ಭಾರತ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ಮೇರ ಯುವ ಭಾರತ ಉಡುಪಿ, ಚೈತನ್ಯ ಮಿತ್ರ ಮಂಡಳಿ ಚೈತನ್ಯ ಮಹಿಳಾ ಮತ್ತು ಯುವತಿ ಮಂಡಳಿ ಹಾಳೆಕಟ್ಟೆ ಕಲ್ಯಾ ಇವುಗಳ ಸಯುಕ್ತ ಆಶಯದಲ್ಲಿ ಮೇಜರ್ ಧ್ಯಾನ್ ಚಂದ್ ಜನ್ಮ ದಿನಾಚರಣೆಯ ಸವಿನೆನಪಿಗಾಗಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಯಾ ಇಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧೀರಜ್ ಶೆಟ್ಟಿ ಮಾತನಾಡಿ ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಇವರ ಜನ್ಮದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸುತ್ತಿರುವುದು ಓರ್ವ ಶ್ರೇಷ್ಠ ಆಟಗಾರರಿಗೆ ಕೊಟ್ಟ ಗೌರವದ ಸಂಕೇತವಾಗಿದೆ. ಕ್ರೀಡೆಗಳಲ್ಲಿ ಕ್ರೀಡಾ ಮನೋಭಾವದಿಂದ ಭಾಗವಹಿಸಿ ಸೌಹಾರ್ದತೆಯನ್ನು ಸಾರುವ ಏಕ ಮಾತ್ರ ವೇದಿಕೆ ಕ್ರೀಡೆ ಆಗಿರುತ್ತದೆ ಎಂದು ಶುಭ ಹಾರೈಸಿದರು.
ಖ್ಯಾತ ಕ್ರಿಕೆಟ್ ಆಟಗಾರ ನಿತಿನ್ ಹೆಗ್ಡೆ ಬೆಜಕಳ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ಮಿಥುನ್ ಅಧಿಕಾರಿ, ದಿನೇಶ್ ಪೂಜಾರಿ, ದಿವಾಕರ ಕರ್ಕೇರಾ, ನಾರಾಯಣ ಕುಂಟಾಡಿ ಶ್ರೀಮತಿ ಕವಿತಾ ಗುರುಮೂರ್ತಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುದರ್ಶನ್ ಪೂಜಾರಿ, ಯತೀಶ್ ಕುಮಾರ್ ಶ್ರೀಮತಿ ರೂಪ ಯತೀಶ್, ಶ್ರೀಮತಿ ಶಕುಂತಲಾ, ಶ್ರೀಮತಿ ಶಶಿಕಲಾ, ರಮೇಶ್ ಉಪಸ್ಥಿತರಿದ್ದರು.
ಯತೀಶ್ ಎನ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಗಣೇಶ್ ಆಚಾರ್ಯ ವಂದಿಸಿದರು.
