ಕಾರ್ಕಳಹೆಬ್ರಿ

ಕುಕ್ಕುಂದೂರು ಫ್ರೆಂಡ್ಸ್ ವತಿಯಿಂದ ಶಾಲೆಯ ಬಾವಿ ಸ್ವಚ್ಛತೆ

ಶ್ರೀ ದುರ್ಗಾದೇವಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಂದೂರು ಇದರ ಕುಡಿಯುವ ನೀರಿನ ಬಾವಿಯಲ್ಲಿ ಕಸ ಕಡ್ಡಿಗಳು ಸೇರಿದಂತೆ ತ್ಯಾಜ್ಯ ವಸ್ತುಗಳು ತುಂಬಿ ಬಾವಿಯ ನೀರು ಮಲಿನವಾಗಿತ್ತು. ಈ ಬಾವಿಯನ್ನು ಕುಕ್ಕುಂದೂರು ಫ್ರೆಂಡ್ಸ್ (ರಿ.) ಕುಕ್ಕುಂದೂರು ಮುಂಬೈ ಸಂಘದ ಸದಸ್ಯರು  ಮೇ10  ರಂದು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.

ಬಳಿಕ ಬಾವಿಯ ಕಂಪೌಂಡಿಗೆ ಬಣ್ಣ ಬಳಿಯಲಾಯಿತು. ಏಪ್ರಿಲ್ ತಿಂಗಳಿಂದ ಶಾಲೆಗೆ ರಜೆ ಇದ್ದು, ಬೇಸಿಗೆಯ ಈ ಸಂದರ್ಭದಲ್ಲಿ ಬಾವಿಯ ನೀರು ಬತ್ತುವುದರಿಂದ ನೀರು ಮಲಿನ ಗೊಂಡಿರುತ್ತದೆ. ಇದನ್ನು ಗಮನಿಸಿದ ಸಂಘದ ಸದಸ್ಯರು ಸಂಘದ ಅಧ್ಯಕ್ಷರಾದ ಶ್ರೀಮತಿ ಪುಷ್ಪಾ ಪ್ರಭು, ಉಪಾಧ್ಯಕ್ಷರಾದ ಶ್ರೀಮತಿ ಲಲಿತಾ ಶೆಟ್ಟಿ ಇವರ ಮಾರ್ಗದರ್ಶನದಂತೆ ಸಂಘದ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡು ಬಾವಿಯನ್ನು ಸ್ವಚ್ಛಗೊಳಿಸಿದರು. ಬಳಿಕ ಬಾವಿಯ ನೀರನ್ನು ಸಂಪೂರ್ಣವಾಗಿ ಬತ್ತಿಸಿ ಮಲಿನಗೊಂಡ ನೀರನ್ನು ಖಾಲಿ ಮಾಡಲಾಯಿತು.

Related posts

ಬೈಲೂರು ಪರಶುರಾಮ ಥೀಮ್ ಪಾರ್ಕ್ ಬಳಿ ಆಕಸ್ಮಿಕ ಬೆಂಕಿ

Madhyama Bimba

ಕಾಂಗ್ರೆಸ್ ಓಲೈಕೆಗಾಗಿ ಸುಳ್ಳು ಪ್ರಚಾರ ನಿಲ್ಲಿಸಿ, ತಾಕತ್ತಿದ್ದರೆ ಸಮುದಾಯದ ಅಭಿವೃದ್ಧಿಗೆ ಹಾಗೂ ಹೆಬ್ರಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಿಮ್ಮ ಸರ್ಕಾರದಿಂದ 06.00 ಕೋಟಿ ಅನುದಾನ ತಂದು ತೋರಿಸಿ! – ತಾ.ಪಂ ಮಾಜಿ ಅಧ್ಯಕ್ಷ ಸುಂದರ್ ಬಿ. ಸಂಜೀವ ಮಾಳ ತಿರುಗೇಟು

Madhyama Bimba

ಶಿವಪುರ ಶಂಕರದೇವ ದೇವಸ್ಥಾನ : ಸಮಾಲೋಚನಾ ಸಭೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More