ಕಾರ್ಕಳಹೆಬ್ರಿ

ವರಂಗ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷರಾಗಿ ಶುಭದರ ಶೆಟ್ಟಿ ಮುದ್ರಾಡಿ, ಉಪಾಧ್ಯಕ್ಷರಾಗಿ ಕೃಷ್ಣಕಾಂತ್ ನಾಯಕ್ ಮುನಿಯಾಲು ಆಯ್ಕೆ

ಹೆಬ್ರಿ : ವರಂಗ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಮುಂದಿನ ಅವಧಿಯ ನೂತನ ಅಧ್ಯಕ್ಷರಾಗಿ ಶುಭದರ ಶೆಟ್ಟಿ ಮುದ್ರಾಡಿ ಹಾಗೂ ಉಪಾಧ್ಯಕ್ಷರಾಗಿ ಕೃಷ್ಣಕಾಂತ್ ನಾಯಕ್ ಮುನಿಯಾಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶುಕ್ರವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಈ ಆಯ್ಕೆ ನಡೆದಿದೆ. ಕಾರ್ಕಳದ ಸಹಕಾರಿ ಅಭಿವೃದ್ಧಿ ಅಧಿಕಾರಿ ಸುಮಿತ್ರಾ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

ಪೂರ್ವಾಧ್ಯಕ್ಷರಾದ ವರಂಗ ಲಕ್ಷ್ಮಣ ಆಚಾರ್ ನೂತನ ಅಧ್ಯಕ್ಷ ಶುಭದರ ಶೆಟ್ಟಿ ಅವರಿಗೆ ಅಧಿಕಾರ ಹಸ್ತಾಂತರಿಸಿ ಅಭಿನಂದಿಸಿದರು.

ನಿರ್ದೇಶಕರಾದ ಪಡುಕುಡೂರು ಜಗದೀಶ ಹೆಗ್ಡೆ, ಚಂದ್ರಶೇಖರ ಬಾಯರಿ ಕಬ್ಬಿನಾಲೆ, ಗೋಪಿನಾಥ ಭಟ್ ಮುನಿಯಾಲು, ಕೃಷ್ಣ ಆಚಾರ್ಯ ಮುದ್ರಾಡಿ, ಸುಧನ್ವ ಪಾಣಾರ ಮುದ್ರಾಡಿ, ಸುರೇಶ್ ಶೆಟ್ಟಿಗಾರ್ ಮುದ್ರಾಡಿ, ಇಂದಿರಾ ಪೂಜಾರಿ ವರಂಗ, ಶಶಿಕಲಾ ಡಿ ಪೂಜಾರಿ, ಸುರೇಶ್ ನಾಯ್ಕ್ ಮುನಿಯಾಲು ಚಟ್ಕಲ್ ಪಾದೆ, ಮೇಲ್ವಿಚಾರಕ ಜಯಂತ್ ಕುಮಾರ್, ಕಾರ್ಯ ನಿರ್ವಹಣಾಧಿಕಾರಿ ಗೋಪಾಲ ಕೃಷ್ಣ ಪೈ ಹಾಜರಿದ್ದರು.

ಮುಖಂಡರಾದ ಹೆಬ್ರಿ ಪ್ರವೀಣ್ ಬಲ್ಲಾಳ್, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಕೆ ಅಡ್ಯಂತಾಯ, ವಿವಿಧ ಪ್ರಮುಖರಾದ ಜಯಕರ ಶೆಟ್ಟಿ ಮುದ್ರಾಡಿ, ಪಾಂಡುರಂಗ ಪ್ರಭು ಮುದ್ರಾಡಿ, ದಿನೇಶ ಶೆಟ್ಟಿ ಹೆಬ್ರಿ, ಪ್ರಸನ್ನ ಶೆಟ್ಟಿ ಪಡುಕುಡೂರು, ಹರೀಶ ಶೆಟ್ಟಿನಾಡ್ಪಾಲು, ಸತೀಶ್ ಸೇರಿಗಾರ್, ರಘುನಾಥ ಪೂಜಾರಿ ಮುನಿಯಾಲು, ಮುನಿಯಾಲು, ಮುದ್ರಾಡಿಯ ವಿವಿಧ ಪ್ರಮುಖರು ಹಾಗೂ ಸಂಘದ ಸಿಬಂದ್ಧಿ ವರ್ಗದವರು ಉಪಸ್ಥಿತರಿದ್ದರು.

Related posts

ಕ್ರೈಸ್ಟ್‌ಕಿಂಗ್ : ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ನೂತನ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮ

Madhyama Bimba

ವರಂಗ: ವಿಶ್ವ ಪರಿಸರ ದಿನಾಚರಣೆ

Madhyama Bimba

ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಜಿಲ್ಲಾ ಬ್ಯಾಂಕಿನ ಪ್ರಶಸ್ತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More