ಕಾರ್ಕಳಹೆಬ್ರಿ

ಮಾತಿಬೆಟ್ಟಿನ ಹಿರಿಯ ಕೃಷಿಕ ಹಾಗೂ ವ್ಯಾಪಾರಿ ಶಿಶುಪಾಲ್ ಜೈನ್ ನಿಧನ

 

ವರಂಗ ಸಮೀಪದ ಮಾತಿಬೆಟ್ಟಿನ ನಿವಾಸಿ, ಹಿರಿಯ ಕೃಷಿಕ ಹಾಗೂ ಸಣ್ಣ ಜಿನಸಿ ಅಂಗಡಿಯ ಮಾಲಕರಾಗಿದ್ದ ಶ್ರೀ ಶಿಶುಪಾಲ್ ಜೈನ್ (82) ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಸರಳ, ಸಜ್ಜನಿಕೆ ಹಾಗೂ ಪ್ರಾಮಾಣಿಕ ವ್ಯಕ್ತಿತ್ವದಿಂದ ಎಲ್ಲರ ಪ್ರೀತಿ-ವಿಶ್ವಾಸ ಗಳಿಸಿದ್ದ ಅವರು, ಕೃಷಿಯ ಜೊತೆಗೆ ಸಣ್ಣ ಜಿನಸಿ ಅಂಗಡಿಯನ್ನು ನಡೆಸುತ್ತಾ ಗ್ರಾಮಸ್ಥರಿಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದರು. ಅವರ ನೇರ ನಡೆ-ನುಡಿ, ಪ್ರಾಮಾಣಿಕ ವ್ಯವಹಾರ ಮತ್ತು ಸಮಾಜಮುಖಿ ಮನೋಭಾವದಿಂದ ಸ್ಥಳೀಯರಲ್ಲಿ ಗೌರವಕ್ಕೆ ಪಾತ್ರರಾಗಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಅವರ ನಿಧನಕ್ಕೆ ಗ್ರಾಮಸ್ಥರು, ಬಂಧು-ಬಳಗ ಹಾಗೂ ಸ್ನೇಹಿತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Related posts

ಬಜಗೋಳಿ ಸರಕಾರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಸಮಾರೋಪ ಸಮಾರಂಭ

Madhyama Bimba

ಎನ್‌ಐಎಫ್‌ಟಿ ಪರೀಕ್ಷಾ ಫಲಿತಾಂಶ ಪ್ರಕಟ: ಕ್ರಿಯೇಟಿವ್ ಕಾಲೇಜು ಕಾರ್ಕಳದ ವಿದ್ಯಾರ್ಥಿಗಳ ಅಮೋಘ ಸಾಧನೆ.

Madhyama Bimba

ಕಾರ್ಕಳ: ಮಾನವ ಕಳ್ಳಸಾಗಣೆ ವಿರೋಧಿ ದಿನ- ಉಚಿತ ಕಾನೂನು ಅರಿವು ಮಾಹಿತಿ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More