ಕಾರ್ಕಳ

ಕಾರ್ಕಳ: ಮಾನವ ಕಳ್ಳಸಾಗಣೆ ವಿರೋಧಿ ದಿನ- ಉಚಿತ ಕಾನೂನು ಅರಿವು ಮಾಹಿತಿ ಕಾರ್ಯಕ್ರಮ

ತಾಲೂಕು ಕಾನೂನು ಸೇವೆಗಳ ಸಮಿತಿ, ಕಾರ್ಕಳ ಹಾಗು ಕಾರ್ಕಳ ನ್ಯಾಯವಾದಿಗಳ ಆಶ್ರಯದಲ್ಲಿ ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆಯಲ್ಲಿ ವಿಶ್ವ ಮಾನವ ಕಳ್ಳಸಾಗಣೆ ವಿರೋಧಿ ದಿನಾಚರಣೆ ಜು. 30ರಂದು ಜರಗಿತು.

ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಎಸಿಜೆಎಂ ಕಾರ್ಕಳ ಪ್ರಶಾಂತ್ ಜಿ. ನಾಯಕ್ ಉದ್ಘಾಟಿಸಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ನ್ಯಾಯವಾದಿ ಎಂ. ಶ್ವೇತ ವಿಪುಲ್ ತೇಜ್ ರವರು ಮಾನವ ಕಳ್ಳ ಸಾಗಣೆ ಅದರ ಕಾನೂನು ಪರಿಣಾಮಗಳು, ಪೋಕ್ಸೋ ಕಾಯಿದೆ, ವಿದ್ಯಾರ್ಥಿಗಳು ಅನುಸರಿಸಬೇಕಾದ ಮುನ್ನೆಚ್ಚರಿಕೆಯ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಕಾರ್ಕಳ ಅಡ್ಲಿಷನಲ್ ಸಿವಿಲ್ ಜಡ್ಜ್ ಶ್ರೀಮತಿ ನಿತ್ಯ ಗುಜ್ಜಾರ್, ಶ್ರೀ ಮದ್ ಭುವನೇಂದ್ರ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ಆರ್ ನಾರಾಯಣ ಶೆಣೈ, ಪದ್ಮಪ್ರಸಾದ್ ಜೈನ್ ಹಾಗೂ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Related posts

ಕಾರ್ಕಳ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠಕ್ಕೆ ನೂತನ ಸಂಚಾಲಕರ ಆಯ್ಕೆ

Madhyama Bimba

ನೂತನ ಅಧ್ಯಕ್ಷರ ಆಯ್ಕೆಯಿಂದ ಪಕ್ಷಕ್ಕೆ ಬಲ: ಉದಯ ಶೆಟ್ಟಿ ಮುನಿಯಾಲು

Madhyama Bimba

ಸಿಎಂಎ ಫೌಂಡೇಶನ್ ಫಲಿತಾಂಶ ಪ್ರಕಟ: ಕ್ರಿಯೇಟಿವ್ ಸಂಸ್ಥೆಯ 14 ವಿದ್ಯಾರ್ಥಿಗಳ ಸಾಧನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More