ಕಾರ್ಕಳಹೆಬ್ರಿ

ಜನಮೆಚ್ಚುಗೆಯತ್ತ ಕನ್ನಡ ಚಿತ್ರ

ಇತ್ತೀಚೆಗೆ ತೆರೆಕಂಡ “ಅಪರಾಧಿ ನಾನಲ್ಲ” ಕನ್ನಡ ಚಲನಚಿತ್ರ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಈ ಚಲನಚಿತ್ರವು ಒಂದು ಅದ್ಭುತ ಕ್ರೈಮ್ ಥ್ರಿಲ್ಲರ್ ಸಿನಿಮಾ. ಚಿತ್ರದ ಆರಂಭದಿಂದ ಕೊನೆಯವರೆಗೂ ಕುತೂಹಲವನ್ನು ಉಳಿಸಿಕೊಂಡು ಸಾಗುವ ಕಥೆ, ಉತ್ತಮ ನಿರ್ದೇಶನ ಮತ್ತು ಕಲಾವಿದರ ಅದ್ಭುತ ಅಭಿನಯ ಚಿತ್ರದ ಪ್ರಮುಖ ಆಕರ್ಷಣೆಗಳಾಗಿವೆ.

ಯಶಂತ್ ಕಲ್ಲಡ್ಕ (ಪ್ರಶಾಂತ್ ಶೆಟ್ಟಿ) ಇವರ ಮೊದಲ ನಿರ್ದೇಶನದ ಪ್ರಸನ್ನ ಕುಕ್ಕುಂದೂರು ಚಿತ್ರಕಥೆಯ ಈ ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಪ್ರಮೋದ್ ಶೆಟ್ಟಿ, ನವೀನ್ ಡಿ ಪಡಿಲ್, ಅರ್ಜುನ್ ದೇವ್, ಅರ್ಜುನ್ ಕಜೆ, ಜ್ಯೋತಿ ರೈ, ಸೃಶಾ ಸಾಮಾನಿ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಮನಸೆಳೆಯುತ್ತದೆ.

ಒಂದು ಕೊಲೆಯ ಸುತ್ತ ನಡೆಯುವ ಈ ಚಿತ್ರ ಆರಂಭದಿಂದ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳುತ್ತದೆ. ಚಿತ್ರದ ಎಲ್ಲಾ ಹಂತದಲ್ಲಿ ಬರುವ ತಿರುವುಗಳು ಹಾಗೂ ಕ್ಲೈಮ್ಯಾಕ್ಸ್ ಪ್ರೇಕ್ಷಕರನ್ನು ಆಶ್ಚರ್ಯಚಕಿತರನ್ನಾಗಿಸುತ್ತದೆ.
ಮಂಗಳೂರು ಭಾಗದ ಸುಂದರ ದೃಶ್ಯಾವಳಿಗಳನ್ನು ಅತ್ಯಂತ ಚೆನ್ನಾಗಿ ಚಿತ್ರಿಸಲಾಗಿದೆ. ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಹಾಗೂ ನಿರ್ದೇಶನ ಕಥೆಗೆ ಇನ್ನಷ್ಟು ಬಲ ತುಂಬಿವೆ.

ಒಟ್ಟಾರೆಯಾಗಿ, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರು ತಪ್ಪದೇ ನೋಡಬೇಕಾದ ಉತ್ತಮ ಕನ್ನಡ ಸಿನಿಮಾ. ಕನ್ನಡ ಚಿತ್ರರಂಗದ ಮತ್ತೊಂದು ಗುಣಮಟ್ಟದ ಚಿತ್ರಕ್ಕೆ ಸಾಕ್ಷಿಯಾಗಿದೆ.

Related posts

ಕುಕ್ಕುಂದೂರು ಫ್ರೆಂಡ್ಸ್ ವತಿಯಿಂದ ಶಾಲೆಯ ಬಾವಿ ಸ್ವಚ್ಛತೆ

Madhyama Bimba

ನಾಡದೊರೆ ಸಿದ್ಧರಾಮಯ್ಯ ನವರ ಚಿತ್ರ ಬಿಡಿಸಿ ಹಸ್ತಾಂತರಿಸಿದ ಯಶೋಧ ಆಚಾರ್ಯ ನೀರೆ ಬೈಲೂರು 

Madhyama Bimba

ನಕ್ರೆ : ಅಕ್ರಮ ಕಲ್ಲುಗಣಿಗಾರಿಕೆ- ಗಣಿ ಮಾಲೀಕರ ಅಟ್ಟಹಾಸ- ಪ್ರಕರಣ ದಾಖಲು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More