ಮೂಡುಬಿದಿರೆ

ಸಂಪಿಗೆ ಹಾಲು ಉತ್ಪಾದಕರ ಸಂಘದ ನಿವೃತ ಕಾಯ೯ದಶಿ೯ ಪಿ. ರಾಮಚಂದ್ರರಿಗೆ ಬೀಳ್ಕೊಡುಗೆ

ಮೂಡುಬಿದಿರೆ ಸಮೀಪದ ಸಂಪಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ವಾಷಿ೯ಕ ಮಹಾಸಭೆ ಮತ್ತು ಸಹಕಾರ ಸಂಘದಲ್ಲಿ ಕಳೆದ 26 ವಷ೯ಗಳಿಂದ ಕಾಯ೯ದಶಿ೯ಯಾಗಿ ಹಾಗೂ ಕೃತಕ ಗಭ೯ಧಾರಣ ತಂತ್ರಜ್ಞರಾಗಿ ಕಾಯ೯ನಿವ೯ಹಿಸಿ ಸೇವಾ ನಿವೃತ್ತಿ ಹೊಂದಿರುವ ಪಿ. ರಾಮಚಂದ್ರ ಅವರನ್ನು ದಂಪತಿ ಸಹಿತ ಸನ್ಮಾನ ಮತ್ತು ಬೀಳ್ಕೊಡುಗೆ ಸಮಾರಂಭವು ಸಂಘದ ಸಭಾಂಗಣದಲ್ಲಿ ನಡೆಯಿತು.

ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿದೇ೯ಶಕ ಸುಚರಿತ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ರಾಮಚಂದ್ರ ಅವರು ಸಂಘದ ಬೆಳವಣಿಗೆಗೆ ಸಲ್ಲಿಸಿದ ಸೇವೆ ಸದಾ ಸ್ಮರಣೀಯ ಎಂದರು.

ನಾಗರಾಜ ಕಕೇ೯ರಾ ಅವರು ಅಧ್ಯಕ್ಷತೆ ವಹಿಸಿದ್ದರು.

ದ. ಕ ಹಾಲು ಒಕ್ಕೂಟದ ನಿವೃತ್ತ ಸಹಾಯಕ ವ್ಯವಸ್ಥಾಪಕ ಸುಬ್ಬರಾವ್, ಒಕ್ಕೂಟದ ಮಂಗಳೂರು ವಿಸ್ತರಣಾಧಿಕಾರಿ ಸುಚಿತ್ರ, ಐಶ್ವಯ೯, ಒಕ್ಕೂಟದ ವ್ಯವಸ್ಥಾಪಕಿ ಜಾನೆಟ್ ರೊಸಾರಿಯೋ, ಲೆಕ್ಕ ಪರಿಶೋಧಕರಾಗಿರುವ ಹೆನ್ರಿ ಡಿ’ಸೋಜಾ, ಸಂಪಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಸದಸ್ಯರು ಶುಭ ಹಾರೈಸಿದರು.

ಪ್ರಶಾಂತ್ ಭಂಡಾರಿ ಕಾಯ೯ಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಪಿ. ಜಗದೀಶ ರಾವ್ ವಂದಿಸಿದರು.

Related posts

ಯಕ್ಷದೇವ ಕಲಾಮಂಡಳಿ 29ನೇ ವರ್ಷದ ಯಕ್ಷ ಸಂಭ್ರಮದಲ್ಲಿ ದಾಸಪ್ಪ ರೈಗೆ ಯಕ್ಷದೇವ ಪ್ರಶಸ್ತಿ

Madhyama Bimba

ಕೌಶಲ ಜ್ಞಾನವಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ -ಸವಿತಾ

Madhyama Bimba

ಅ. 28 ರಂದು ಸರಕಾರಿ ನೌಕರರ ಸಂಘದ ಚುನಾವಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More