ಕಾರ್ಕಳಹೆಬ್ರಿ

ಕ್ರೈಸ್ಟ್‌ಕಿಂಗ್: ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ಕಾರ್ಕಳ: ಇಲ್ಲಿನ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವ್ಯಕ್ತಿತ್ವ ವಿಕಸನ ತರಬೇತುದಾರ ಕೀರ್ತನ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ವಿದ್ಯಾರ್ಥಿಗಳ ಜೊತೆ ಮಾತನಾಡುತ್ತಾ ಅವರು “ವಿದ್ಯಾರ್ಥಿಗಳು ಹಲವಾರು ಗುರಿಗಳನ್ನು ಇಟ್ಟುಕೊಂಡು ಪ್ರಯತ್ನಪಡುವುದಕ್ಕಿಂತ ಒಂದೇ ಗುರಿಯನ್ನು ಇಟ್ಟುಕೊಂಡು ಅದನ್ನು ಸಾಧಿಸಲು ಏಕಾಗ್ರತೆ ಹಾಗೂ ಬದ್ಧತೆಯೊಂದಿಗೆ ಕಾರ್ಯಶೀಲರಾಗಬೇಕು. ನಮ್ಮಲ್ಲಿ ಅತ್ಯುತ್ತಮ ಕೌಶಲ್ಯಗಳಿದ್ದಾಗ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಪ್ರಸ್ತುತ ಸಮಾಜದಲ್ಲಿ ಇರುವ ಅವಕಾಶಗಳಿಗೆ ತಕ್ಕಂತೆ ನಮ್ಮನ್ನು ನಾವು ರೂಪಿಸಿಕೊಳ್ಳಬೇಕು. ಸಾಧನೆಯ ದಾರಿಯಲ್ಲಿ ಸಾಗುವಾಗ ಎದುರಾಗುವ ಸೋಲುಗಳಿಗೆ ಅಳುಕದೆ ಮುಂದುವರಿಯಬೇಕು” ಎಂದು ಹೇಳಿದರು.

ಸಂಸ್ಥೆಯ ಉಪ ಪ್ರಾಚಾರ್ಯ ಹಾಗೂ ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಪ್ರಕಾಶ್ ಭಟ್ ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ವಿಯೋಲಾ ಸ್ಟ್ಯಾನ್ಲಿ ಅತಿಥಿಗಳನ್ನು ಪರಿಚಯಿಸಿ ಕೀರ್ತನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Related posts

 ನಿಟ್ಟೆ ಶ್ರೀ ರಾಜ ರಾಜೇಶ್ವರಿ ಸದ್ಗುರು ಶ್ರೀ ನಿತ್ಯಾನಂದ ಕ್ಷೇತ್ರ ನೆಲ್ಲಿ ಇದರ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಸುನಿಲ್ ಕುಮಾರ್

Madhyama Bimba

ಕಾರ್ಕಳ: ನೇಣು ಬಿಗಿದು ಆತ್ಮಹತ್ಯೆ

Madhyama Bimba

ನೀರೆಬೈಲೂರು ಲಯನ್ಸ್ ಕ್ಲಬ್ ವತಿಯಿಂದ ವನಮಹೋತ್ಸವ ಹಾಗೂ ಸ್ವಚ್ಛತಾ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More