ಕಾರ್ಕಳ

ಕಾರ್ಕಳ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ಗಾಂಧಿ, ಶಾಸ್ತ್ರಿ ಜನ್ಮದಿನಾಚರಣೆ

ಸತ್ಯ ಮತ್ತು ಅಹಿಂಸೆಯ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೇ ಮುಡುಪಾಗಿಟ್ಟ ಮಹಾತ್ಮಾ ಗಾಂದಿಜಿಯವರ ತತ್ವ ಸಿದ್ದಾಂತಗಳನ್ನು ಜಗತ್ತಿಗೆ ತಿಳಿಸುವುದರ ಜೊತೆಗೆ ಗಾಂಧಿಜೀಯವರ ಬಗ್ಗೆ ಸುಳ್ಳು ಅಪ ಪ್ರಚಾರ ಮಾಡುತ್ತಾ ಅವರ ತೇಜೋವಧೆ ಮಾಡುವವರ ನಿಜ ಬಣ್ಣ ಬಯಲು ಮಾಡುವುದು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನ ಜವಾಬ್ದಾರಿಯಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಸದಾಶಿವ ದೇವಾಡಿಗ ಅಭಿಪ್ರಾಯ ಪಟ್ಟರು.


ಅವರು ಇಂದು ಬ್ಲಾಕ್ ಕಾಂಗ್ರೇಸ್ ವತಿಯಿಂದ ಹಮ್ಮಿಕೊಂಡ ಮಹಾತ್ಮ ಗಾಂಧೀ ಹಾಗೂ ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.


ಲಾಲ್ ಬಹುದ್ದೂರು ಶಾಸ್ರಿಯವರು ಒಬ್ಬ ಸರಳ ವ್ಯಕ್ತಿತ್ವದ ಮಾಹಾನ್ ಶಕ್ತಿ ಅವರ ಆಡಳಿತದಲ್ಲಿನ ಅನೇಕ ಯೋಜನೆಗಳು ದೇಶದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಜೈಜವಾನ್, ಜೈ ಕಿಸಾನ್ ಘೋಷಣೆಗಳು ದೇಶದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿತು ಎಂದರು.


ಪುರಸಭೆಯ ಸದಸ್ಯೆ ನಳಿನಿ ಆಚಾರ್ಯ, ನಾಗೇಶ್ ಅಚಾರ್ಯ ಬೆಳ್ಮಣ್, ಸಂದರ್ಭೊಚಿತ ಮಾತುಗಳನ್ನಾಡಿದರು.

ವಕ್ತಾರ ಶುಭದರಾವ್, ಪುರಸಭೆಯ ಮಾಜಿ ಅಧ್ಯಕ್ಷ ಸುಬಿತ್ ಕುಮಾರ್, ಸದಸ್ಯರಾದ ಪ್ರತಿಮಾ, ವಿನ್ನಿ ಬೋಲ್ಡ್ ಮೆಂಡೋನ್ಸಾ, ಹಿರಿಯ ಮುಖಂಡರಾದ ಸಿರಿಯಣ್ಣ ಶೆಟ್ಟಿ, ಪ್ರಭಾಕರ್ ಬಂಗೇರ, ರಮೇಶ್ ಬಜಕಳ, ಮಹಿಳಾ ಅಧ್ಯಕ್ಷರಾದ ಅನಿತಾ ಡಿಸೋಜ, ರೀನಾ ಡಿಸೋಜ, ಸುನೀಲ್ ಭಂಡಾರಿ, ವಿವೇಕಾನಂದ ಶೆಣೈ, ರುಕ್ಮಯ ಶೆಟ್ಟಿಗಾರ್, ಪ್ರದೀಪ್ ಬೆಲಾಡಿ ಉಪಸ್ಥಿತರಿದ್ದರು, ನಕ್ರೆ ಜಾರ್ಜ್ ಕ್ಯಾಸ್ಟಲಿನೋ ಪ್ರಸ್ತಾವಿಸಿ ಸ್ವಾಗತಿಸಿದರು, ಹೇಮಂತ್ ಅಚಾರ್ಯ ಧನ್ಯವಾದವಿತ್ತರು.

 

 

 

 

Related posts

ಜೇಸಿ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Madhyama Bimba

ಎನ್ ಎಸ್ ಎಸ್ ವಿದ್ಯಾರ್ಥಿಗಳಲ್ಲಿ ನಾಗರಿಕ ಜವಾಬ್ದಾರಿಯ ಪ್ರಜ್ಞೆ ಬೆಳೆಸುತ್ತದೆ: ಡಾ. ರವೀಂದ್ರ ಶೆಟ್ಟಿ

Madhyama Bimba

ಬೆಳ್ಮಣ್ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿಎನ್ ಎಸ್ ಎಸ್ ವಾರ್ಷಿಕ ಶಿಬಿರದ ಉದ್ಘಾಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More