Blog

ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಮಹಾಸಭೆ: ಸದಸ್ಯರಿಗೆ 9.5% ಲಾಭಾಂಶ ವಿತರಣೆ

ಹಳೆಯಂಗಡಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯು ಹಳೆಯಂಗಡಿಯ ಹರಿ ಓಂ ಸಭಾಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷರಾದ ಎಚ್ ವಸಂತ್ ಬೆರ್ನಾರ್ಡ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿ 2025- 26 ಸಾಲಿನಲ್ಲಿ ಸಂಘವು, 484.78 ಕೋಟಿ ವಹಿವಾಟುಗಳನ್ನು ಮಾಡಿದ್ದು, 54.25 ಲಕ್ಷ ಲಾಭಾಂಶ ಗಳಿಸಿದೆ. ಪ್ರಸ್ತುತ 70 ಲಕ್ಷ ಪಾಲು ಬಂಡವಾಳ, 3184 ಸದಸ್ಯರು, ಒಟ್ಟು44.93 ಕೋಟಿ ರೂಪಾಯಿಗಳು ಠೇವಣಿ ಇದ್ದು,37 ಕೋಟಿ ರೂಪಾಯಿಗಳು ಸಾಲ ನೀಡಲಾಗಿರುತ್ತದೆ, 97.5% ಸಾಲ ವಸೂಲಾತಿ ಮಾಡಿದ್ದು ಈ ಬಾರಿಯೂ ಕೂಡ ಆಡಿಟ್ ವರ್ಗಿಕರಣದಲ್ಲಿ ‘ಎ’ ದರ್ಜೆಯ ಸ್ಥಾನಮಾನ ದೊರಕಿರುತ್ತದೆ ಎಂದರು.
ಸದಸ್ಯರಿಗೆ 9.5 ಶೇಕಡ ಲಾಭಾಂಶ ಘೋಷಣೆ ಮಾಡಲಾಯಿತು.

ಸಂಘದ ಸದಸ್ಯರು ಮೃತರಾದಲ್ಲಿ ಅವರ ಶವ ಸಂಸ್ಕಾರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಎಚ್ ನಾರಾಯಣ ಸನಿಲ್ ಮರಣೋತ್ತರ ನಿಧಿ ಸ್ಥಾಪಿಸಿ, ಪ್ರತಿ ಮರಣದ ಸಂದರ್ಭದಲ್ಲಿ ರೂ 10,000 ನೀಡುವುದೆಂದು ಅವರು ಘೋಷಣೆ ಮಾಡಿದರು.

ಹಳೆಯಂಗಡಿ, ಪಡುಬಿದ್ರೆ, ಕಿನ್ನಿಗೋಳಿ, ಮೂಡಬಿದ್ರೆ ಗಳಲ್ಲಿ ಶಾಖೆಯನ್ನು ಹೊಂದಿದ ಸೊಸೈಟಿಯು ಈ ವರ್ಷ ಉಡುಪಿಯಲ್ಲಿ ಹೊಸದಾಗಿ ಶಾಖೆಯನ್ನು ತೆರೆಯಲು ತಯಾರು ನಡೆಸಿದೆ ಹಾಗೂ ಸೊಸೈಟಿ ಇಷ್ಟು ಸಾಧನೆ ಮಾಡಲು ನಿರ್ದೇಶಕರುಗಳ ಮಾರ್ಗದರ್ಶನ, ಗ್ರಾಹಕರ,ಸದಸ್ಯರ ಸಹಕಾರ ಮತ್ತು ಸಿಬ್ಬಂದಿಗಳ ಶ್ರಮ ಕಾರಣ ಎಂದರು.

ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ತರಗತಿಯಲ್ಲಿ ಉತ್ತಮ ಅಂಕಪಡೆದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ಮತ್ತು ಪ್ರಿಯದರ್ಶಿನಿ ಸ್ವಸಹಾಯ ಸಂಘಗಳಲ್ಲಿ ಉತ್ತಮ ಸಾಧನೆ ಮಾಡಿದ ಎರಡು ಶಾಖೆಯನ್ನು ಗುರುತಿಸಲಾಯಿತು. ಹಾಗೂ ಪಿಎಚ್ ಡಿ ಪದವಿ ಪಡೆದ ಸೊಸೈಟಿ ನಿರ್ದೇಶಕರಾದ ಡಾ. ಶೆರಿಲ್ ಅಯೊನಾ ಐಮನ್ ರವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಸೊಸೈಟಿಯ ಉಪಾಧ್ಯಕ್ಷರಾದ ವಿಜಯ್ ಕುಮಾರ್ ಸನಿಲ್ , ನಿರ್ದೇಶಕರಾದ ಉಮಾನಾಥ್ ಜೆ ಶೆಟ್ಟಿಗಾರ್, ಧನಂಜಯ ಮಟ್ಟು, ಗೌತಮ್ ಜೈನ್, ಗಣೇಶ್ ಪ್ರಸಾದ್ ದೇವಾಡಿಗ, ಜೈ ಕೃಷ್ಣ ಕೋಟ್ಯಾನ್ , ಡಾ. ಶೆರಿಲ್ ಅಯೋನ ಐಮನ್, ರೇಖಾ ಶೆಟ್ಟಿ, ಹರೀಶ್ ಎನ್ ಪುತ್ರನ್, ನವೀನ್ ಸಾಲ್ಯಾನ್ ಪಂಜ, ಮೋಹನ್ ದಾಸ್, ಅನಿಲ್. ಪೂಜಾರಿ ಸಸಿಹಿತ್ಲು, ರಜೀಯಾ ಬಾನು, ಕರಿಯ ಕಾಡಿಗ ಉಪಸ್ಥಿತರಿದ್ದರು.

ಪಡುಬಿದ್ರೆ ಶಾಖಾ ಸಿಬ್ಬಂದಿಯಾದ ರಕ್ಷಿತ್ ರವರು ಪ್ರಾರ್ಥನೆಗೈದರು. ಕಿನ್ನಿಗೋಳಿ ಶಾಖಾ ಪ್ರಬಂಧಕರಾದ ಅಕ್ಷತಾ ಶೆಟ್ಟಿ ನಿರೂಪಿಸಿ, ಹಿರಿಯ ಶಾಖಾ ಪ್ರಬಂಧಕರಾದ ಮೋಹನ್ ದಾಸ್ ರವರು ಸಾಧಕರ ಅಭಿನಂದನಾ ಕಾರ್ಯಕ್ರಮವನ್ನು, ಮೂಡುಬಿದಿರೆ ಶಾಖಾ ಪ್ರಬಂಧಕರಾದ ಅಭಿಷ್ಟಾ ಕುಮಾರಿ ಹಾಗೂ ಪಡುಬಿದ್ರೆ ಶಾಖಾ ಪ್ರಬಂಧಕರಾದ ಅಂಜಲಿ ಉಳ್ಳಾಲ್ ಎಸ್ ವಿದ್ಯಾರ್ಥಿಗಳ ಗೌರವಾರ್ಪಣೆ ಕಾರ್ಯಕ್ರಮವನ್ನು, ಹಳೆಯಂಗಡಿ ಶಾಖಾ ಪ್ರಬಂಧಕರಾದ ಪ್ರಜ್ಞಾಶ್ರೀ ರವರು ಸ್ವಸಹಾಯ ಗುಂಪಿನ ಪದಾಧಿಕಾರಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮವನ್ನುನಿರ್ವಹಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ   ಸ್ವಾಗತಿಸಿ, ಲೆಕ್ಕಗ ಲೋಲಾಕ್ಷಿ ವಂದಿಸಿದರು.

Related posts

ಹಿರ್ಗಾನದ ಆರತಿಯವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

Madhyama Bimba

ಕರಾವಳಿ ರಂಗಾಯಣ : ತಂತ್ರಜ್ಞರು, ಕಲಾವಿದರ ಆಯ್ಕೆ – ಅರ್ಜಿ ಆಹ್ವಾನ

Madhyama Bimba

ಸಂಜೀವ ಸಾಲಿಯಾನ್ ನಿಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More