶ್ವರಿ, ದಿವಾಕರ್ ಉಪಸ್ಥಿತರಿದ್ದರು.

ಕರುಣಾಕರ್ ಕೋಟ್ಯಾನ್ ಸಾಣೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಪ್ರಸಾದ್ ಐಸಿರ ಸ್ವಾಗತಿಸಿದರು.

Related posts

ಕಾರ್ಕಳ ಜ್ಞಾನಸುಧಾ : ವಿಶ್ವಯೋಗ ದಿನಾಚರಣೆ

Madhyama Bimba

ಬೆಳ್ಮಣ್ಣು ವ್ಯವಸಾಯ ಸಹಕಾರಿ ಸಂಘದಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರೇಮ ಶೆಟ್ಟಿಯವರಿಗೆ ಸನ್ಮಾನ

Madhyama Bimba

ಹೆಬ್ರಿ ಕಾರ್ಕಳ ತಾಲೂಕಿನ 10 ಮಂದಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ ಪ್ರದಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More