ಕಾರ್ಕಳ

ನಕ್ರೆ : ಅಕ್ರಮ ಕಲ್ಲುಗಣಿಗಾರಿಕೆ- ಗಣಿ ಮಾಲೀಕರ ಅಟ್ಟಹಾಸ- ಪ್ರಕರಣ ದಾಖಲು

ಕಾರ್ಕಳ ವ್ಯಾಪ್ತಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮತ್ತೆ ಗರಿಗೆದರಿದೆ. ಗಣಿ ಮಾಲೀಕರ ಅಟ್ಟಹಾಸ ಜನಸಾಮಾನ್ಯರನ್ನು ಕಂಗೆಡಿಸುವಂತೆ ಮಾಡಿದೆ. ಅಲ್ಲದೆ ಗಣಿಗಾರಿಕೆಯ ವಿರುದ್ಧ ನಿಂತರೆ ಬೆದರಿಕೆ ಹಾಕುವ ಪ್ರಕರಣಗಳು ನಡೆಯುತ್ತಿದೆ. ಇಂತದೆ ಪ್ರಕರಣ ನಕ್ರೆಯಲ್ಲಿ ನಡೆದಿದ್ದು ಪ್ರಕರಣ ದಾಖಲಾಗಿದೆ.

ನಕ್ರೆ ಹಾಂಕ್ರಾಡಿ ನಿವಾಸಿ ಲಲಿತಾ ನಾಯ್ಕ (50) ಜಮೀನು ಸಮೀಪ ರವಿಚಂದ್ರ ಎಂಬವರು ಜಾಗ ಖರೀದಿ ಮಾಡಿದ್ದರು. ಈ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದು ಅಕ್ರಮ ಗಣಿಗಾರಿಕೆ ವಿರುದ್ಧ ಪ್ರತಿಭಟಿಸುತ್ತಿದ್ದಾಗ ಲಲಿತಾ ನಾಯ್ಕ ಹಾಗೂ ಅಣ್ಣಿ ನಾಯ್ಕ ಇವರಿಗೆ ರವಿಚಂದ್ರ ಹಾಗೂ ಪವನ್ ಎಂಬುವವರು ಅವಾಚ್ಯ ಶಬ್ದದಿಂದ ಬೈದು ನಿಂದಿಸುತ್ತಿದ್ದರು.

ಆದರೆ ಜ. 21ರಂದು ಮಧ್ಯಾಹ್ನ 12.00 ಗಂಟೆಗೆ ಆರೋಪಿತರಾದ ರವಿಚಂದ್ರ ಹಾಗೂ ಪವನ್ ಬಂಡೆಗೆ ಸ್ಫೋಟಕ ಬಳಸಿ ಕಲ್ಲನ್ನು ಒಡೆಯುತ್ತಿದ್ದಾಗ ಸ್ಥಳೀಯ ಮನೆಯವರು ಸೇರಿ ಆಕ್ಷೇಪ ಮಾಡಿದಕ್ಕೆ ಆರೋಪಿತರು ಸುಜಾತ ಮತ್ತು ಅಣ್ಣಿನಾಯ್ಕ ಎಂಬುವರಿಗೆ ಅವಾಚ್ಯ ಶಬ್ದದಿಂದ ಬೈದು ಹಲ್ಲೆಮಾಡಲು ಪ್ರಯತ್ನಪಟ್ಟು ಕೊಲೆ ಬೆದರಿಕೆ ಹಾಕಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಲಿಸಲಾಗಿದೆ.
ಅಕ್ರಮ ಗಣಿಗಾರಿಕೆ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ಜನರ ಮೇಲೆ ಗಣಿ ಮಾಲೀಕರ ಅಟ್ಟಹಾಸ ಮತ್ತೆ ಮತ್ತೆ ನಡೆಯಲಿದೆ.

Related posts

ಕಾರ್ಕಳ: ವೆಸ್ಟರ್ನ್ ವತಿಯಿಂದ ಈಸ್ಟರ್ನ್ ಟ್ರೋಫಿ 2025 ಕ್ರಿಕೆಟ್ ಟೂರ್ನಮೆಂಟ್

Madhyama Bimba

ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದ ಬೆಳ್ಳಿ ಹಬ್ಬದ ಸಂಭ್ರಮ- ರಕ್ತದಾನ ಶಿಬಿರ

Madhyama Bimba

ಹೆಬ್ರಿ ಬಿಜೆಪಿ ಶಕ್ತಿ ಕೇಂದ್ರದಿಂದ ಉನ್ನತ ಶಿಕ್ಷಣ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More