ಕಾರ್ಕಳ: ನಿತ್ಯಾಧಾರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕಾರ್ಕಳ ಇದರ 2025-26ನೇ ಸಾಲಿನ ಪ್ರಥಮ ವಾರ್ಷಿಕ ಮಹಾಸಭೆಯು ಸೆ. 14ರಂದು ಕಾರ್ಕಳ ಪ್ರಕಾಶ್ ಹೋಟೆಲ್‌ನಲ್ಲಿ ಜೋಕಿಂ ಮೈಕಲ್ ಹೆಚ್. ಪಿಂಟೊ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಕಾರ್ಯನಿರ್ವಹಣಾಧಿಕಾರಿ ಶರೀಲ್ ಕಸ್ತಲಿನೊ ವಾರ್ಷಿಕ ವರದಿಯನ್ನು ಹಾಗೂ ಲೆಕ್ಕ ಪರಿಶೋಧನೆ ಮಾಡಿದ ಲೆಕ್ಕಪತ್ರಗಳನ್ನು ಮಂಡಿಸಿ ಸಭೆಯ ಒಪ್ಪಿಗೆಯನ್ನು ಪಡೆದರು.
ಈ ಸಂದರ್ಭದಲ್ಲಿ ಸದಸ್ಯರ ಮಕ್ಕಳಾದ 10 ನೇ ತರಗತಿಯಲ್ಲಿ ಗರಿಷ್ಠ ಅಂಕಗಳಿಸಿದ ಸಾನ್ವಿ ಮಾರ್ಟಿಸ್ ಕಣಜಾರು, ಸಿಬಿಎಸ್‌ಸಿ ವಿಭಾಗದಲ್ಲಿ ನೈಝೆಲ್ ಡಿಸೋಜ ಹಿರ್ಗಾನ, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಆನ್ಡ್ರೀಯಾ ಡಿಸಿಲ್ವಾ ಕೇರಾ, ವಾಣಿಜ್ಯ ವಿಭಾಗದಲ್ಲಿ ಆಸ್ಟನ್ ಡಿಸಿಲ್ವಾ ಕೆರಾ, ಮೊದಲಾದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿಶೇಷ ಸಾಧಕರ ವಿಭಾಗದಲ್ಲಿ 10ನೇ ತರಗತಿಯಲ್ಲಿ 624 ಅಂಕಗಳಿಸಿದ ಲೀಸಾ ಬರ್ಬೋಜಾ ಹಿರ್ಗಾನ, ರಾಷ್ಟ್ರಮಟ್ಟದ ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ ಕೇಟ್ಲಿನ್ ಏಂಜಲ್ ಪಿಂಟೊ ಅತ್ತೂರು, ನಾಟಿ ವೈದ್ಯರಾದ ಲಿಗೋರಿ ಡಿಸೋಜ ನಕ್ರೆ, ಸಾಹಿತ್ಯ ಕ್ಷೇತ್ರದಲ್ಲಿ ಪ್ರಮೀಳ ಫ್ಲಾವಿಯ ರಂಜಲ್ ಕಾರ್ಕಳ, ಉಡುಪಿ ಜಿಲ್ಲೆಯ ಪ್ರಥಮ ಮಹಿಳಾ ಪೈಲೆಟ್ ಶೈನಿ ಆಸ್ಮಾ ಸಲ್ದಾನ ಕಣಜಾರು ಇವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಗ್ರೇಸ್ಸಿಯಾ ಡಿಸೋಜ ಸ್ವಾಗತಿಸಿ, ಡೇನಿಯಲ್ ರೇಂಜರ್ ಕಾರ್ಯಕ್ರಮ ನಿರೂಪಿಸಿದರು ಜೆಸಿಂತಾ ಡಿಮೇಲ್ಲೋ ಧನ್ಯವಾದವಿತ್ತರು.
ಜಾರ್ಜ್ ಕೆಸ್ತಲಿನೊ ನಕ್ರೆ, ಮೇಬಲ್ ನಜ್ರೇತ್ ಕಣಜಾರು, ಜೋನ್ ಟೆಲ್ಲೀಸ್ ಅಜೇಕಾರು, ರೋಶನ್ ಡಿಮೇಲ್ಲೊ ಕಾರ್ಕಳ, ವಲೇರಿಯನ್ ಡಿಸಿಲ್ವಾ ಕೇರಾ, ಹರ್ಮನ್ ಕ್ಯಾಸ್ತಲೀನೊ ಕಾರ್ಕಳ, ಅಂತೋನಿ ವೀರಾಂದ ಕಣಜಾರು ಇವರು ಸನ್ಮಾನಿತರ ವ್ಯಕ್ತಿ ಪರಿಚಯವನ್ನು ನೆರವೇರಿಸಿದರು.
ಕಾರ್ಯಕ್ರಮದ ಯಶಸ್ವಿಗೆ ಜೋಸ್ಸಿ ಪಿಂಟೊ, ವಲೇರಿಯನ್ ಕಾಂತಿ ಲೋಬೋ, ಪೋಲಿಟ ಡೀಸೋಜ, ಶೈನಿ ಮಿನೇಜಸ್, ಲೀಶಲ್ ವೇಗಸ್ ಸಹಕರಿಸಿದ್ದರು.
